Advertisement

Tragedy: ಹೆತ್ತ ತಾಯಿಯನ್ನೇ ಕೊಂದು Sorry Mom… ಎಂದು ಪೋಸ್ಟ್ ಹಾಕಿದ ಪಾಪಿ ಮಗ

11:09 AM Aug 31, 2024 | Team Udayavani |

ಗುಜರಾತ್: ಹೆತ್ತ ತಾಯಿಯನ್ನೇ ಕೊಂದು ಬಳಿಕ ಆಕೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸ್ವಾರಿ ಅಮ್ಮಾ ಎಂದು ಪೋಸ್ಟ್ ಹಾಕಿರುವ ಆಘಾತಕಾರಿ ಘಟನೆಯೊಂದು ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಬೆಳಕಿಗೆ ಬಂದಿದೆ.

Advertisement

ಘಟನೆಗೆ ಸಂಬಂಧಿಸಿ ಆರೋಪಿ ಮಗನನ್ನು ಪೊಲೀಸರು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ.

ಏನಿದು ಪ್ರಕರಣ:
ರಾಜ್‌ಕೋಟ್‌ನ ವಿಶ್ವವಿದ್ಯಾಲಯ ರಸ್ತೆಯಲ್ಲಿರುವ ಭಗತ್‌ ಸಿಂಗ್ ಗಾರ್ಡನ್‌ನಲ್ಲಿರುವ ಮನೆಯಲ್ಲಿ ಈ ಘಟನೆ ನಡೆದಿದ್ದು ಜ್ಯೋತಿಬೆನ್ ಗೋಸಾಯಿ(48) ಮೃತ ಮಹಿಳೆಯಾಗಿದ್ದು. ನೀಲೇಶ್ ಗೋಸಾಯಿ ಆರೋಪಿಯಾಗಿದ್ದಾನೆ.

ಅಪರಾಧ ಎಸಗಿದ ಬಳಿಕ ತನ್ನ ತಾಯಿಯ ಮೃತದೇಹದ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ “ಕ್ಷಮಿಸಿ ತಾಯಿ ನಾನು ನಿನ್ನನ್ನು ಕೊಲ್ಲುತ್ತಿದ್ದೇನೆ, ನಾನು ನಿನ್ನನ್ನು ಕಳೆದುಕೊಳ್ಳುತ್ತೇನೆ, ಓಂ ಶಾಂತಿ” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಹಾಕಿದ್ದಾನೆ. ಮತ್ತೊಂದು ಪೋಸ್ಟ್‌ನಲ್ಲಿ, “ನಾನು ನನ್ನ ತಾಯಿಯನ್ನು ಕೊಲ್ಲುತ್ತಿದ್ದೇನೆ, ನನ್ನ ಜೀವನ ಕಳೆದುಹೋಗಿದೆ, ಕ್ಷಮಿಸಿ ಅಮ್ಮ, ಓಂ ಶಾಂತಿ, ಮಿಸ್ ಯೂ ಅಮ್ಮ ” ಎಂದು ಬರೆದುಕೊಂಡಿದ್ದಾನೆ.

ಇತ್ತ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಹತ್ತಿರದ ಮನೆಯವರು ಜ್ಯೋತಿಬೆನ್ ಮನೆಯ ಬಳಿ ಹೋದಾಗ ಮಗ ತನ್ನ ತಾಯಿಯ ಹೆಣದ ಜೊತೆ ಇರುವುದು ಕಂಡುಬಂದಿದೆ ಕೂಡಲೇ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಬಂದು ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಜ್ಯೋತಿಬೆನ್ ಅವರು ಹಲವು ವರ್ಷಗಳಿಂದ ತೀವ್ರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ, ಇದು ತಾಯಿ ಮತ್ತು ಮಗನ ನಡುವೆ ಆಗಾಗ ಜಗಳಕ್ಕೆ ಕಾರಣವಾಗುತ್ತಿತ್ತು ಎನ್ನಲಾಗಿದೆ.

ಘಟನೆಯ ದಿನ ತಾಯಿ ಮತ್ತು ಮಗನ ನಡುವೆ ಜಗಳ ನಡೆದಿದ್ದು ಇದು ವಿಕೋಪಕ್ಕೆ ತಿರುಗಿ ಮಗ ಚಾಕುವಿನಿಂದ ಇರಿದು ಕೊಲ್ಲಲು ಮುಂದಾಗಿದ್ದಾನೆ ಆದರೆ ತಾಯಿ ತಡೆದಿದ್ದಾರೆ ಇದಾದ ಬಳಿಕ ಅಲ್ಲೇ ಇದ್ದ ಬಟ್ಟೆಯಿಂದ ಮುಖಕ್ಕೆ ಸುತ್ತಿ ಹತ್ಯೆ ಮಾಡಿ ಬಳಿಕ ತಾಯಿ ಜೊತೆ ಫೋಟೋ ತೆಗೆದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಮಾಡಿಕೊಂಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ಆಸ್ಪತ್ರೆಗೆ ಸಾಗಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Jharkhand: ಮೊದಲ ಬಾರಿಗೆ ಸಮುದಾಯ ಆರೋಗ್ಯ ಅಧಿಕಾರಿಯಾಗಿ ತೃತೀಯಲಿಂಗಿ ನೇಮಕ

Advertisement

Udayavani is now on Telegram. Click here to join our channel and stay updated with the latest news.