ಉಡುಪಿ: ನಾವು ಧರ್ಮವನ್ನು ಆಚರಣೆ ಮಾಡುತ್ತೇವೆ. ಅದನ್ನು ಎಷ್ಟು ಪಾಲಿಸುತ್ತಿದ್ದೇವೆ? ನಾವು ಮಾಡುವ ಕೆಲಸ, ಮನಸ್ಸು, ಆತ್ಮ ಪರಿಶುದ್ಧವಾಗಿರಬೇಕು. ಅದು ನಮ್ಮ ರಕ್ತದಲ್ಲಿ ಸೇರಿಕೊಂಡಿರಬೇಕು. ಆದರೆ ನಾವು ಈಗ ಆಧುನಿಕ ಜೀವನ ದಲ್ಲಿ ವ್ಯಸ್ಥರಾಗಿದ್ದೇವೆ. ಖರ್ಚು ವೆಚ್ಚ ಜಾಸ್ತಿ ಆಗುತ್ತಿದೆ. ಅನೇಕ ಆಕರ್ಷಣೆಯ ವಸ್ತುಗಳನ್ನು ನೋಡಿ ದಾಸರಾಗದೆ ಅದರಲ್ಲಿ ನಿಯಂತ್ರಣ ಸಾಧಿಸ ಬೇಕಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಹೇಳಿದರು.
ಪರ್ಕಳ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸುವರ್ಣ ಮಹೋತ್ಸವದ ಸುವರ್ಣ ಸಂಗಮದ ಅಂಗವಾಗಿ ಮಂಗಳವಾರ ನಡೆದ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರೂ ದೈನಂದಿನ ವ್ಯವಹಾರದಲ್ಲಿ ತಮ್ಮ ತಮ್ಮ ಕರ್ತವ್ಯ, ಕರ್ಮವನ್ನು ಸರಿಯಾಗಿ ಮಾಡಿದರೆ ಆತನಿಗೆ ದೇವರ ಅನುಗ್ರಹವಿರುತ್ತದೆ. ಮಾತ್ರವಲ್ಲದೆ ದುಡಿಮೆಯ ದಾರಿ ತೋರಿಸುತ್ತಾನೆ ಎಂದರು.
ಉದ್ಯಮಿಗಳಾದ ಡಾ| ಜಿ.ಶಂಕರ್, ಪ್ರಕಾಶ ಶೆಟ್ಟಿ, ರಮೇಶ ಬಂಗೇರ, ಪ್ರಕಾಶ ಶೆಣೈ, ರಾಮಚಂದ್ರ ಠಾಕೂರ್, ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ, ಮಾಜಿ ಶಾಸಕ ಕೆ. ರಘುಪತಿ ಭಟ್, ಯುಪಿಸಿಎಲ್ ಹಿರಿಯ ಅಧಿಕಾರಿ ಕಿಶೋರ ಆಳ್ವ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ವಿಲಾಸ್ ನಾಯಕ್, ರೋಟರಿ ಜಿಲ್ಲೆ 3182 ಡಿಜಿಇ ಅಭಿನಂದನ್ ಶೆಟ್ಟಿ, ಜಿಲ್ಲಾ ಮೀನು ಮಾರಾಟ ಫೆೆಡರೇಶನ್ ಅಧ್ಯಕ್ಷ ಯಶಪಾಲ ಸುವರ್ಣ, ಬಡಗಬೆಟ್ಟು ಫ್ರೆಂಡ್ಸ್ ಅಧ್ಯಕ್ಷ ಸಂದೀಪ್ ಶೆಟ್ಟಿ, ಪರ್ಕಳ ರೋಟರಿ ಅಧ್ಯಕ್ಷೆ ಸುಶೀಲ ಪೂಂಜಾ ಮುಖ್ಯ ಅತಿಥಿಗಳಾಗಿದ್ದರು. ಸುವರ್ಣ ಮಹೋತ್ಸವ ಸಮಿತಿ ಗೌರವ ಅಧ್ಯಕ್ಷರಾದ ಶ್ರೀನಿವಾಸ ಉಪಾಧ್ಯ, ಕಬ್ಯಾಡಿ ಜಯರಾಮ ಆಚಾರ್ಯ, ಪಿ.ಬಾಲಕೃಷ್ಣ ನಾಯಕ್, ದಿನೇಶ ಶೆಟ್ಟಿ ಹೆರ್ಗ, ಅಧ್ಯಕ್ಷ ಮಹೇಶ ಠಾಕೂರ್, ಕೋಶಾಧಿಕಾರಿ ಪ್ರಮೋದ ಕುಮಾರ್ ಉಪಸ್ಥಿತರಿದ್ದರು.
ಸಂಚಾಲಕ ದಿಲೀಪ್ ರಾಜ್ ಹೆಗ್ಡೆ ಸ್ವಾಗತಿಸಿ, ಸಾಂಸ್ಕೃತಿಕ ಕಾರ್ಯದರ್ಶಿ ಗಣೇಶ ಪಾಟೀಲ್ ಪ್ರಸ್ತಾವನೆಗೈದರು. ಹೆರ್ಗ ಹರಿಪ್ರಸಾದ ಭಟ್ ಕಾರ್ಯ ಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ವಂದಿಸಿದರು.