ವಿಧಾನಸಭೆ: ರಾಜ್ಯದ ತಾಲೂಕು ಕೇಂದ್ರಗಳಲ್ಲಿ ಡಯಾಲಿಸಿಸ್ ಕೇಂದ್ರಗಳಲ್ಲಿ ಸಮರ್ಪಕ ಸೇವೆ ಸಿಗುತ್ತಿಲ್ಲ. ಅಗತ್ಯ ಸಲಕರಣೆ ಇಲ್ಲ, ಅಲ್ಲಿ ಕೆಲಸ ಮಾಡುವವರಿಗೆ ವೇತನ ಸಿಗುತ್ತಿಲ್ಲ ಎಂಬ ವಿಚಾರ ಸ್ಪೀಕರ್ ಸಹಿತ ಪಕ್ಷಾತೀತವಾಗಿ ಪ್ರಸ್ತಾಪವಾಯಿತು. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಜನಪರವಾದ ಕಾರ್ಯಕ್ರಮ ಯಾವುದೇ ಅಡೆತಡೆ ಇಲ್ಲದೆ ನಡೆಯುವಂತೆ ಮಾಡಿ. ಪರ್ಯಾಯ ಕ್ರಮ ಶೀಘ್ರವಾಗಿ ಕೈಗೊಳ್ಳಿ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಸರ್ಕಾರವು ಪ್ರತಿ ಡಯಾಲಿಸಿಸ್‌ಗೆ 1155 ರೂ. ವೆಚ್ಚ ಮಾಡುತ್ತಿದೆ. ಡಯಾಲಿಸಿಸ್ ಕೇಂದ್ರಗಳ ನಿರ್ವಹಣೆ ವಹಿಸಿದ್ದ ಎರಡು ಕಂಪನಿಗಳಲ್ಲಿ ಬಿ.ಆರ್.ಶೆಟ್ಟಿ ಅವರಿಗೆ ಸೇರಿದ ಸಂಸ್ಥೆ ಆರ್ಥಿಕ ಸಂಕಷ್ಟದಿಂದ ನಿರ್ವಹಣೆ ಮಾಡುವುದು ಸಮಸ್ಯೆ ಯಾಗುತ್ತಿದೆ. ಹೀಗಾಗಿ, ಸರ್ಕಾರ ಪರ್ಯಾಯ ಕ್ರಮಗಳ ಬಗ್ಗೆ ಈಗಾಗಲೇ ಕಾರ್ಯಪ್ರವೃತ್ತವಾಗಿದ್ದು ಆದಷ್ಟು ಶೀಘ್ರ ಜನರು ಹಾಗೂ ಜನಪ್ರತಿನಿಧಿಗಳು ವಿಶ್ವಾಸಪೂರ್ವ ವಾಗಿ ಸೇವೆ ಪಡೆಯುವ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭರವಸೆ ನೀಡಿದರು. nಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆವರು ಸಹ ಈ ಬಗ್ಗೆ ಸರ್ಕಾರ ಅಗತ್ಯ ಗಮನಹರಿಸಬೇಕು ಎಂದು ಸೂಚನೆ ನೀಡಿದರು.
ಇದನ್ನೂ ಓದಿ:10 ದಿನದಲ್ಲಿ ಕಲ್ಯಾಣ ಕರ್ನಾಟಕ ಮಂಡಳಿ: ಬಸವರಾಜ ಬೊಮ್ಮಾಯಿ
ಬಿಜೆಪಿಯ ಡಿ.ಎಸ್.ಸುರೇಶ್, ಕಾಂಗ್ರೆಸ್‌ನ ಮಹಾಂತೇಶ್ ಕೌಜಲಗಿ, ಅಮರೇಗೌಡ ಬಯ್ನಾ ಪುರ, ಶಿವಾನಂದ ಪಾಟೀಲ್ ಅವರು, ಡಯಾಲಿಸಿಸ್ ಕೇಂದ್ರಗಳಲ್ಲಿ ಕೆಲಸ ಮಾಡುವರಿಗೆ ಆರು ತಿಂಗಳಿನಿಂದ ವೇತನ ಸಿಗುತ್ತಿಲ್ಲ. ನಿರ್ವಹಣೆ ಗುತ್ತಿಗೆ ಒಪ್ಪಂದ ಮಾಡಿಕೊಂಡವರಿಗೆ ಸರ್ಕಾರದ ಕಡೆಯಿಂದ ಹಣ ಹೋಗಿದ್ದರೂ ಕೆಲಸ ಮಾಡುವವರಿಗೆ ಸಿಕ್ಕಿಲ್ಲ ಎಂದು ತಿಳಿಸಿದರು. ಡಾ.ಕೆ. ಸುಧಾಕರ್ ಅವರು, ಡಯಾಲಿಸಿಸ್ ಕೇಂದ್ರಗಳಲ್ಲಿನ ಸಮಸ್ಯೆ ನಮ್ಮ ಗಮನಕ್ಕೆ ಇದೆ. ಇದೇ ಕಾರಣಕ್ಕೆ ಆಗಸ್ಟ್‌ನಿಂದ ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ ಅಲ್ಲಿನ ಸಿಬ್ಬಂದಿಗೆ ವೇತನ ನೇರವಾಗಿ ಖಾತೆಗೆ ಜಮೆ ಮಾಡಲಾಗುತ್ತಿದೆ ಎಂದೂ ಹೇಳಿದರು.
ಮೇಲ್ದರ್ಜೆಗೆ ಕ್ರಮ:ಬಿಜೆಪಿಯ ದೊಡ್ಡನಗೌಡ ಪಾಟೀಲ್ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವ ಡಾ.ಕೆ.ಸುಧಾಕರ್, 250 ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾಪ ಸರ್ಕಾ ರದ ಮುಂದಿದ್ದು ಪ್ರತಿ ತಾಲೂಕಿನ ಒಂದಾ ದರೂ ಪ್ರಾಥಮಿಕ ಚಿಕಿತ್ಸಾ ಕೇಂದ್ರ ಸಕಲ ಸೌಲಭ್ಯ ಸಹಿತ ಮೇಲ್ದರ್ಜೆಗೇರಲಿದೆ ಎಂದು ಹೇಳಿದರು.