Advertisement
ತಾಲೂಕಿನ ಶೆಡಬಾಳ (ಗರಗ) ಗ್ರಾಮದಲ್ಲಿ 110/11 ಕೆ.ವ್ಹಿ. ವಿದ್ಯುತ್ ವಿತರಣಾ ಕೇಂದ್ರದ ಶಂಕು ಸ್ಥಾಪನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ಚುನಾವಣೆ ವೇಳೆಗೆ 20 ಸಾವಿರ ಮೆ.ವ್ಯಾ.ನಷ್ಟು ವಿದ್ಯುತ್ ಸಾಮರ್ಥಯ ರಾಜ್ಯ ಹೊಂದಲಿದೆ ಎಂದರು.
Related Articles
Advertisement
ತಾಲೂಕಿಗೊಂದರಂತೆ ಟ್ರಾನ್ಸ್‌ಫಾರ್ಮರ್ ಬ್ಯಾಂಕ್: ನಾನೂ ಕೂಡ ರೈತನ ಮಗ. ಚಿಕ್ಕ ವಯಸ್ಸಿನಲ್ಲೇ ರಾಜಕೀಯ ಪ್ರವೇಶ ಮಾಡಿದ ಹಿನ್ನೆಲೆಯಲ್ಲಿ ನಮ್ಮ ತಂದೆ ವ್ಯವಸಾಯ ಮಾಡುತ್ತಿದ್ದು, ಹೀಗಾಗಿ ರೈತರ ಕಷ್ಟಗಳು ನನಗೂ ಗೊತ್ತಿದೆ. ಅದೇ ಕಾರಣಕ್ಕೆ ಅಕ್ರಮ-ಸಕ್ರಮ ಯೋಜನೆ ಅಡಿ ರೈತರ 5 ಲಕ್ಷ ಅಕ್ರಮ ಪಂಪಸೆಟ್‌ಗಳನ್ನು ಸಕ್ರಮ ಮಾಡುವ ಕೆಲಸ ಮಾಡುತ್ತಿದೆ.
ಇದಲ್ಲದೇ ಪ್ರತಿ ತಾಲೂಕಿನಲ್ಲಿ ಟ್ರಾನ್ಸ್‌ಫಾರ್ಮರ್ ದುರಸ್ತಿ ಕೇಂದ್ರಗಳನ್ನು ಆರಂಭಿಸಲಾಗುವುದು. ಈಗಾಗಲೇ 140 ದುರಸ್ತಿ ಕೇಂದ್ರಗಳು ಕಾರ್ಯಾರಂಭ ಮಾಡಿವೆ. ಇದರ ಜೊತೆಗೆ ಪ್ರತಿ ತಾಲೂಕಿಗೆ ಒಂದರಂತೆ ಟ್ರಾನ್ ಫಾರ್ಮರ್ ಬ್ಯಾಂಕ್ ಆರಂಭಿಸಲಾಗುವುದು ಎಂದರು.
ಶೆಟ್ಟರ್‌ಗೆ ಪ್ರಶ್ನಿಸುವ ಶಕ್ತಿಯಿಲ್ಲ: ಬಿಜೆಪಿ ಪರಿವರ್ತನಾ ರ್ಯಾಲಿ ಮಾಡುತ್ತಿದ್ದು, ಇದರಿಂದ ಪರಿವರ್ತನೆ ಆಗಲಿ. ಅದರಿಂದ ನಮಗೇನೂ ಬೇಜಾರಿಲ್ಲ. ಅವರೆಲ್ಲ ಪರಿವರ್ತನೆ ಮಾಡಿಕೊಳ್ಳಲೇಬೇಕು ಎಂದ ಸಚಿವರು, ವಿಪಕ್ಷ ನಾಯಕ ಜಗದೀಶ ಶೆಟ್ಟರ್ ಅವರಿಗೆ ಸರಕಾರವನ್ನು ಪ್ರಶ್ನಿಸುವ ಶಕ್ತಿಯಿಲ್ಲ.
ವಿಪಕ್ಷದಲ್ಲಿ ಇದ್ದುಕೊಂಡು ಸದನದಲ್ಲಿ ಸರಕಾರದ ತಪ್ಪು, ಸವಾಲು ಹಾಕುವ ಕೆಲಸ ಮಾಡಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಇಂಧನ ಇಲಾಖೆಯಲ್ಲಿ ಕಲ್ಲಿದ್ದಲು ಹಗರಣ ಆಗಿದೆ ಎಂಬುದಾಗಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಸದನದಲ್ಲಿ ವಿರೋಧ ಪಕ್ಷದ ಬಿಜೆಪಿಯವರು ಈವರೆಗೂ ಬಾಯಿ ತೆಗೆದಿಲ್ಲ.
ಈ ರೀತಿಯ ಆಧಾರ ರಹಿತ ಮಾತುಗಳನ್ನು ಆಡಬೇಡಿ ಎಂದು ಸಲಹೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, ತಾಪಂ ಅಧ್ಯಕ್ಷ ಮಲ್ಲನಗೌಡ ಭಾವಿಕಟ್ಟಿ, ಹೆಸ್ಕಾಂ ಎಂಡಿ ಜಾವೇದ ಅಖ್ತರ್, ಬಾಗಲಕೋಟೆ ವಿಭಾಗದ ಮುಖ್ಯ ಎಂಜನಿಯರ್ ನೀಲಾ ನಾಯ್ಕ, ರಮೇಶ ಬೆಂಡಿಗೇರಿ ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ಇದ್ದರು.