Advertisement

ಮಳೆ ಸಮಸ್ಯೆ ಪರಿಹರಿಸದ ಪಾಲಿಕೆ ಸಿಬ್ಬಂದಿ

12:22 PM May 15, 2018 | |

ಬೆಂಗಳೂರು: ತುರ್ತು ಸಂದರ್ಭದಲ್ಲಿ ನಗರದ ಜನತೆಯ ಸಹಾಯಕ್ಕೆ ಮುಂದಾಗ ಬೇಕಿದ್ದ ಬಿಬಿಎಂಪಿಯ “ಪ್ರಹರಿ’ ವಾಹನಗಳು ಕೆಟ್ಟು ನಿಂತಿದ್ದು, ಮನೆಗಳಿಗೆ ಮಳೆ ನೀರು ನುಗ್ಗಿ ಜನರಿಗೆ ತೊಂದರೆಯಾಗುತ್ತಿದ್ದರೂ ಸಹಾಯಕ್ಕೆ ಬರುವವರು ಇಲ್ಲದಂತಾಗಿದೆ.

Advertisement

ನಗರದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ತೀವ್ರ ತೊಂದರೆಯಾಗುತ್ತಿದ್ದು, ಪ್ರಮುಖ ರಸ್ತೆಗಳಲ್ಲಿ ಮರಗಳು ಧರೆಗುರುಳಿದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಈ ವೇಳೆ ಸಹಾಯಕ್ಕಾಗಿ ಪಾಲಿಕೆಗೆ ಕರೆ ಮಾಡಿದರೆ ಪ್ರಹರಿಗಳು ದುರಸ್ತಿಯಾಗಿವೆ ಎಂದು ಪರಿಹಾರ ಕಾರ್ಯಗಳಿಗೆ ಮುಂದಾಗುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. 

ಭಾರೀ ಮಳೆ ಮತ್ತು ಗಾಳಿಯಿಂದಾಗಿ ನಗರದ ವಿವಿಧ ಭಾಗಗಳಲ್ಲಿ ಮರಗಳು ಬಿದ್ದು, ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಆ ಭಾಗದ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಪ್ರದೇಶಗಳಲ್ಲಿ ತಕ್ಷಣ ಬಿಬಿಎಂಪಿ ಸಿಬ್ಬಂದಿ ಕಾರ್ಯಚರಣೆಗೆ ಅಗತ್ಯವಿರುವ ಸಾಮಗ್ರಿ ಹೊತ್ತ ಪ್ರಹರಿ ವಾಹನದಲ್ಲಿ ಧಾವಿಸಿ ಮರ ಬಿದ್ದಿದ್ದರೆ

ಮರಕತ್ತರಿಸುವ ಯಂತ್ರ ಬಳಸಿ ಅದನ್ನು ತೆರವು ಮಾಡುವ, ತಗ್ಗುಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ್ದರೆ ಅದನ್ನು ಮೋಟಾರ್‌ ಪಂಪ್‌ ಬಳಸಿ ದುರಸ್ತಿಗೆ ಮುಂದಾಗಬೇಕು. ಆದರೆ, ಬಿಬಿಎಂಪಿಯಲ್ಲಿರುವ ಪಹರಿ ವಾಹನಗಳ ಕೆಟ್ಟುನಿಂತಿದ್ದು, ಇದರಿಂದಾಗಿ ಸಿಬ್ಬಂದಿಗಳು ದುರಸ್ತಿಯ ಗೋಜಿಗೆ ಕೈಕಟ್ಟಿ ಕುಳಿತಿದ್ದಾರೆ.

ಕೆಟ್ಟು ಆರು ತಿಂಗಳಾಯ್ತು!: ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಒಟ್ಟು 3 ಪ್ರಹರಿ ವಾಹನಗಳಿವೆ. ಇವುಗಳಲ್ಲಿ 2 ವಾಹನಗಳು 6 ತಿಂಗಳ ಹಿಂದೆಯೇ ಕೆಟ್ಟುನಿಂತಿದ್ದು, ಅವುಗಳನ್ನು ರಿಪೇರಿ ಮಾಡಿಸಲು ಬಿಬಿಎಂಪಿ ಮುಂದಾಗಿಲ್ಲ. ಈ ಕುರಿತು ಪ್ರಹರಿ ವಾಹನ ಚಾಲಕರು ಬಿಬಿಎಂಪಿ ಸಾರಿಗೆ ವಿಭಾಗದ ಅಧಿಕಾರಿಗಳಿಗೆ ತಿಳಿಸಿದರೇ ಅವರು ತಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುವ ಮೂಲಕ ಈ ವಿಷಯದಲ್ಲಿ ಉದಾಸೀನತೆ ತೋರುತ್ತಿದ್ದಾರೆ ಎಂದು ತಿಳಿದುಬಂದಿದೆ.

Advertisement

ಇನ್ನು ಮಳೆಯಿಂದ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸದಾಕಾಲ ಸುಸ್ಥಿತಿಯಲ್ಲಿಡಬೇಕಾದ ವಾಹನಗಲೇ ಮೂಲೆ ಗುಂಪಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಕೂಡಲೇ ಕೆಟ್ಟು ನಿಂತಿರುವ ಪ್ರಹರಿ ವಾಹನಗಳನ್ನು ರಿಪೇರಿಗೆ ಪಾಲಿಕೆ ಮುಂದಾಗಬೇಕು ಎಂಬುದು ಸಾರ್ವಜನಿಕರು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next