Advertisement

ಮನೆಯೊಳಗೆ ತಂಪಿರಲು ಜಾಲಾಂದ್ರವಿರಲಿ…

12:30 AM Dec 31, 2018 | |

ಜಾಲಾಂದ್ರಗಳು ಏರ್‌ ಕೂಲರ್‌ ಮಾದರಿಯಲ್ಲಿ ಕಾರ್ಯ ನಿರ್ವಹಿಸಬಲ್ಲವು.  ಈ ಜಾಲಾಂದ್ರಗಳ ಹಿಂದೆ ಅಂದರೆ, ಮನೆಯೊಳಗೆ, ಲಾವಾಂಚದಿಂದ ಮಾಡಿದ ಪರದೆಯ ಚಾಪೆಗಳನ್ನು ನೇತುಹಾಕಿ, ಅದರ ಮೇಲೆ ನೀರು ಸಿಂಪಡಿಸಿದರೆ, ಸುವಾಸನೆಯುಕ್ತ ತಂಗಾಳಿ ಒಳಹರಿದು ಬೇಸಿಗೆಯ ದಿನಗಳನ್ನು ಸಹನೀಯವಾಗಿಸುತ್ತದೆ. 

Advertisement

ಬಟ್ಟೆಬರೆಗಳಲ್ಲಿ ಹಳೆಯ ವಿನ್ಯಾಸಗಳು ಮರುಕಳಿಸುವಂತೆ ಮನೆಗಳ ವಿವಿಧ ಭಾಗಗಳ ಡಿಸೈನ್‌ಗಳಲ್ಲೂ ಕೆಲ ವರ್ಷಗಳೇನು; ದಶಕಗಳೇ ಉಪಯೋಗದಲ್ಲಿ ಇಲ್ಲದಂತಹವೂ ಮತ್ತೆ ಜನಪ್ರಿಯವಾಗುತ್ತಿದೆ. ಹಾಗೆಯೇ,  ಸುಮಾರು ಎರಡು ಸಾವಿರ ವರ್ಷಗಳ ಹಿಂದಿನಿಂದಲೂ ಇತ್ತೆನ್ನಬಹುದಾದ ಹಾಗೂ ಕಾನಿಷ್ಕನ ಶಿಲ್ಪದಲ್ಲಿಯೂ ಕಂಡುಬರುವಂಥ “ಸಲ್ವಾರ್‌’ದಿರಿಸು ಇಂದಿಗೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ! ಒಂದೆರಡು ದಶಮಾನಗಳಿಂದ ಕಣ್ಮರೆಯಾಗಿದ್ದ ಜಾಲಾಂದ್ರಗಳು ಈಗ ಹೊಸರೂಪ ಪಡೆದುಕೊಂಡು ಎಲ್ಲೆಡೆ ರಾರಾಜಿಸಲು ತೊಡಗಿವೆ. ಕೈಕೆಲಸದ ಕುಸುರಿಯಲ್ಲಿ ಮೂಡಿಬರುತ್ತಿದ್ದಾಗ ದುಬಾರಿ ಎಂದೆನಿಸುತ್ತಿದ್ದ, ಬಹುಶ ತನ್ನ ಜನಪ್ರಿಯತೆಯನ್ನು ಕಳೆದುಕೊಂಡದ್ದು, ಈಗ ಕಂಪ್ಯೂಟರ್‌ಗಳ ಸಹಾಯದಿಂದ ಯಂತ್ರಗಳಿಂದ ತಯಾರಾಗುವ ವಿವಿಧ ವಿನ್ಯಾಸದ ಜಾಲಾಂಧ್ರಗಳು ಎಲ್ಲೆಡೆ ಕಾಣಲು ಶುರುಮಾಡಿದೆ. 

