Advertisement

Stray cattle: ಬೀಡಾಡಿ ದನಗಳೇ ಪ್ರತಿಭಟನಕಾರರು!

11:48 PM Aug 22, 2023 | Team Udayavani |

ರಾಜಕೀಯ ಸಮಾವೇಶಗಳಿಗೆ ಹಣ, ಊಟ ನೀಡಿ ಜನರನ್ನು ಕರೆತರವುದು ಹಳೆಯ ಸುದ್ದಿ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ನಡೆಸಲು ಬೀಡಾಡಿ ದನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಬೀಡಾಡಿ ದನಗಳೇ ಇಲ್ಲಿ ಪ್ರತಿಭಟನಾಕಾರರು.

Advertisement

ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಬರೇಲಿಯಲ್ಲಿ ಪಶುಸಂಗೋಪನಾ ಸಚಿವ ಧರ್ಮಪಾಲ್‌ ಸಿಂಗ್‌ ಮತ್ತು ಅವರ ಬೆಂಗಾಲು ವಾಹನಗಳು ಬೀಡಾಡಿ ದನಗಳ ಪ್ರತಿಭಟನೆ ಎದುರಿಸುವಂತಾಯಿತು. ಬೀಡಾಡಿ ದನಗಳ ಸಮಸ್ಯೆ ಕುರಿತು ಸಚಿವರಿಗೆ ಮನವರಿಕೆ ಮಾಡಿಕೊಳ್ಳಲು ಕೋಪೋದ್ರಿಕ್ತರಾದ ಸ್ಥಳೀಯರು ಹೀಗೆ ಮಾಡಿದ್ದರು. ಇದರಿಂದ ಕೆಲವು ಹೊತ್ತು ಸಚಿವರು ರಸ್ತೆಯಲ್ಲೇ ನಿಲ್ಲುವಂತಾಯಿತು. “ನಮ್ಮ ಪಕ್ಷದ ರಥಯಾತ್ರೆಗೆ ಅಡ್ಡಿಪಡಿಸಲು ಬೇಕೆಂದೇ ಬಿಜೆಪಿ ಕಾರ್ಯಕರ್ತರು ಬೀಡಾಡಿ ದನಗಳನ್ನು ಬಿಟ್ಟಿದ್ದಾರೆ’ ಎಂದು ಸಮಾಜವಾದಿ ಪಕ್ಷ ಮುಖ್ಯಸ್ಥ ಅಖೀಲೇಶ್‌ ಯಾದವ್‌ ಆರೋಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next