ಬೆಂಗಳೂರು: ಮಣಿಪಾಲ್ ಆಸ್ಪತ್ರೆಯು ಕ್ಯಾನ್ಸರ್ ರೋಗವನ್ನು ಸೋಲಿಸಿ ಬದುಕುಳಿದವರನ್ನು ಗೌರವಿಸಲು “ದಿ ಪವರ್ ಟು ಹೀಲ್” ಎಂಬ ಅರ್ಥಪೂರ್ಣ ಮತ್ತು ಸ್ಪೂರ್ತಿದಾಯಕ ಕಾರ್ಯಕ್ರಮವನ್ನು ಆಯೋಜಿಸಿತು. ಬದುಕುಳಿದ ಜನರು ತಮ್ಮ ವಿಭಿನ್ನ ಅನುಭವಗಳನ್ನು ಹಂಚಿಕೊಂಡರು, ಮತ್ತು ಈ ಅಗ್ನಿಪರೀಕ್ಷೆಯ ಸಮಯದಲ್ಲಿ ಸಕಾರಾತ್ಮಕ ಮನಸ್ಥಿತಿಯನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಎತ್ತಿ ತೋರಿಸಿದರು. ಅಂತಹ ಕಠಿಣ ಪರಿಸ್ಥಿತಿಯ ವಿರುದ್ಧ ಹೋರಾಡಲು ದೃಢವಾದ ಸಂಕಲ್ಪ ಮತ್ತು ಬದುಕುವ ಇಚ್ಛೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಅವರೆಲ್ಲರೂ ಒಟ್ಟಾಗಿ ಒಪ್ಪಿಕೊಂಡರು.
ಓಲ್ಡ್ ಏರ್‌ಪೋರ್ಟ್ ರೋಡ್‌ನ ಮಣಿಪಾಲ್ ಆಸ್ಪತ್ರೆಯು ಕ್ಯಾನ್ಸರ್ ಆರೈಕೆಯಲ್ಲಿ ಉತ್ತಮ ಯಶಸ್ಸನ್ನು ಸಾಧಿಸಿದೆ. ಹಾಗಾಗಿ, ಆಸ್ಪತ್ರೆಯು ಆಂಕೊಲಾಜಿಯ ಅಡಿಯಲ್ಲಿ ಬರುವ ವಿವಿಧ ವಿಭಾಗಗಳ ಕ್ಯಾನ್ಸರ್ ನಿಂದ ಬದುಕುಳಿದವರಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಮತ್ತು ಅವರ ವೈದ್ಯರಿಗೆ ಧನ್ಯವಾದ ಹೇಳಲು ಕಾರ್ಯಕ್ರಮವನ್ನು ಆಯೋಜಿಸಿತು.
ಟಿಶ್ಯೂ ಮತ್ತು ಮೂಳೆ ಸಾರ್ಕೋಮಾ, ಸ್ತನ ಕ್ಯಾನ್ಸರ್, ಲ್ಯುಕೇಮಿಯಾ (ರಕ್ತದ ಕ್ಯಾನ್ಸರ್ ನ ಒಂದು ವಿಧ), ಹಾಡ್ಗ್ಕಿನ್ಸ್ ಲಿಂಫೋಮಾ (ಲಿಂಫ್ ಸಿಸ್ಟಮ್ ನಲ್ಲಿ ಕ್ಯಾನ್ಸರ್), ಮತ್ತು ರೆಟಿನೋಬ್ಲಾಸ್ಟೊಮಾ (ರೆಟಿನಾದಲ್ಲಿ ಪ್ರಾರಂಭವಾಗುವ ಕಣ್ಣಿನ ಕ್ಯಾನ್ಸರ್) ನಂತಹ ವಿವಿಧ ಕ್ಯಾನ್ಸರ್ ಗಳಿಂದ ಬದುಕುಳಿದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕೊಯಮತ್ತೂರಿನ ಆಟೋಮೊಬೈಲ್ ಉದ್ಯಮದಲ್ಲಿ ಮಾಜಿ ನಿರ್ದೇಶಕರಾಗಿದ್ದ 76 ವರ್ಷದ ನಂದಕಿಶೋರ್ ಅವರ ಪ್ರಕರಣ ಇಲ್ಲಿ ಪ್ರಮುಖವಾಗಿತ್ತು.