“ವೆಂಚುರಿ ಎಫೆಕ್ಟ್ ‘
ದೊಡ್ಡ ಗಾತ್ರದ ಕಿಟಕಿಗಳಿಗಿಂತ ಸಣ್ಣ ಸಣ್ಣ ಕಿಂಡಿಗಳ ಮೂಲಕ ಗಾಳಿಯ ಹರಿವು ಹೆಚ್ಚಾಗಿದ್ದು, ಬಿಸಿಲಿನ ಬೇಗೆ ಹೆಚ್ಚಾದಾಗ ದೊಡ್ಡ ಕಿಟಕಿಗಳ ಅಗತ್ಯವೂ ಇಲ್ಲದಾಗ, ಜಾಲಾಂದ್ರಗಳು ಏರ್‌ ಕೂಲರ್‌ ಮಾದರಿಯಲ್ಲಿ ಕಾರ್ಯ ನಿರ್ವಹಿಸಬಲ್ಲವು.  ಈ ಜಾಲಾಂದ್ರಗಳ ಹಿಂದೆ ಅಂದರೆ, ಮನೆಯೊಳಗೆ, ಲಾವಾಂಚದಿಂದ ಮಾಡಿದ ಪರದೆಯ ಚಾಪೆಗಳನ್ನು ನೇತುಹಾಕಿ, ಅದರ ಮೇಲೆ ನೀರು ಸಿಂಪಡಿಸಿದರೆ, ಸುವಾಸನೆಯುಕ್ತ ತಂಗಾಳಿ ಒಳಹರಿದು ಬೇಸಿಗೆಯ ದಿನಗಳನ್ನು ಸಹನೀಯವಾಗಿಸುತ್ತದೆ. 

ಈ ಹಿಂದೆ ಗಾಜು ಹಾಕಿದ ಕಿಟಕಿಗಳು ಬರುವ ಮೊದಲು ನಮ್ಮಲ್ಲಿ ಕೆಳಗಿನ ಒಂದಡಿಯಷ್ಟು ಎತ್ತರಕ್ಕೆ ಜಾಲಾಂದ್ರ ಇಲ್ಲವೆ ಮರದ ಉರುಳುಗಳಿಂದ ಮಾಡಿದ ಗ್ರಿಲ್‌ ಮಾದರಿಯ ತೆರೆದ ಸ್ಥಳ ಇರುತ್ತಿತ್ತು. ಇದರ ಮೇಲೆ ಮರದ ಕಿಟಕಿಯ ಬಾಗಿಲು  ಇರುತ್ತಿದ್ದು, ಈ ಬಾಗಿಲುಗಳನ್ನು ಮುಚ್ಚಿದರೂ, ಜಾಲಾಂದ್ರಗಳಿಂದ ಬರುತ್ತಿದ್ದ ಗಾಳಿಯಿಂದಾಗಿ,  ಮನೆ ಸದಾ ತಂಪಾಗಿರಲು ಸಹಾಕಾರಿಯಾಗಿತ್ತು. ಇತ್ತೀಚೆಗೆ ಹಳೆ ಮಾದರಿಯಲ್ಲಿದ್ದಂತೆಯೇ,  ಕಿಟಕಿಯ ಕೆಳ ಭಾಗದಲ್ಲಿ ಸ್ಟೀಲ್‌ ಅಥವಾ ಮರದ ಕಟ್‌ ಸ್ಕ್ರೀನ್‌ ಅಳವಡಿಸಿ, ಸದಾ ಗಾಳಿಯಾಡುವಂತೆ ಮಾಡುವುದು ಶುರುವಾಗಿದೆ. ಇದು ಆರೋಗ್ಯದ ದೃಷ್ಟಿಯಿಂದಲೂ ಕೂಡ ಒಳ್ಳೆಯದು. ಗಾಳಿ ಬೇಕೇ ಬೇಕು. ಆದರೆ ಬೇಸಿಗೆಯಲ್ಲಿ ಬಿಸಿಗಾಳಿಯಲ್ಲ. ಬೆಳಕೂ ಬೇಕು. ಆದರೆ ಬಿಸಿಲಲ್ಲ. ನಮಗೆ ಮಾತ್ರ ಹೊರಗೆ ಕಾಣಿಸಬೇಕು, ಅದರೆ ನಾವು ಹೊರಗಿನವರಿಗೆ ಕಾಣಿಸಬಾರದು. ಈ ರೀತಿಯ ವೈರುದ್ಯಮಯ ಅಗತ್ಯಗಳಿರಬೇಕಾದರೆ ಸೂಕ್ತರೀತಿಯಲ್ಲಿ ಕಾರ್ಯ ನಿರ್ವಹಿಸುವುದರಲ್ಲಿ ಎತ್ತಿದ ಕೈ ಕಟ್‌ಸ್ಕ್ರೀನ್‌ನದು. ಇತ್ತೀಚಿನ ದಿನಗಳಲ್ಲಿ ಮತ್ತೆ ಜನಪ್ರಿಯವಾಗುತ್ತಿರುವ  “ಲ್ಯಾಟಿಸ್‌ ಸ್ಕ್ರೀನ್‌’ ಜಾಲಾಂದ್ರಗಳ ಬಳಕೆ ನಿಜಕ್ಕೂ ಸ್ವಾಗತಾರ್ಹ.

