Advertisement
ವೇ|ಮೂ| ದಿ| ಪಡುಬಿದ್ರಿ ದೇವಿದಾಸ ಶರ್ಮರ ಮಕ್ಕಳು ಸ್ಥಾಪಿ ಸಿರುವ ದತ್ತಿನಿಧಿಯಿಂದ ಸಂಸ್ಕೃತ, ವೇದ, ತರ್ಕ, ಸುಧಾಪಾಠ ಮೊದಲಾದ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಗೌರವ ಪುರಸ್ಕಾರ ನೀಡಲಾಗುವುದು. ಕಾರ್ಕಳ ಭುವನೇಂದ್ರ ಪ್ರೌಢಶಾಲೆಯ 10ನೇ ಪರೀಕ್ಷೆಯಲ್ಲಿ ಸಂಸ್ಕೃತ ಭಾಷೆಯಲ್ಲಿ ಪೂರ್ಣ 125 ಅಂಕ ಗಳಿಸಿದ 10 ಮಂದಿಗೆ ತಲಾ 2 ಸಾ. ರೂ. ಪ್ರೋತ್ಸಾಹಧನ ನೀಡಿ ಗೌರವಿಸಲಾಗುವುದು. ದಾನಿಗಳಾದ ಕಾರ್ಕಳದ ಕೆ. ಕಮಲಾಕ್ಷ ಕಾಮತ್, ಬೈಲೂರು ಕಣಜಾರಿನಲ್ಲಿ ಅಶಕ್ತರಿಗೆ “ಹೊಸ ಬೆಳಕು’ ಆಶ್ರಮದ ಮೂಲಕ ಸೇವೆಗೈಯುತ್ತಿರುವ ಸಂಸ್ಥಾಪಕರಿಗೆ ವಿಶೇಷ ಗೌರವ ಪುರಸ್ಕಾರ ನೀಡಲಾಗುವುದು.
ಎಸೆಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಯ ರ್‍ಯಾಂಕ್ ವಿಜೇತರು, ಸಿಇಟಿ, ಕಾಮೆಡ್‌ಕೆ, ಜಿಇಇ, ನೀಟ್‌ಗಳಲ್ಲಿ ನೂರರೊಳಗಿನ ರ್‍ಯಾಂಕ್ ಗಳಿಸಿದ ಪ್ರತಿಭಾನ್ವಿತರು, ಐಎಎಸ್, ಐಪಿಎಸ್, ಐಆರ್‌ಎಸ್, ಕೆಎಎಸ್ ಮೊದಲಾದ ಪರೀಕ್ಷೆಗಳಲ್ಲಿ ತೇರ್ಗಡೆಯಾದವರು, ಪಿಎಚ್.ಡಿ., ಸಿಎ ಪದವಿ ಉತ್ತೀರ್ಣರಾದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.
Related Articles
ಸಾಣೂರು ಸ.ಪ.ಪೂ. ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವ ಸರ್ವ ಜನಾಂಗದ 20 ಬಡ ಕೌಟುಂಬಿಕ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ತಲಾ 2 ಸಾ. ರೂ. ಪ್ರೋತ್ಸಾಹನಿಧಿ ನೀಡಲಾಗುವುದು. ಒಟ್ಟಾರೆ ಸೇವಾ ಚಟುವಟಿಕೆಗಳಿಗೆ ಈ ವರ್ಷ 1,01,81,000 ರೂ. ಮೀಸಲಿಡಲಾಗಿದೆ.
Advertisement
ಕುಟುಂಬ ಚೈತನ್ಯ ನಿಧಿಜಿಎಸ್ಬಿ ಸಮಾಜದ 160 ತೀರಾ ದುರ್ಬಲ ಕುಟುಂಬಗಳ ಜೀವನೋಪಾಯಕ್ಕಾಗಿ ನಿರ್ದಿಷ್ಟ ಮೊತ್ತದ ಆರ್ಥಿಕ ನೆರವನ್ನು ಪ್ರತೀ ತಿಂಗಳು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸುವ ಯೋಜನೆಗೆ 10 ವರ್ಷ ತುಂಬಿರುವ ನೆಲೆಯಲ್ಲಿ ಪ್ರತೀ ಕುಟುಂಬಕ್ಕೆ ತಲಾ 12 ಸಾ. ರೂ.ಗಳಂತೆ 19.50 ಲಕ್ಷ ರೂ. ನೆರವನ್ನು ಆಪದ್ಧನವಾಗಿ ನೀಡಲಾಗುವುದು. ಈ ಮೊತ್ತವನ್ನು ಡಾ| ಪಿ. ದಯಾನಂದ ಪೈ ನೀಡಿದ್ದಾರೆ. ಸಮಾಜ ಬಾಂಧವರ ನೆರವು ದೊರೆತಲ್ಲಿ 1 ಕುಟುಂಬದ ಎಲ್ಲ ಸದಸ್ಯರೂ ತೀವ್ರ ಅನಾರೋಗ್ಯ ಪೀಡಿತರಾಗಿರುವ ಸಾೖಬ್ರಕಟ್ಟೆಯ ಜಿಎಸ್‌ಬಿ ಕುಟುಂಬವೊಂದಕ್ಕೆ ಮನೆ ನಿರ್ಮಿಸಿಕೊಡುವ ಚಿಂತನೆಯಿದೆ ಎಂದು ವೇದಿಕೆಯ ಪ್ರಕಟನೆ ತಿಳಿಸಿದೆ.