Advertisement
ಯಾರಿವರು ಅಧಿಕಾರಿಗಳು?
- ಕ್ಯಾಪ್ಟನ್ ನವ್‌ತೇಜ್ ಸಿಂಗ್ ಗಿಲ್ 2. ಕ್ಯಾಪ್ಟನ್ ಸೌರಭ್ ವಸಿಷ್u 3. ಕಮಾಂಡರ್ ಪೂರ್ಣೇಂದು ತಿವಾರಿ 4. ಕ್ಯಾಪ್ಟನ್ ಬಿರೇಂದರ್ ಕುಮಾರ್ ವರ್ಮ 5. ಕಮಾಂಡರ್ ಸುಗುಣಾಕರ್ ಪಕೇಲ
- ಕಮಾಂಡರ್ ಸಂಜೀವ್ ಗುಪ್ತ 7. ಕಮಾಂಡರ್ ಅಮಿತ್ ನಾಗಾ³ಲ್ 8. ಸೈಲರ್ ರಾಗೇಶ್
Related Articles
Advertisement
ಈ ಎಲ್ಲ ಅಧಿಕಾರಿಗಳು ಭಾರತೀಯ ನೌಕಾಪಡೆಯಲ್ಲಿ ಅತ್ಯುನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅಂದರೆ ಸುಮಾರು 20 ವರ್ಷಗಳ ಕಾಲ ಇಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರಲ್ಲಿ ಕೆಲವು ಅಧಿಕಾರಿಗಳು ನೌಕಾಪಡೆಯಲ್ಲಿ ಇನ್‌ಸ್ಟ್ರಕ್ಟರ್ ಕೂಡ ಆಗಿದ್ದರು. ನೌಕಾಪಡೆಯಲ್ಲಿ ಇವರೆಲ್ಲರ ಸೇವಾ ಕಾರ್ಯ ಅತ್ಯುನ್ನತವಾಗಿದೆ.
ವಿಶೇಷವೆಂದರೆ, ಕಮಾಂಡರ್ ತಿವಾರಿ ಅವರಿಗೆ 2019ರಲ್ಲಿ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇದು ವಿದೇಶಗಳಲ್ಲಿರುವ ಭಾರತೀಯರಿಗೆ ನೀಡುವ ಅತ್ಯುನ್ನತ ಪ್ರಶಸ್ತಿಯಾಗಿದ್ದು, ಕತಾರ್ ಮತ್ತು ಭಾರತದ ನಡುವಿನ ಸಂಬಂಧದ ಹಿನ್ನೆಲೆಯಲ್ಲಿ ನೀಡಲಾಗಿತ್ತು. ಅಂದರೆ ಭಾರತದ ಕೀರ್ತಿಯನ್ನು ವಿದೇಶಗಳಲ್ಲಿ ಹೆಚ್ಚಿಸಿದ ಕಾರಣಕ್ಕಾಗಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಅಧಿಕಾರಿಗಳ ವಿರುದ್ಧದ ಆರೋಪವೇನು?
