Advertisement
ಬೆಳಗ್ಗೆ ಶ್ರೀ ವೆಂಕಟರಮಣ ಕುದ್ರೆತ್ತಾಯ ಗಣಪತಿ ಹೋಮ ನೆರವೇರಿಸಿದರು. ಸಂಜೆ ಕಶೆಕೋಡಿ ಸೂರ್ಯನಾರಾಯಣ ಭಟ್ ನೇತೃತ್ವದಲ್ಲಿ ಕಥಾ ಸಹಿತ ಸತ್ಯನಾರಾಯಣ ಪೂಜೆ ನಡೆಯಿತು. ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಆರ್ಶೀವಚನ ನೀಡಿದ ಧರ್ಮಸ್ಥಳ ನಿತ್ಯಾನಂದ ನಗರ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಮಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಸನಾತನ ಹಿಂದೂ ಧರ್ಮವನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ. ಧರ್ಮದ ಮರ್ಮವನ್ನು ಅರಿತು ಬಾಳುವುದೇ ನಿಜವಾದ ಹಿಂದೂ ಧರ್ಮ. ಆಧುನಿಕ ಯುಗದಲ್ಲಿ ನಮ್ಮ ಮಕ್ಕಳು ಕೈ ತಪ್ಪುವ ಕಾಲ ಬಂದಿದೆ. ಮಾತೆಯರು ಮಕ್ಕಳಿಗೆ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ಅರಿವು ಮೂಡಿಸಬೇಕು. ಗುರು ಹಿರಿಯರಿಗೆ ಗೌರವಿಸುವುದನ್ನು ಕಲಿಸಬೇಕು. ಎಲ್ಲರನ್ನೂ ಸಮಾನ ಭಾವದಿಂದ ನೋಡುವುದೇ ಹಿಂದೂ ಧರ್ಮದ ಮೂಲ ಎಂದರು.
ಸುಳ್ಯ ಶಾಸಕ ಎಸ್. ಅಂಗಾರ ಮಾತನಾಡಿ, ಭಕ್ತಿಯ ಮೂಲಕ ಆರಾಧನೆ ಮಾಡಿದವರಿಗೆ ದೇವರು ಒಂದಲ್ಲ ಒಂದು ರೀತಿಯಲ್ಲಿ ಅನುಗ್ರಹಿಸುತ್ತಾನೆ. ನಮ್ಮಲ್ಲಿ ನಂಬಿಕೆ, ಭಕ್ತಿ, ವಿಶ್ವಾಸ ಇದ್ದಾಗ ಮುಂದೆ ಬರಲು ಸಾಧ್ಯ. ಎಲ್ಲಿ ಧಾರ್ಮಿಕತೆಯು ನೆಲೆಗೊಳ್ಳುತ್ತಿದೆಯೋ ಅಲ್ಲಿ ಭಯ ಭಕ್ತಿಯ ನೆಲೆಯಿರುತ್ತದೆ ಎಂದರು. ಧಾರ್ಮಿಕ ಹಾಗೂ ಸಾಮಾಜಿಕ ನೇತಾರ ಕುಂಟಾರು ರವೀಶ ತಂತ್ರಿ ಮಾತನಾಡಿ, ಸನಾತನ ಹಿಂದೂ ಧರ್ಮಕ್ಕೆ ಅದರದ್ದೇ ಆದ ಗೌರವ ಇದೆ. ನಮ್ಮ ಸ್ವಾರ್ಥ ಚಿಂತನೆಯನ್ನು ಬಿಟ್ಟು ಮುನ್ನಡೆದಾಗ ಸಮಾಜ ಮೇಲೇರಲು ಸಾಧ್ಯವಾಗುತ್ತದೆ. ಶ್ರೀರಾಮನ ಆದರ್ಶವೇ ನಮಗೆಲ್ಲರಿಗೂ ದಾರಿದೀಪ. ಆತನ ಆದರ್ಶ ಜೀವನವನ್ನು ನಾವೆಲ್ಲರೂ ಪಾಲಿಸೋಣ ಎಂದರು.
Related Articles
Advertisement
ಟೆಂಡರ್ ಪ್ರಕ್ರಿಯೆಯಲ್ಲಿದೆಉಪ್ಪಿನಂಗಡಿ-ಹಿರೇಬಂಡಾಡಿ ರಸ್ತೆಯ ನಿನ್ನಿಕಲ್ಲಿಂದ ನೆಹರೂತೋಟ ತನಕ ರಸ್ತೆ ಐದೂವರೆ ಮೀ. ಅಗಲ, ಮರು ಡಾಮರು ಕಾಮಗಾರಿಗೆ 3.50 ಕೋಟಿ ರೂ.ಅನುದಾನ ಮಂಜೂರುಗೊಂಡಿದೆ. ಟೆಂಡರ್ ಆದ ತತ್‌ಕ್ಷಣ ಕಾಮಗಾರಿ ಆರಂಭಿ ಸಲಾಗುವುದು.
– ಸಂಜೀವ ಮಠಂದೂರು, ಶಾಸಕ, ಪುತ್ತೂರು ಅನುದಾನ ಮಂಜೂರು
ಕೊçಲ ಗ್ರಾಮದ ಗಂಡಿಬಾಗಿಲು ಎಂಬಲ್ಲಿಂದ ನೆಹರೂತೋಟ ಸಂಪರ್ಕಿಸುವ ರಸ್ತೆ ವಿಸ್ತೀರ್ಣ ಹಾಗೂ ಮರು ಡಾಮರು ಕಾಮಗಾರಿಗೆ 1.25 ಕೋಟಿ ರೂ. ಹಾಗೂ ಹಿರೇಬಂಡಾಡಿ ಗ್ರಾಮದ ನೆಹರೂತೋಟದಿಂದ ವಳಕಡಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಂಕ್ರೀಟ್ ಕಾಮಗಾರಿಗೆ 80 ಲಕ್ಷ ರೂ. ಅನುದಾನ ಮಂಜೂರುಗೊಂಡಿದ್ದು ಶೀಘ್ರ ಕೆಲಸ ಪ್ರಾರಂಭಗೊಳ್ಳಲಿದೆ.
– ಎಸ್.ಅಂಗಾರ, ಶಾಸಕ, ಸುಳ್ಯ