Advertisement
ನಮ್ಮ ಪಾಲು ಎಷ್ಟಿದೆನಗರದ ಚರಂಡಿ ಸಮಸ್ಯೆ, ಬಸ್ ನಿಲ್ದಾಣಗಳಲ್ಲಿ ಗಲೀಜು, ಅಲ್ಲಲ್ಲಿ ಕಂಡುಬರುವ ಕಸದ ರಾಶಿ ಕಂಡಾಗಲೆಲ್ಲ ನಾವು ನಗರಸಭೆಯನ್ನೋ, ಜನಪ್ರತಿನಿಧಿಗಳನ್ನೋ ಅಥವಾ ಅಧಿಕಾರಿಗಳನ್ನೋ ದೂಷಿಸುತ್ತೇವೆ. ಆದರೆ ಈ ಸಮಸ್ಯೆ ಉದ್ಭವವಾಗಲು ನಮ್ಮ ಪಾಲು ಎಷ್ಟಿದೆ ಅನ್ನುವುದನ್ನು ಮಾತ್ರ ಯಾವತ್ತೂ ಯೋಚಿಸುವುದೇ ಇಲ್ಲ. ಸ್ವತ್ಛ ನಗರ, ಸುಂದರ ನಗರಿ ಎನಿಸಿಕೊಳ್ಳಲು ಸ್ಥಳೀಯಾಡಳಿತದ ಪಾಲು ಎಷ್ಟು ಇದೆಯೋ ಅದಕ್ಕಿಂತಲೂ ಹೆಚ್ಚಿನ ಹೊಣೆಗಾರಿಕೆ ನಮ್ಮ ಮೇಲಿದೆ ಅನ್ನುವುದನ್ನು ಮರೆಯಬಾರದು.
ಮನೆಯಲ್ಲಿ ಕಸವನ್ನೆಲ್ಲ ಕಸದ ಬುಟ್ಟಿಗೆ ಹಾಕಬೇಕು ಎನ್ನುವ ಕಲ್ಪನೆ ನಮ್ಮಲ್ಲಿದೆ. ಆದರೆ ಎಲ್ಲೋ ರಸ್ತೆ ಬದಿಯಲ್ಲೋ, ಅಂಗಡಿಯಲ್ಲೋ ಏನಾದರೂ ತಿಂದು ಬಿಸಾಡುವ ಕಸವನ್ನು ಬೀದಿಯಲ್ಲಿ ಎಸೆಯಬಾರದು. ಕಸದ ಬುಟ್ಟಿಗೆ ಮಾತ್ರ ಹಾಕಬೇಕು ಎನ್ನುವ ಸಾಮಾಜಿಕ ಕಳಕಳಿ, ಹೊಣೆಗಾರಿಕೆ ನಮಗಿದ್ದರೆ ಇಂದು ಉಡುಪಿ ಕೂಡ ಇಂದೋರ್, ಭೋಪಾಲ್, ವಿಶಾಖಪಟ್ಟಣದಂತಹ ನಗರಗಳಿಗಿಂತ ಮುಂಚೂಣಿಯಲ್ಲಿ ಕಾಣಿಸಿಕೊಳ್ಳಬಹುದಿತ್ತು. ಮೋದಿಯ ಮಹತ್ವಾಕಾಂಕ್ಷೆ
ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಸ್ವತ್ಛ ಭಾರತ ಅಭಿಯಾನ ಆರಂಭಿಸಿದ ಆನಂತರ ಎಲ್ಲರೂ ಅಲ್ಲದಿದ್ದರೂ ಕೆಲವರಿಗಾರದರೂ ಸ್ವತ್ಛತೆಯ ಬಗೆಗಿನ ಅರಿವು ಹೆಚ್ಚಾಗಿದೆ. ಈಗ ಅಲ್ಲಲ್ಲಿ ಕೆಲವು ಸಂಘ, ಸಂಸ್ಥೆಗಳಿಂದ ಸ್ವತ್ಛತಾ ಅಭಿಯಾನ ನಡೆಯುತ್ತಿದೆ. ಇದೊಂದು ಒಳ್ಳೆಯ ಬೆಳವಣಿಗೆ.