ಜೂನ್ 2023 ರಲ್ಲಿ ಅವರಿಗೆ ಗ್ಯಾಸ್ಟ್ರಿಕ್ ಅಡೆನೊಕಾರ್ಸಿನೋಮ (ಒಂದು ರೀತಿಯ ಹೊಟ್ಟೆಯ ಕ್ಯಾನ್ಸರ್) ಇರುವುದು ಪತ್ತೆಯಾಯಿತು. ಇದು ಅವರ ಜೀವನದ ಎರಡನೇ ಕ್ಯಾನ್ಸರ್ ಆಗಿತ್ತು. ಅವರು ಈ ಹಿಂದೆ 1996 ರಲ್ಲಿ ವಿಕಿರಣ ಚಿಕಿತ್ಸೆಯೊಂದಿಗೆ ಲಾರಿಂಜಿಯಲ್ ಕ್ಯಾನ್ಸರ್ ((ಗಂಟಲಿನ ಬಳಿ ಧ್ವನಿ ಪೆಟ್ಟಿಗೆಯಲ್ಲಿ ಕ್ಯಾನ್ಸರ್) ವಿರುದ್ಧ ಹೋರಾಡಿ ಜಯ ಸಾಧಿಸಿದ್ದರು. ಹಠಾತ್ ತೂಕ ಕಡಿಮೆಯಾಗಿ ರಕ್ತಹೀನತೆ ಮತ್ತು ತಿನ್ನುವ ತೊಂದರೆಯಂತಹ ಲಕ್ಷಣಗಳು ಕಾಣಿಸಿಕೊಂಡ ನಂತರ, ನಂದಕಿಶೋರ್ ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿದರು. ಅಲ್ಲಿ ಡಾ. ಸೂರಜ್ ಮಂಜುನಾಥ್, ಕನ್ಸಲ್ಟೆಂಟ್ – ಸರ್ಜಿಕಲ್ ಆಂಕೊಲಾಜಿ ಮತ್ತು ರೋಬೋಟಿಕ್ ಸರ್ಜರಿ, ಇವರು ಕ್ಯಾನ್ಸರ್ ಇರುವುದನ್ನು ದೃಢಪಡಿಸಿದರು.
ಅವರು 6 ರಿಂದ 7 ತಿಂಗಳವರೆಗೆ ಸಮಗ್ರ ಚಿಕಿತ್ಸೆಗೆ ಒಳಗಾದರು. ಇದರಲ್ಲಿ, ಡಾ. ಅಮಿತ್ ರೌಥನ್, HOD ಮತ್ತು ಕನ್ಸಲ್ಟೆಂಟ್, ಮೆಡಿಕಲ್ ಆಂಕೊಲಾಜಿ, ಹೆಮಟಾಲಜಿ ಮತ್ತು ಹೆಮಟೊ-ಆಂಕೊಲಾಜಿ, ಇವರು ಒದಗಿಸಿದ ನಿಯೋಡ್ಜುವಂಟ್ ಕಿಮೊಥೆರಪಿ (ಟ್ಯೂಮರ್ ಅನ್ನು ಶಸ್ತ್ರಚಿಕಿತ್ಸೆಯಿಂದ ಹೊರತೆಗೆಯುವ ಮೊದಲು ಕೀಮೋಥೆರಪಿಯ ನೀಡುವುದು) ಮತ್ತು ನಂತರ ಟ್ಯೂಮರ್ ಅನ್ನು ತೆಗೆದುಹಾಕಲು, ಡಾ. ಸೂರಜ್ ಮಂಜುನಾಥ್, ಕನ್ಸಲ್ಟೆಂಟ್ – ಸರ್ಜಿಕಲ್ ಆಂಕೊಲಾಜಿ ಮತ್ತು ರೊಬೊಟಿಕ್ ಸರ್ಜರಿ, ಇವರಿಂದ ರೋಬೋಟಿಕ್ ಶಸ್ತ್ರಚಿಕಿತ್ಸೆಯನ್ನು ಪಡೆದರು. ನಂತರ ಇನ್ನಷ್ಟು ಕೀಮೋಥೆರಪಿ ಮತ್ತು ಇಮ್ಯುನೊಥೆರಪಿಗೆ ಒಳಗಾದರು.
