Advertisement

ಪೌರಕಾರ್ಮಿಕರ ಸಮಸ್ಯೆ: ಶೀಘ್ರ ಪರಿಹಾರಕ್ಕೆ ಸೂಚನೆ

12:30 AM Mar 02, 2019 | |

ಮಂಗಳೂರು: ಪೌರ ಕಾರ್ಮಿಕರ ಖಾಯಂಮಾತಿ, ಇಎಸ್‌ಐ, ಭವಿಷ್ಯನಿಧಿ ಸೇರಿದಂತೆ ಸಮಸ್ಯೆಗಳ ಬಗ್ಗೆ ಮಹಾನಗರ ಪಾಲಿಕೆ ಹಾಗೂ ಜಿಲ್ಲೆಯ ನಗರ ಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್‌ಗಳ ಮುಖ್ಯಾಧಿಕಾರಿಗಳ ಸಭೆಯನ್ನು ಸೋಮವಾರ ನಡೆಸಿ ಪರಿಹಾರ ಕ್ರಮಗಳ ಬಗ್ಗೆ ಒಂದು ತಿಂಗಳೊಳಗೆ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ ಹಿರೇಮಣಿ ಅವರು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಸೂಚಿಸಿದ್ದಾರೆ. 

Advertisement

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಶುಕ್ರವಾರ ಜರಗಿದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ಮಹಾನಗರ ಪಾಲಿಕೆ, ನಗರ ಸಭೆ, ಪುರಸಭೆ ಹಾಗೂ ಪಟ್ಟಣಪಂ.ಗಳಲ್ಲಿ ಬಹಳಷ್ಟು ಪೌರ ಕಾರ್ಮಿಕಹುದ್ದೆಗಳು ಖಾಲಿ ಇವೆ. ಈಗಾಗಲೇ ಪೌರಕಾರ್ಮಿಕರು ಗುತ್ತಿಗೆ, ದಿನಗೂಲಿ ಆಧಾರದಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಖಾಯಂ ಗೊಳಿಸಲು ಕನಿಷ್ಠ  3 ವರ್ಷ ಕೆಲಸ  ಮಾಡಿರಬೇಕು ಎಂಬ ನಿಯಮ ಇದೆ. ಇದಕ್ಕೆ ಪುರಾವೆಯಾಗಿ ಇಎಸ್‌ಐ, ಭವಿಷ್ಯ ನಿಧಿದಾಖಲೆಗಳನ್ನು ನೀಡಲು ಅವಕಾಶ ವಿದೆ. ಆದರೆ ಕೆಲಸ ಮಾಡಿಸಿರುವ ಗುತ್ತಿಗೆದಾರರು ಈ ಸೌಲಭ್ಯಗಳನ್ನು ನೀಡದಿರುವ ಹಿನ್ನೆಲೆಯಲ್ಲಿ ಆ ಪೌರಕಾರ್ಮಿ ಕರು ಖಾಯಮಾತಿ ಅವಕಾಶದಿಂದ ವಂಚಿತರಾಗಿದ್ದಾರೆ. ಆದುದರಿಂದ ಕೂಡಲೇ ಭವಿಷ್ಯ ನಿಧಿ, ಹಾಗೂ ಇಎಸ್‌ಐ ಪಾವತಿಸದಿರುವ ಗುತ್ತಿಗೆ ದಾರರಿಂದ ಇದನ್ನು ವಸೂಲಿ ಮಾಡಿ ಕಾರ್ಮಿಕರ ಹೆಸರಿಗೆ ಜಮೆ ಮಾಡಬೇಕು.

ಪೌರಕಾರ್ಮಿಕರು ಗುತ್ತಿಗೆದಾರ‌ರಡಿಯಲ್ಲಿ ಎಷ್ಟು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ ಎಂಬ ದಾಖಲೆಗಳನ್ನು ಪರಿಶೀಲಿಸ ಬೇಕು ಎಂದರು.