ಕತಾರ್ ಆಗಲಿ, ಕೇಂದ್ರ ಸರಕಾರವಾಗಲಿ ಈ ಎಂಟು ಅಧಿಕಾರಿಗಳ ವಿರುದ್ಧ ಆರೋಪವೇನು ಎಂಬುದರ ಬಗ್ಗೆ ಬಹಿರಂಗಗೊಳಿಸಿಲ್ಲ. ಕೆಲವು ಮೂಲಗಳ ಪ್ರಕಾರ, ಇಸ್ರೇಲ್ ಪರ ಗೂಢಚಾರಿಕೆ ನಡೆಸಿದ್ದರ ಹಿನ್ನೆಲೆಯಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಅಂದರೆ ಕತಾರ್, ಇಟಲಿ ಜತೆ ಮಾಡಿಕೊಂಡ ರಹಸ್ಯ ಸಬ್‌ಮೆರಿನ್ ಒಪ್ಪಂದವನ್ನು ಇವರೆಲ್ಲರೂ ಇಸ್ರೇಲ್‌ಗೆ ಸೋರಿಕೆ ಮಾಡಿದ್ದರು. ಈ ಸಬ್‌ಮೆರಿನ್‌ಗಳು ಅತ್ಯಂತ ಸುಧಾರಿತ ತಂತ್ರಜ್ಞಾನ ಹೊಂದಿದ್ದವು. ಆದರೆ ಈ ಬಗ್ಗೆಯೂ ಅಧಿಕೃತವಾಗಿ ಯಾರೂ ಹೇಳಿಲ್ಲ. ಅಲ್ಲದೆಈ ಅಧಿಕಾರಿಗಳ ಕುಟುಂಬ ಸದಸ್ಯರು ಕೂಡ ಇದುವರೆಗೆ ಯಾವುದೇ ಆರೋಪದ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಹೇಳಿದ್ದಾರೆ. ಈ ಹಿಂದೆ ಇವರನ್ನು ಏಕಾಂತ ಜೈಲಿನಲ್ಲಿ ಇರಿಸಿದಾಗ, ಅಧಿಕಾರಿಗಳ ವಿರುದ್ಧ ರಕ್ಷಣ ಇಲಾಖೆಗೆ ಸಂಬಂಧಿಸಿದ ಆರೋಪಗಳಿರಬಹುದು ಎಂಬ ವಾದಗಳೂ ಇದ್ದವು.
ಕೇಂದ್ರ ಸರಕಾರದ ಅಭಿಪ್ರಾಯವೇನು?
ಸದ್ಯ ಕೇಂದ್ರ ಸರಕಾರ ಗಲ್ಲುಶಿಕ್ಷೆಯನ್ನು ಅತ್ಯಂತ ಆಘಾತಕಾರಿ ಎಂದು ಕರೆದಿದೆ. ಜತೆಗೆ ಕತಾರ್ ಜತೆಗೆ ಸರ್ವರೀತಿಯಲ್ಲೂ ಮಾತುಕತೆ ನಡೆಸುತ್ತಿರುವುದಾಗಿಯೂ ತಿಳಿಸಿದೆ. ಸದ್ಯ ನಾವು ಕೋರ್ಟ್‌ನ ತೀರ್ಪಿನ ಪ್ರತಿ ನೋಡಿಲ್ಲ. ಅದು ಬಂದಾದ ಮೇಲೆ ನಾವು ಮುಂದಿನ ದಾರಿ ನೋಡುತ್ತೇವೆ. ನಾವು ಅಂತಾರಾಷ್ಟ್ರೀಯ ಮತ್ತು ಕತಾರ್ ನೆಲದ ಕಾನೂನುಗಳ ಬಗ್ಗೆಯೂ ನೋಡುತ್ತೇವೆ. ಇದಾದ ಮೇಲೆ ರಾಜತಾಂತ್ರಿಕ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.
ಕತಾರ್ ಮತ್ತು ಭಾರತದ ಸಂಬಂಧ
ಕಳೆದ ಎರಡು ಮೂರು ದಶಕಗಳಿಂದಲೂ ಕತಾರ್ ಮತ್ತು ಭಾರತದ ನಡುವೆ ಅತ್ಯುತ್ತಮ ಸಂಬಂಧವಿದೆ. 2008ರ ನವೆಂಬರ್‌ನಲ್ಲಿ ಆಗಿನ ಪ್ರಧಾನಿ ಡಾ| ಮನಮೋಹನ್ ಸಿಂಗ್ ಅವರು ಕತಾರ್‌ಗೆ ಭೇಟಿ ನೀಡಿದ್ದರು. 2015ರಲ್ಲಿ ಎಮಿರ್ ಆಫ್ ಕತಾರ್ ಶೇಕ್ ತಮಿಮ್ ಬಿನ್ ಹಮದ್ ಅಲ್ ಥಾನಿ ಭಾರತಕ್ಕೆ ಭೇಟಿ ನೀಡಿದ್ದರು. 2016ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕತಾರ್‌ಗೆ ಭೇಟಿ ನೀಡಿದ್ದರು. ವಿದೇಶಾಂಗ ಸಚಿವ ಜೈಶಂಕರ್ ಅವರು ಕನಿಷ್ಠ ಮೂರು ಬಾರಿ ಈ ದೇಶಕ್ಕೆ ಹೋಗಿದ್ದಾರೆ. 2018ರಲ್ಲಿ ಸುಷ್ಮಾ ಸ್ವರಾಜ್ ಕೂಡ ಕತಾರ್‌ಗೆ ಹೋಗಿ ಬಂದಿದ್ದರು. ಪ್ರಧಾನಿಯಾಗಿ ಮನಮೋಹನ್ ಸಿಂಗ್ ಅವರದ್ದು ಮೊದಲ ಪ್ರವಾಸವಾದರೆ, ವಿದೇಶಾಂಗ ಸಚಿವೆಯಾಗಿ ಸುಷ್ಮಾ ಅವರು ಮೊದಲ ಬಾರಿಗೆ ಈ ದೇಶಕ್ಕೆ ಭೇಟಿ ನೀಡಿದ್ದರು.
