Advertisement

Kushtagi: ಶಾಲಾ ಆವರಣದಲ್ಲಿ ಕುಡುಕನ ರಂಪಾಟ; ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್

10:10 AM Sep 05, 2024 | Team Udayavani |

ಕುಷ್ಟಗಿ: ತಾಲೂಕಿನ ಕ್ಯಾದಿಗುಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕುಡಕನೋರ್ವ ಕುಡಿದು ರಂಪಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಸೆ.4ರ ಬುಧವಾರ ಸಂಜೆ ಶಾಲೆ ಬಿಡುತ್ತಿದ್ದಂತೆ ಕಳ್ಳಭಟ್ಟಿ ಸರಾಯಿಯೊಂದಿಗೆ ಹಾಜರಾದ ಕುಡುಕ, ಬಿಸಿಯೂಟದ ಕೊಠಡಿಯ ಮುಂದೆ ಕುಳಿತು ಕುಡಿಯಲಾರಂಭಿಸಿದ್ದಾನೆ.

ಈ ವಿಷಯ ಸಾರ್ವಜನಿಕರ ಗಮನಕ್ಕೆ ಬರುತ್ತಿದ್ದಂತೆ ಶಾಲೆಯ ಆವರಣದಲ್ಲಿ ಮದ್ಯ ಸೇವನೆಗೆ ತರಾಟೆ ತೆಗೆದುಕೊಂಡಿದ್ದಾರೆ. ಇದನ್ನು ಲೆಕ್ಕಿಸದ ಆ ವ್ಯಕ್ತಿ ಸ್ಥಳೀಯರೊಂದಿಗೆ ವಾದಕ್ಕಿಳಿದಿದ್ದಾನೆ.

ಇದನ್ನು ಪೊಲೀಸರ ಗಮನಕ್ಕೆ ತರಲಾಗಿದ್ದು, ಬಳಿಕ ಗ್ರಾಮಸ್ಥರು ಆ ವ್ಯಕ್ತಿಯನ್ನು ಬಲವಂತವಾಗಿ ಎಳೆದು ಶಾಲಾ ಆವರಣದಿಂದ ಹೊರಕ್ಕೆ ಹಾಕಿದ್ದಾರೆ.

ಶಾಲಾ ಆವರಣದಲ್ಲಿ ಕುಡುಕನ ರಂಪಾಟದ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ಈ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

Advertisement

ವ್ಯಕ್ತಿ ಅದೇ ಗ್ರಾಮದ ಮೌನೇಶ ಕರಿವೀರಪ್ಪ ಬಡಿಗೇರ ಎಂದು ಗುರುತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next