Advertisement
ಭಾರತೀಯ ರೈಲ್ವೆ ಇಲಾಖೆಯೊಂದಿಗೆ ಅಂಚೆ ಇಲಾಖೆ ಒಪ್ಪಂದ ಮಾಡಿಕೊಂಡಿದ್ದು, ಸೆಂಟ್ರೆಲ್ ರೈಲ್ವೆ ವಿಭಾಗದಲ್ಲಿ ಈಗಾಗಲೇ ಈ ಪಾರ್ಸೆಲ್ ಸೇವೆ ಯಶಸ್ವಿ ಕಾರ್ಯಾರಂಭ ಮಾಡಿದೆ. ಈ ಸೇವೆಯ ಪ್ರಾಯೋಗಿಕ ಕಾರ್ಯ ದಕ್ಷಿಣ ಭಾರತದಲ್ಲಿ ಬೆಂಗಳೂರಿನಲ್ಲಿ ನಡೆದಿದೆ.ಆರಂಭಿಕ ಹಂತದಲ್ಲಿ ಅಗರಬತ್ತಿ ಸೇರಿದಂತೆ ಇನ್ನಿತರ ಜವಳಿ ಉತ್ಪನ್ನಗಳನ್ನು ರೈಲ್ವೆ ಮೂಲಕ ಗ್ರಾಹಕರ ಮನೆಬಾಗಿಲಿಗೆ ತಲುಪಿಸುವ ಕೆಲಸ ನಡೆಯಲಿದೆ.
ತಲುಪಿಸುವ ಕೆಲಸವನ್ನು ಅಂಚೆ ಇಲಾಖೆ ಮಾಡಲಿದೆ ಮಾಡಲಿದೆ ಎಂದು ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಪ್ರಾಯೋಗಿಕ ಕಾರ್ಯದಲ್ಲಿ ಬೆಂಗಳೂರಿನಿಂದ ವಿಶಾಖಪಟ್ಟಣಂಗೆ 1.5 ಟನ್ ಅಗರಬತ್ತಿಯನ್ನು ಕಳುಹಿಸಿಕೊಡಲಾಯಿತು. ಮುಂದಿನ ದಿನಗಳಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಯೋಜನೆ ವಿಸ್ತರಿಸುವ ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ.
Related Articles
Advertisement
ಈ ಮೊದಲು ಗ್ರಾಹಕರು ತಮ್ಮ ವಸ್ತುಗಳನ್ನು ರೈಲ್ವೆ ಪಾರ್ಸೆಲ್ ಅನ್ನು ಒಂದು ಕಡೆಯಿಂದ ಮತ್ತೂಂದು ಕಡೆ ಕಳಿಸಬೇಕಾದರೆ ಖುದ್ದಾಗಿ ಅವರೇ ರೈಲ್ವೆ ಸ್ಟೇಷನ್ ಗೆ ಹೋಗಿ ಬುಕಿಂಗ್ ಮಾಡಬೇಕಾಗಿತ್ತು. ಜತೆಗೆ ತಮ್ಮ ವಸ್ತುಗಳನ್ನು ಪಡೆಯಬೇಕಾಗಿತ್ತು. ಆದರೆ ಇದೀಗ ಹೊಸ ವ್ಯವಸ್ಥೆ ಜಾರಿಯಿಂದ ಅಂಚೆ ಸಿಬ್ಬಂದಿಯೇ ರೈಲ್ವೆ ಸ್ಟೇಷನ್‌ಗೆ ಹೋಗಿ ಪಾರ್ಸಲ್ ನೀಡಲಿದ್ದಾರೆ. ಜತೆಗೆ ರೈಲ್ವೆ ಸ್ಟೇಷನ್‌ನಿಂದ ಪಾರ್ಸೆಲ್ ಪಡೆದು ಗ್ರಾಹಕರ ಮನೆಬಾಗಿಲಿಗೆ ತಲುಪಿಸಲಿದ್ದಾರೆ.
ಸೆಂಟ್ರಲ್ ರೈಲ್ವೆ ವಿಭಾಗ ಮುಂಬೈ, ಪುಣೆ ಮತ್ತು ನಾಗ್ಪುರದಲ್ಲಿ ಈ ಸೇವೆಯನ್ನು ಆರಂಭಿಸಿದೆ. ಅದೇ ರೀತಿಯಲ್ಲಿ ದಕ್ಷಿಣ ಭಾರತದಲ್ಲಿ ಈ ಸೇವೆಯ ಪ್ರಾಯೋಗಿಕ ಕಾರ್ಯ ಬೆಂಗಳೂರು-ವಿಖಾಪಟ್ಟಣಂ ಮೂಲಕ ಆರಂಭವಾಗಿದೆ. ಉದ್ಯಮಿಗಳು ಕೂಡ ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಮುಂದಿನ ದಿನಗಳಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಯೋಜನೆ ವಿಸ್ತಾರಿಸುವ ಚಿಂತನೆ ಕೂಡ ನಡೆದಿದೆ.●ಎಸ್.ರಾಜೇಂದ್ರಕುಮಾರ್,
ಚೀಫ್ ಪೋಸ್ಟ್‌ಮಾಸ್ಟರ್
ಜನರಲ್, ಕರ್ನಾಟಕ ವೃತ ●ದೇವೇಶ ಸೂರಗುಪ್ಪ