2008ರಿಂದ ಈಚೆಗೆ ಎರಡೂ ದೇಶಗಳ
ನಡುವಿನ ಸಂಬಂಧ ಉತ್ತಮವಾಗಿದೆ. 2021ರ ವೇಳೆಗೆ ಕತಾರ್‌ನ ಮೊದಲ ನಾಲ್ಕು ರಫ್ತು ಮಾಡುವ ದೇಶಗಳಲ್ಲಿ ಭಾರತವೂ ಒಂದಾಗಿತ್ತು. ಎರಡು ದೇಶಗಳ ದ್ವಿಪಕ್ಷೀಯ ಸಂಬಂಧ 15 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟಿದೆ. 13 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಎಲ್‌ಎನ್‌ಜಿ ಮತ್ತು ಎಲ್‌ಪಿಜಿ ಕತಾರ್‌ನಿಂದ ಭಾರತಕ್ಕೆ ರಫ್ತಾಗುತ್ತಿದೆ.
ಇದಷ್ಟೇ ಅಲ್ಲ, ಉಭಯ ದೇಶಗಳ ನಡುವೆ ರಕ್ಷಣ ವಲಯದ ವ್ಯವಹಾರವೂ ಹೆಚ್ಚಿದೆ. 2008ರ ಅನಂತರ ರಕ್ಷಣ ವಲಯದಲ್ಲಿನ ಸಂಬಂಧ ಹೆಚ್ಚು ಸುಧಾರಣೆಯಾಗಿದೆ. ಹೀಗಾಗಿಯೇ ನೌಕಾ ಪಡೆ ಅಧಿಕಾರಿಗಳು ಕತಾರ್‌ನಲ್ಲಿ ತಮ್ಮ ಸಂಸ್ಥೆ ಮೂಲಕ ರಕ್ಷಣೆಗೆ ಸಂಬಂಧಿಸಿದ ಸೇವೆ ಒದಗಿಸುತ್ತಿದ್ದರು.
ಭಾರತದ ಮುಂದಿರುವ ಆಯ್ಕೆಗಳು
ಭಾರತದ ಮುಂದೆ ಹಲವಾರು ಆಯ್ಕೆಗಳಿವೆ. ಇದರಲ್ಲಿ ಕಾನೂನಾತ್ಮಕವಾಗಿ ಹೋರಾಟವೂ ಒಂದು. ಇದರ ಜತೆಗೆ ಪ್ರಧಾನಿಗಳೇ ನೇರವಾಗಿ ಮಾತುಕತೆ ನಡೆಸಿ ಕ್ಷಮೆ ನೀಡುವಂತೆ ಕೋರಬಹುದು.
- ಕಾನೂನಾತ್ಮಕವಾಗಿ ಹೋರಾಟ ನಡೆಸುವುದು
- ರಾಜತಾಂತ್ರಿಕವಾಗಿ ಇತ್ಯರ್ಥಪಡಿಸುವುದು
- ರಾಜಕೀಯ ಮಧ್ಯಸ್ಥಿಕೆ – ಪ್ರಧಾನಿ ಮಟ್ಟದಲ್ಲಿ ಮಾತುಕತೆ ನಡೆಸುವುದು
- ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಂದೋಲನ ನಡೆಸಿ ಒತ್ತಡ ಹೇರುವುದು