Advertisement

ಸಮಾಜ ವಿಭಜನೆಯ ಸಂಚು

12:15 PM Oct 31, 2018 | Team Udayavani |

ಬೆಂಗಳೂರು: ರಾಜ್ಯ ಸರ್ಕಾರ ವಾಲ್ಮೀಕಿಯಂತಹ ಸಾಧಕರ ಜಯಂತಿ ಅರ್ಥಪೂರ್ಣವಾಗಿ ಆಚರಿಸುವ ಬದಲಿಗೆ ಟಿಪ್ಪು ರೀತಿಯ ದೇಶದ್ರೋಹಿಯ ಜಯಂತಿ ಆಚರಣೆಗೆ ಉತ್ಸಾಹ ತೋರಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಹೇಳಿದರು.

Advertisement

ಫೌಂಡೇಷನ್‌ ಫಾರ್‌ ಇಂಡಿಕ್‌ ರಿಸರ್ಚ್‌ ಸ್ಟಡೀಸ್‌ ಮಂಗಳವಾರ ನಗರದ ಮಿಥಿಕ್‌ ಸೊಸೈಟಿಯಲ್ಲಿ ಹಮ್ಮಿಕೊಂಡಿದ್ದ “ಟಿಪ್ಪು ಜಯಂತಿ- ಸಮಾಜ ವಿಭಜನೆಯ ಸಂಚು’ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾ‌ತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ಟಿಪ್ಪು ಸುಲ್ತಾನ್‌ ಜಯಂತಿ ಮಾಡಲು ಇರುವಷ್ಟು ಉತ್ಸಾಹ, ವಾಲ್ಮೀಕಿ ಜಯಂತಿ ಮಾಡಲು ಏಕಿಲ್ಲ?

ಸರ್ಕಾರ ಆಯೋಜಿಸಿದ್ದ ವಾಲ್ಮೀಕಿ ಜಯಂತಿಯಲ್ಲಿ ಮುಖ್ಯಮಂತ್ರಿ ಭಾಗವಹಿಸಿರಲಿಲ್ಲ. ವಾಲ್ಮೀಕಿ ಮಹಾನ್‌ ದಾರ್ಶನಿಕ. ರಾಮಾಯಣ ಬರೆದವರು. ಇಂತಹ ಸಾಧಕರ ಜನ್ಮ ದಿನ ಸರ್ಕಾರಕ್ಕೆ ಮುಖ್ಯವಲ್ಲವೇ? ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದ ಆಚರಣೆಯನ್ನೇ ಮೈತ್ರಿ ಸರ್ಕಾರ ಮುಂದುವರೆಸಿದರೆ ಜನರೇ ನಿಮ್ಮನ್ನು ಪ್ರಶ್ನಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

6ನೇ ತರಗತಿ ಪಠ್ಯಪುಸ್ತಕದಲ್ಲಿ ಟಿಪ್ಪುಸುಲ್ತಾನ್‌ ಬಗ್ಗೆ ಪುಟಗಟಲ್ಲೇ ವಿಚಾರ ಇದೆ. 8ನೇ ತರಗತಿ ಪಠ್ಯದಲ್ಲಿ ಬಹುಮನಿ ರಾಜರ ಮಾಹಿತಿ ಕೆಲವೇ ಪುಟಕ್ಕೆ ಸೀಮಿತಗೊಳಿಸಿದ್ದಾರೆ. ಬೇರೆ ದೇಶದಲ್ಲಿ ಆಯಾ ದೇಶದ ಇತಿಹಾಸಕಾರರು ಬರೆದಿರುವುದನ್ನೇ ನಂಬುತ್ತಾರೆ. ಆದರೆ ನಮಗೆ ನಮ್ಮ ದೇಶದವರ ಮೇಲೆ ನಂಬಿಕೆ ಇಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next