ಡಾ.ಸೂರಜ್ ಮಂಜುನಾಥ್ ಮಾತನಾಡಿ, “ಅವರಿಗೆ ವಯಸ್ಸಾಗಿತ್ತು, ಹಿಂದಿನ ಕ್ಯಾನ್ಸರ್ ಇತಿಹಾಸ ಮತ್ತು ಅಧಿಕ ರಕ್ತದೊತ್ತಡದಂತಹ ಇತರ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರೂ ಕೂಡ, ಶ್ರೀ ನಂದಕಿಶೋರ್ ಅವರು ಕನಿಷ್ಟ ಅಪಾಯಕಾರಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ ಮೂಲಕ ಕೇವಲ ಸ್ವಲ್ಪ ಮಟ್ಟದ ನೋವಿನೊಂದಿಗೆ ವೇಗವಾಗಿ ಚೇತರಿಸಿಕೊಂಡರು.”
“ಅವರ ಕುಟುಂಬ, ವಿಶೇಷವಾಗಿ ಅವರ ಪತ್ನಿ ಮತ್ತು ಮಗಳು, ಅವರ ಚಿಕಿತ್ಸೆಯ ಉದ್ದಕ್ಕೂ ಜೊತೆಗಿದ್ದರು ಮತ್ತು ಇದು ಅವರ ಯಶಸ್ವಿ ಚೇತರಿಕೆಗೆ ಪ್ರಮುಖ ಕಾರಣ ಎಂದು ಅವರು ನಂಬುತ್ತಾರೆ. ಯಾವಾಗಲೂ ಆರೋಗ್ಯಕರ ಸಸ್ಯಾಹಾರವನ್ನು ಸೇವಿಸಿ, ನಿಯಮಿತವಾಗಿ ವ್ಯಾಯಾಮ ಮಾಡುವ ಮತ್ತು ಅತಿಯಾಗಿ ತಿನ್ನುವುದನ್ನು ತಪ್ಪಿಸುವ ಅಭ್ಯಾಸವನ್ನು ಹೊಂದಿದ್ದ ನಂದಕಿಶೋರ್ ಅವರು ಚಿಕಿತ್ಸೆಯ ನಂತರ ತಮ್ಮ 80% ಆರೋಗ್ಯವನ್ನು ಮರಳಿ ಪಡೆದಿದ್ದಾರೆ ಮತ್ತು ತಮ್ಮ ದೈನಂದಿನ ಚಟುವಟಿಕೆಗಳನ್ನು ಮತ್ತು ತಮಗೆ ಇಷ್ಟವಾದ ಡ್ರೈವಿಂಗ್ ಅನ್ನು ಮಾಡುವುದನ್ನು ಶುರುಮಾಡಿದ್ದಾರೆ” ಎಂದು ಡಾ. ಅಮಿತ್ ರೌಥನ್ ತಿಳಿಸಿದರು.
ನಂದಕಿಶೋರ್ ಅವರು ತಮಗೆ ಸಿಕ್ಕಿದ ಆರೈಕೆಗಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಆರಂಭಿಕ ಹಂತದಲ್ಲಿ ರೋಗವನ್ನು ಪತ್ತೆಹಚ್ಚುವುದು, ಆತ್ಮವಿಶ್ವಾಸ ಕಾಪಾಡಿಕೊಳ್ಳುವುದು ಮತ್ತು ವೈದ್ಯಕೀಯ ಸಲಹೆಯನ್ನು ಅನುಸರಿಸುವ ಪ್ರಾಮುಖ್ಯತೆ ಬಗ್ಗೆ ಒತ್ತಿ ಹೇಳಿದರು. ಇತರ ದೀರ್ಘಕಾಲ ಇರುವ ರೋಗದಂತೆ ಕ್ಯಾನ್ಸರ್ ಅನ್ನು ಕೂಡ ಗುಣಪಡಿಸಬಹುದಾದ ಕಾಯಿಲೆಯಾಗಿ ನೋಡಲು ಅವರು ಇತರರನ್ನು ಪ್ರೋತ್ಸಾಹಿಸುತ್ತಾರೆ. ಹಾಗೆಯೇ, ವೈದ್ಯರಲ್ಲಿ, ಅವರು ನೀಡುವ ಚಿಕಿತ್ಸೆಯಲ್ಲಿ ಜೊತೆಗೆ ದೇವರಲ್ಲಿ ನಂಬಿಕೆ ಇಡಲು ಅವರು ಸಲಹೆ ನೀಡುತ್ತಾರೆ.
ಬದುಕುಳಿದವರು ಕ್ಯಾನ್ಸರ್ ವಿರುದ್ಧ ಹೋರಾಡಿ ತಮ್ಮ ಜೀವನವನ್ನು ಮರಳಿ ಪಡೆದ ಅನುಭವಗಳನ್ನು ಹಂಚಿಕೊಳ್ಳುವುದರೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.