ಬಾಲ್ಕನಿ -ಪ್ಯಾರಾಪೆಟ್‌ 
ಗಾಜು  ತೀರಾ ಪಾರದರ್ಶಕವಾಗಿದ್ದು ಬಾಲ್ಕನಿಯ ರೇಲಿಂಗ್‌ ಪ್ಯಾರಾಪೆಟ್‌ ಗಳಲ್ಲಿ ಬಳಸಿದರೆ, ಕುರ್ಚಿಯ ಮೇಲೆ ಕೂತು ಕಾಲಮೇಲೆ ಕಾಲು ಹಾಕಿಕೊಂಡು ಬಾಲ್ಕನಿಗಳಲ್ಲಿ ಕೂರಲು ಹೆಂಗಸರಿಗೆ ಮುಜುಗರ ಆಗಬಹುದು. ಅದೇ ನೀವು ಸ್ಟೈನ್‌ಲೆಸ್‌ ಸ್ಟೀಲ್‌ ಕಟ್‌ ಸ್ಕ್ರಿನ್‌ ಬಳಸಿದರೆ, ಕೆಳಗಿನಿಂದ ನೋಡಿದರೆ ಜಾಲಾಂದ್ರದ ಮೇಲ್ಮೆ„ಮಾತ್ರ ಕಾಣಿಸುವುದರಿಂದ, ಅದರ ಹಿಂದೆ, ಅರ್ಧ ನೆರಳಿನಲ್ಲಿ ಇರುವವರು ಕಣ್ಣಿಗೆ ಬೀಳುವುದಿಲ್ಲ. ಈ ಅಂಶ ಹೊಸದಾಗಿ ಪತ್ತೆಯಾದದ್ದೇನಲ್ಲ. ನೂರಾರು ವರ್ಷಗಳಿಂದ ಪ್ರಮುಖವಾಗಿ ರಾಜಾಸ್ಥಾನ ಹಾಗೂ ಇತರೆಡೆಗಳಲ್ಲಿ, ರಾಣಿವಾಸದವರೂ ಕೂಡ ಈ ಮಾದರಿಯ ಜಾಲಾಂದ್ರಗಳ ಹಿಂದೆ ಕೂತು, ತಾವು ಹೊರಗೆ ನೋಡುತ್ತ, ಆದರೆ ಹೊರಗಿನವರ ಕಣ್ಣಿಗೆ ಕಾಣದೆ ಇರಲು ಕಲ್ಲಿನಲ್ಲಿ ಕಡೆದ ಸ್ಕ್ರೀನ್‌ಗಳು ಸಹಾಯಕಾರಿಯಾಗಿದ್ದವು. 