Related Articles
ಎಲ್ಲೆಂದರಲ್ಲಿ ಕಸ ಬಿಸಾಡುವುದರ ಬಗ್ಗೆ, ಪ್ಲಾಸ್ಟಿಕ್ ನಿಷೇಧದ ಬಗ್ಗೆ ಪರಿಸರಾಸ್ತಕರು ಮಾಡುವ ಹೋರಾಟದಿಂದಾಗಲಿ ಈ ಸಮಸ್ಯೆ ಬಗೆಹರಿಯಲು ಸಾಧ್ಯವಿಲ್ಲ. ಸ್ವತ್ಛತೆ ಕುರಿತು ಒಂದಿಷ್ಟು ಅರಿವು ಮೂಡಿಸುವ ಕಾರ್ಯ ಆಗಬೇಕಿದೆ. ಶಿಕ್ಷಣ, ಅಭಿಯಾನವನ್ನೆಲ್ಲ ನಡೆಸುವ ಮೂಲಕ ಜನರನ್ನು ಜಾಗೃತಿಗೊಳಿಸುವ ಕೆಲಸ ಇನ್ನಷ್ಟು ಹೆಚ್ಚಾಗಬೇಕಿದೆ.
Advertisement
ಯಾಕೆ ಮಾಡಬಾರದು? ಕಸ, ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ, ಕಂಡ ಕಂಡಲ್ಲಿ ನೀರಿಗೆ ಎಸೆಯೋ ಬದಲು ಅದನ್ನು ಕಸದ ಬುಟ್ಟಿಗೆ ಹಾಕುವ ಕೆಲಸ ಯಾಕೆ ಮಾಡಬಾರದು ? ಪ್ಲಾಸ್ಟಿಕ್ ನಿಷೇಧವನ್ನು ಸರಕಾರವೇ ಮಾಡಬೇಕಂತಿಲ್ಲ.
ನಮ್ಮ ಪರಿಸರಕ್ಕೆ ಹಾನಿಕರವಾದ ಪ್ಲಾಸ್ಟಿಕ್‌ನ್ನು ದೂರವಿಡಲು ನಾವು ಯಾಕೆ ಪಣ ತೊಡಬಾರದು? ಸಂತೆಗೋ, ಅಂಗಡಿಗೋ ದಿನಸಿ ಖರೀದಿಸಲು ಮನೆಯಿಂದ ಹೊರಡುವಾಗಲೇ ಬಟ್ಟೆಯ ಬ್ಯಾಗ್ ಅಥವಾ ಗೋಣಿಚೀಲವನ್ನು ಯಾಕೆ ಕೊಂಡು ಹೋಗಬಾರದು ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳ ಬೇಕಾದವರು ಕೂಡ ನಾವೇ ಎನ್ನುವುದನ್ನು ಮರೆಯಬಾರದು. ಮನಸ್ಸು ಮಾಡಬೇಕಷ್ಟೇ
ಹೇಳಲು ಇದೆಲ್ಲ ಸಣ್ಣ ಸಣ್ಣ ವಿಷಯವಾದರೂ ಇದನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವ ದೊಡ್ಡ ಮನಸ್ಸು ಮಾಡಬೇಕಷ್ಟೇ. ದೇವರು ನಮಗೆಲ್ಲ ಈ ಸುಂದರ ಪ್ರಕೃತಿಯನ್ನು ಕರುಣಿಸಿದ್ದಾನೆ. ಅದನ್ನು ಅಷ್ಟೇ ಸ್ವತ್ಛ, ಸುಂದರವಾಗಿ ಉಳಿಸಿಕೊಳ್ಳುವ ಹೊಣೆಗಾರಿಕೆ ನಮ್ಮ ಮೇಲಿದೆ. ವಾರ್ಡ್ ವಾರು ಅಭಿಯಾನ
