Advertisement

ಪ್ರಾಧ್ಯಾಪಕರು ವಿದ್ಯಾರ್ಥಿಗಳನ್ನು ಮೆಚ್ಚಿಸಬೇಕು

04:49 PM Apr 20, 2018 | |

ಧಾರವಾಡ: ವಿದ್ಯಾಥಿಗಳನ್ನು ಮೆಚ್ಚುವ ಗುಣ ಧರ್ಮವನ್ನು ಪ್ರಾಧ್ಯಾಪಕರು ಬೆಳಸಿಕೊಂಡಾಗ ಮಾತ್ರ ಅವರಲ್ಲಿನ ಪ್ರತಿಭೆ ಹೊರಬರುತ್ತದೆ ಎಂದು ನಾಡೋಜ ಡಾ| ಪಾಟೀಲ ಪುಟ್ಟಪ್ಪ ಹೇಳಿದರು.

Advertisement

ಕರ್ನಾಟಕ ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಮೊಹರೆ ಹಣಮಂತರಾಯ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳನ್ನು
ಪ್ರೀತಿಯಿಂದ ಕಾಣಬೇಕು. ಹಾಗೆಯೇ ವಿದ್ಯಾರ್ಥಿಗಳು ಗುರುಗಳಿಗೆ ಗೌರವ ತರುವ ನಿಟ್ಟಿನಲ್ಲಿ ಬರೆಯಲು, ಬದುಕಲು
ಕಲಿಯಬೇಕು ಎಂದರು.

ಕನ್ನಡ ಪತ್ರಿಕೋದ್ಯಮದಲ್ಲಿ ಮೊಹರೆ ಹಣಮಂತರಾಯ ಅವರಂತಹ ಪತ್ರಿಕಾ ಸಂಪಾದಕರು ಮತ್ತೆ ಕ್ಷೇತ್ರದಲ್ಲಿ
ಕಾಣಿಸಿಕೊಳ್ಳಲೇ ಇಲ್ಲ. ಅವರ ಆದರ್ಶಗಳು ಇಂದು ಎಲ್ಲರಿಗೂ ಮಾದರಿಯಾಗಿವೆ. ದೊಡ್ಡ ಪತ್ರಿಕೆಯ ಸಂಪಾದಕರಾಗಿ ಹಲವಾರು ದಶಕಗಳ ಕಾಲ ಸೇವೆ ಸಲ್ಲಿಸಿದರೂ ಅವರು ಒಂದು ಮನೆ ಕೂಡ ಕಟ್ಟಿಕೊಳ್ಳಲಿಲ್ಲ. ಪತ್ರಕರ್ತರು ಹಣದ ದಾಸರಾಗಿ ಕೆಲಸ ಮಾಡಬೇಡಿ, ಹಣದ ದಾಸರಾಗದೇ ಗುಣದ ದಾಸರಾಗಿ. ಇದ್ದಷ್ಟು ದಿನ ಮನುಷ್ಯ ಸಮಾಜಕ್ಕೆ ಪ್ರಯೋಜನಕಾರಿ ವ್ಯಕ್ತಿಯಾಗಿ ಬದುಕಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಸಚಿವ ಪ್ರೊ| ಮಲ್ಲಿಕಾರ್ಜುನ ಪಾಟೀಲ ಮಾತನಾಡಿದರು. ಡಾ| ಪಾಟೀಲ ಪುಟ್ಟಪ್ಪ ಅವರನ್ನು ಸನ್ಮಾನಿಸಲಾಯಿತು. ವಿಭಾಗದ ಮುಖ್ಯಸ್ಥ ಡಾ| ಜೆ.ಎಂ. ಚಂದುನವರ ಸ್ವಾಗತಿಸಿದರು. ಭೀಮರಾಯ ದೇಸಾಯಿ ನಿರೂಪಿಸಿದರು. ಕಾವ್ಯಾ ಭಟ್ಟ ಸ್ವಾಗತಿಸಿದರು. ಡಾ| ನಾಗರಾಜ ಹಳ್ಳಿಯವರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next