Advertisement

ವಿನ್ಯಾಸ ಸುಲಭ
ಒಮ್ಮೆ ವಿನ್ಯಾಸ ಮಾಡಿ ಗಣಕ ಯಂತ್ರಕ್ಕೆ ಒಪ್ಪಿಸಿದರೆ, ಅದು ತನ್ನ ಅಧೀನದಲ್ಲಿರುವ ಡಿಸೈನ್‌ ಕತ್ತರಿಸುವ ಯಂತ್ರಕ್ಕೆ ನೀಡಿ, ಹಗಲು ರಾತ್ರಿಯೆನ್ನದೆ ತಿರುಗಿ ತಿರುಗಿ ಕೆಲಸ ಮುಗಿಯುವವರೆಗೂ ನಿಲ್ಲುವುದಿಲ್ಲ. ಕೈಯಲ್ಲಿ ಕೆತ್ತಲು ಕಷ್ಟಸಾಧ್ಯ ಕಾರ್ಯಗಳನ್ನೂ ಕೂಡ ಕಂಪ್ಯೂಟರ್‌ ನಿಯಂತ್ರಿತ ಯಂತ್ರಗಳು ಸರಾಗವಾಗಿ ಕತ್ತರಿಸಬಲ್ಲವು. ಮರವಿರಲಿ, ಸ್ಟೆನ್‌ ಲೆಸ್‌ ಸ್ಟೀಲ್‌, ಹಿತ್ತಾಳೆ, ಗಾಜು – ವಸ್ತು ಏನೇ ಇರಲಿ, ವಿನ್ಯಾಸದಂತೆ ಹೆಚ್ಚು ವಸ್ತುಗಳು ಹಾಳಾಗದ ರೀತಿಯಲ್ಲಿ ಕೊರೆದು ಹಾಕಿಬಿಡುತ್ತದೆ. ಕುಶಲ ಕರ್ಮಿಗಳಾದರೆ, ಅವರಿಗೆ ಮನಸ್ಸು- ಮೂಡ್‌ ಇದ್ದರೆ ಕೆಲಸ ಬೇಗ ಆಗುತ್ತದೆ.  ಕಾಫಿ ಟೀ ಕುಡಿಯಲು ಪದೇಪದೇ ಹೋಗುತ್ತಿದ್ದರೆ, ಅನಿವಾರ್ಯವಾಗಿ ವಾರಗಟ್ಟಲೆ ತೆಗೆದುಕೊಳ್ಳುತ್ತಿದ್ದ ಕೆಲಸದ ಬಗ್ಗೆ ಹೈರಾಣಾದ ಜನ, ಜಾಲಾಂಧ್ರದ ಗೋಜಿಗೆ ಹೋಗುತ್ತಿರಲಿಲ್ಲ. ಈಗ ಕ್ಲಿಷ್ಟಕರ ವಿನ್ಯಾಸಗಳೂ ಸರಳವಾಗಿ ಕತ್ತರಿಸಲ್ಟ್ಪಡುವುದರಿಂದ ಜಾಲಾಂದ್ರಗಳು ಮತ್ತೆ ಜನಪ್ರಿಯವಾಗಿದೆ.

ಇದರಿಂದ ಲಾಭ
ಗಾಜು ತೀರಾ ಪಾರದರ್ಶಕವಾಗಿರುತ್ತದೆ. ಇತರೆ ವಸ್ತುಗಳು ಎಲ್ಲವನ್ನೂ ಮುಚ್ಚಿಡುತ್ತದೆ. ಹಾಗಾಗಿ, ನಮಗೆ ಎಷ್ಟು ಬೇಕೋ ಅಷ್ಟು ಮಾತ್ರ ತೆರೆದುಕೊಳ್ಳಲು ಜಾಲಾಂದ್ರಗಳು ಅನುಕೂಲಕರ. ಸಾಕಷ್ಟು ಬೆಳಕನ್ನು ಒಳಗೆ ಬಿಡುತ್ತಲೇ ನೆರಳಿನ ಅನುಭವವನ್ನೂ ನೀಡುತ್ತದೆ.  ಗಾಳಿಯ ಹರಿವಿಗೆ ಅಡೆತಡೆಮಾಡದೆ ಇರುವುದರಿಂದಲೇ ವಿವಿಧ ವಿನ್ಯಾಸದ ಸ್ಕಿ$›àನ್‌ಗಳು ಬಿಸಿಲು ಹೆಚ್ಚಿರುವ ಹಾಗೂ ಗಾಳಿ ಹರಿಯುವುದು ಅನಿವಾರ್ಯ ಆಗಿರುವ ಭಾರತದಂತಹ ದೇಶಗಳಲ್ಲಿ, ಜಾಲಾಂದ್ರಗಳು ನೂರಾರು ವರ್ಷಗಳಿಂದ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿವೆ. 