ಉಡುಪಿಯು ಈ ಪಟ್ಟಿಯಲ್ಲಿ ಮೇಲ್ಪಂಕ್ತಿಯಲ್ಲಿ ಕಾಣಿಸಿಕೊಳ್ಳಲು ಇನ್ನು ಸಾಕಷ್ಟು ಕೆಲಸಗಳಾಗಬೇಕಿದೆ. ಸ್ವತ್ಛತೆಯ ಬಗೆಗೆ ಅರಿವು ಜನರಲ್ಲಿ ಇನ್ನೂ ಹೆಚ್ಚಾಗಬೇಕಿದೆ. ಘನತ್ಯಾಜ್ಯ ವಿಂಗಡಣೆಗೆ ಕ್ರಮ, ಅದಕ್ಕಾಗಿ ಹೆಚ್ಚಿನ ಅನುದಾನದ ಅಗತ್ಯವಿದೆ. ಒಟ್ಟಾರೆ ನಗರವನ್ನು ಸ್ವತ್ಛ ಮಾಡುವ ನಿಟ್ಟಿನಲ್ಲಿ ಸುಮಾರು ಹಂತಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಒಂದೊಂದೇ ವಾರ್ಡ್‌ವಾರು ಈ ಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ನಗರಸಭೆ ಪರಿಸರ ಅಭಿಯಂತರ ಬಿ. ರಾಘವೇಂದ್ರ ಹೇಳಿದರು. ಮಾನದಂಡವೇನು?
ಸ್ವತ್ಛ ಸವೇಕ್ಷಣೆ- 2017 ಎನ್ನುವ ಕಾರ್ಯಕ್ರಮದಡಿ 1 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳನ್ನು ಆಯ್ಕೆ ಮಾಡಿ ಅವುಗಳಿಗೆ 2000 ಅಂಕಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಎಲ್ಲ ನಗರಗಳಿಗೂ ಶೌಚಮುಕ್ತ ನಗರ, ಘನತ್ಯಾಜ್ಯ ನಿರ್ವಹಣೆ, ತಪಾಸಣೆ, ಜನರ ಸ್ಪಂದನೆಯನ್ನೆಲ್ಲ ಆಧಾರವಾಗಿಟ್ಟುಕೊಂಡು ಅಂಕಗಳನ್ನು ನೀಡಲಾಗಿದೆ. ಈ ಯಾದಿಯಲ್ಲಿ ಮೈಸೂರು 1743.36 ಅಂಕ, ಮಂಗಳೂರು 1349.99 ಅಂಕ ಹಾಗೂ ಉಡುಪಿ 1122.61 ಅಂಕಗಳನ್ನು ಪಡೆದಿದೆ. ರಾಜ್ಯದಲ್ಲಿ 3ನೇ ಸ್ಥಾನ
ಸ್ವತ್ಛ ಸರ್ವೇಕ್ಷಣ್ ರ್‍ಯಾಂಕಿಂಗ್ ಪಟ್ಟಿಯಲ್ಲಿ ದೇಶದ 434 ನಗರಗಳ ಪಟ್ಟಿಯನ್ನು ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಕಳೆದ ಗುರುವಾರ ಬಿಡುಗಡೆ ಮಾಡಿದ್ದು, ಅದರಲ್ಲಿ ರಾಜ್ಯದ 27 ನಗರಗಳು ಹಾಗೂ ಪಟ್ಟಣಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಆ ಪೈಕಿ ಮೈಸೂರು ದೇಶಕ್ಕೆ 5ನೇ, ರಾಜ್ಯದ ಅಗ್ರಸ್ಥಾನಿ, ಮಂಗಳೂರು ದೇಶಕ್ಕೆ 63, ರಾಜ್ಯಕ್ಕೆ 2ನೇ ಸ್ಥಾನಿಯಾದರೆ ಉಡುಪಿ ದೇಶಕ್ಕೆ 143 ಹಾಗೂ ರಾಜ್ಯದಲ್ಲಿ 3ನೇ ಸ್ಥಾನ ಪಡೆಯಿತು.