Advertisement

ಎರಡು ದಿನ ಭೇಟಿ ಕೊಟ್ಟವರ ಸಂಖ್ಯೆ ಲಕ್ಷಕ್ಕೂ ಅಧಿಕ

01:24 AM Aug 13, 2019 | Team Udayavani |

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫ‌ಲಪುಷ್ಪ ಪ್ರದರ್ಶನ ವೀಕ್ಷಿಸಲು ರಜಾ ದಿನಗಳಾದ ಭಾನುವಾರ ಮತ್ತು ಸೋಮವಾರ ಒಂದು ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದಾರೆ. ಭಾನುವಾರ ಹಾಗೂ ಬಕ್ರೀದ್‌ ಹಬ್ಬದ ಅಂಗವಾಗಿ ಸೋಮವಾರ ರಜೆ ದಿನವಾದ್ದರಿಂದ ಎರಡೂ ದಿನಗಳು ಉದ್ಯಾನಕ್ಕೆ ಜನಸಾಗರ ಹರಿದು ಬಂದಿತ್ತು.

Advertisement

ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆಯ ನಡುವೆ ಹಸಿರು ಪರಿಸರ ಹಾಗೂ ಹೂಗಳಿಂದ ಅರಳಿದ ಕಲಾಕೃತಿ ನೋಡಿ ಖುಷಿಪಟ್ಟರು. ಬಾಲರಾಜ್‌ ಎಂಬುವರು ನೇತೃತ್ವದಲ್ಲಿ ದೃಷ್ಟಿ ವಿಕಲಚೇತನರ ತಂಡದಿಂದ ಸೋಮವಾರ ಬೆಳಗ್ಗೆ 11ರಿಂದ ವಾದ್ಯಗೋಷ್ಠಿ ನಡೆಯಿತು. ಕರ್ನಾಟಕ ಇತಿಹಾಸವನ್ನು ಬಿಂಬಿಸುವ ಹಾಡಗಳನ್ನು ಹಾಡಿ ಫ‌ಲಪುಷ್ಪ ಪ್ರದರ್ಶನ ವೀಕ್ಷಣೆಗೆ ಬಂದಿದ್ದ ಜನರನ್ನು ರಂಜಿಸಿದರು.

ಫ‌ಲಪುಷ್ಪ ಪ್ರದರ್ಶನ ವೀಕ್ಷಿಸಲು ಬಂದಿದ್ದ ಜನರನ್ನು ನಿಯಂತ್ರಿಸಲು ಪೊಲೀಸ್‌ ಸಿಬ್ಬಂದಿ ಜತೆಗೆ ಸ್ವಯಂ ಸೇವಕರು, ಇಲಾಖೆ ಸಿಬ್ಬಂದಿ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಜೈನ್‌ ಕಾಲೇಜಿನ ಯುವಕರು ನೀರಿನ ಸಂರಕ್ಷಣೆಗಾಗಿ ಅರಣ್ಯ ಉಳಿಸಿ ಎಂದು ಜಾಗೃತಿ ಫಲಕಗಳನ್ನು ಪ್ರದರ್ಶಿಸುವ ಮೂಲಕ ಅರಿವು ಮೂಡಿಸಿದರು.

ಎರಡು ದಿನ ಭೇಟಿ ಕೊಟ್ಟವರ ಸಂಖ್ಯೆ ಲಕ್ಷಕ್ಕೂ ಅಧಿಕ: “ಭಾನುವಾರ ವಯಸ್ಕರು ಮತ್ತು ಮಕ್ಕಳು ಸೇರಿ ದಂತೆ 60,500 ಮಂದಿ ವೀಕ್ಷಣೆಗೆ ಆಗಮಿಸಿದ್ದು, ಒಂದೇ ದಿನ 29.86 ಲಕ್ಷ ರೂ. ಹಾಗೂ ಸೋಮವಾರ ವಯಸ್ಕರು 40,350 ಹಾಗೂ ಮಕ್ಕಳು 10,150 ಮಂದಿ ಆಗಮಿಸಿದ್ದು, ಒಟ್ಟು 27.56 ಲಕ್ಷ ರೂ.ಸಂಗ್ರಹವಾಗಿದೆ’ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next