ಉಕ್ಕು ನಿರೋಧಕ ಗುಣ ಹೊಂದಿರುವ ಉಕ್ಕಿನ ಹಾಳೆ ಒಂದು ಉತ್ತಮ ವಸ್ತುವಾಗಿದ್ದು ಅದನ್ನು ಇಡಿಯಾಗೇ ಬಳಸಿದರೆ, ಮನೆಗಳು “ಡಬ್ಬ’ದಂತೆ ಕಾಣುವ ಭಯ ಇರುವ ಕಾರಣ, ಅದರ ಮೈಯಲ್ಲಿ ವಿವಿಧ ವಿನ್ಯಾಸದ ಕಟ್ಟಿಂಗ್‌ಗಳನ್ನು ಮಾಡಿದರೆ, ಅದು ತನ್ನ ಮಟ್ಟಸವಾದ ಮೇಲ್ಮೆ„ ಗುಣವನ್ನೂ ಮೀರಿದ ಮೂರನೇ ಆಯಾಮವನ್ನು ಪಡೆದುಕೊಳ್ಳುತ್ತದೆ! ಬಿಸಿಲಿಗೆ ಒಡ್ಡಿದರೂ ಗಾಳಿಯ ಹರಿವು ಇರುವುದರಿಂದ, ಬಿಸಿಯೇರದೆ ಸ್ಥಾನದಲ್ಲಿ ತಂಪಾಗಿ ತನ್ನ ಕಾರ್ಯವನ್ನು ನಿರ್ವಹಿಸುತ್ತದೆ.

ರಾಜಸ್ಥಾನದ ಹವಾ ಮಹಲ್‌
ರಾಜಾಸ್ಥಾನದ ಬಿರುಬೇಸಿಗೆಯಲ್ಲಿಯೂ ತಣ್ಣಗಿರುವುದರಲ್ಲಿ ಖ್ಯಾತಿ ಪಡೆದಿರುವ “ಗಾಳಿ ಗೋಪುರ’ ದಲ್ಲಿ ಪ್ರಮುಖ ಪಾತ್ರ ವಹಿಸುವುದು ಆ ಕಟ್ಟಡದಲ್ಲಿ ಉಪಯೋಗಿಸಿರುವ ನೂರಾರು ಜಾಲಾಂದ್ರಗಳು.  ಕಲ್ಲಿನಲ್ಲಿ ಕಡೆದ ಈ ಜಾಲಾಂದ್ರಗಳು ಬಿಸಿ ಗಾಳಿಯನ್ನೂ ಒಂದು ಮಟ್ಟದವರೆಗೂ ತಂಪಾಗಿಸಿ, ಒಳಗೆ ಹರಿಯಲು ಬಿಡುವುದರಿಂದ, ಅಂಥ ವಾತಾವರಣದಲ್ಲೂ ಸಹನೀಯವಾದ ಒಳಾಂಗಣವನ್ನು ಸೃಷ್ಟಿಸುತ್ತದೆ.

ಮಾಹಿತಿಗೆ-98441 32826 

ಆರ್ಕಿಟೆಕ್ಟ್ ಕೆ. ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next