ಪೌರಕಾರ್ಮಿಕರಿಗೆ ನಗರದ ಮಹಾಕಾಳಿಪಡು³ವಿನಲ್ಲಿ ಪ್ರಸ್ತುತ 350 ಚದರ ಅಡಿ ಮನೆ ನಿರ್ಮಿಸಲಾಗಿದ್ದು, ಇದು ವಾಸ ಮಾಡಲು ಇಕ್ಕಟ್ಟಾಗಿದೆ. ಆದುದರಿಂದ ಅವರಿಗೆ ಮನೆ ಬದಲು ನಿವೇಶನ ನೀಡಿ ಸರಕಾರದ ಅನುದಾನವನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ವಾಮಂಜೂರಿನಲ್ಲಿ ಇರುವ ಸರಕಾರಿ ಜಮೀನಿನ ದಾಖಲೆಗಳನ್ನು ಪರಿಶೀಲಿಸಿ ಪೌರಕಾರ್ಮಿಕರಿಗೆ ನಿವೇಶನಕ್ಕೆ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದವರು ಸೂಚಿಸಿದರು.

ಈ ಎಲ್ಲ ಅಂಶಗಳ ಬಗ್ಗೆ ಸೋಮ ವಾರ ಸಭೆ ನಡೆಸಿ ಪರಿಹಾರ ಕ್ರಮಗಳನ್ನು ರೂಪಿಸಿ ಅದರ ಅನುಷ್ಠಾನಕ್ಕೆ ಕೈಗೊಂಡಿ
ರುವ ಕ್ರಮಗಳ ಬಗ್ಗೆ ವರದಿ ಸಲ್ಲಿಸು ವಂತೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಪ್ರಸನ್ನ ಅವರಿಗೆ ಸೂಚಿಸಿದರು.

Advertisement

ಪದೋನ್ನತಿಗೆ ಅರ್ಹರಿರುವ ಪೌರ ಕಾರ್ಮಿಕರನ್ನು ಪರಿಗಣಿಸಿ ಅವರಿಗೆ ಭಡ್ತಿ ನೀಡಬೇಕು. ಒಂದೊಮ್ಮೆ ಇವರನ್ನು ಕಡೆಗಣಿಸಿ ಇತರರಿಗೆ ಪದೋನ್ನತಿ ನೀಡಿದರೆ ಅಂತಹ ಪ್ರಕರಣಗಳನ್ನು ನನ್ನ ಗಮನಕ್ಕೆ ತನ್ನಿ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದವರು ಸೂಚಿಸಿದರು.

ಪಾಲಿಕೆ ಸ್ಥಾಯೀ ಸಮಿತಿ ಅಧ್ಯಕ್ಷ ನವೀನ್‌ ಡಿ’ಸೋಜಾ, ಸದಸ್ಯೆ ಅಪ್ಪಿ, ಪಾಲಿಕೆ ಉಪ ಆಯುಕ್ತೆ ಗಾಯತ್ರಿ ನಾಯಕ್‌, ಆರೋಗ್ಯಾಧಿಕಾರಿ ಡಾ| ಮಂಜಯ್ಯ ಶೆಟ್ಟಿ ಉಪಸ್ಥಿತರಿದ್ದರು.

ಧರಣಿ, ಹುದ್ದೆಯಿಂದ ತೆರವಿಗೆ ಸೂಚನೆ 
ನೈರ್ಮಲ್ಯ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಭಾಸ್ಕರ್‌ ಪೌರಕಾರ್ಮಿಕರಿಗೆ ಅವಾಚ್ಯ ಪದಗಳಿಂದ ನಿಂದಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ,ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಪೌರಕಾರ್ಮಿಕರ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಅನಿಲ್‌ ಕುಮಾರ್‌ ಅವರ ನೇತೃತ್ವದಲ್ಲಿ ಆಯೋಗದ ಸದಸ್ಯರ ಮುಂದೆ ಧರಣಿ ನಡೆಸಲಾಯಿತು. ಈ ಬಗ್ಗೆ ವಿವರ ನೀಡುವಂತೆ ಪಾಲಿಕೆ ಉಪ ಆಯುಕ್ತರಿಗೆ (ಕಂದಾಯ) ಸದಸ್ಯರು ಸೂಚಿಸಿ ದರು. ಭಾಸ್ಕರ್‌ಅವರನ್ನು ನೈರ್ಮಲ್ಯ ನಿರೀಕ್ಷಕ ಹುದ್ದೆಯಿಂದ ತೆರವುಗೊಳಿಸಿ ಮೂಲಹುದ್ದೆ ಪ್ರಥಮದರ್ಜೆ ಗುಮಾಸ್ತ ಹುದ್ದೆಗೆ ಮರಳಿ ನಿಯುಕ್ತಿಗೊಳಿಸಲು ಪಾಲಿಕೆ ಉಪ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next