Advertisement

ಬಾಹ್ಯಾಕಾಶ ನಿಲ್ದಾಣದಲ್ಲಿ ವಿಜ್ಞಾನಿಗಳ ಸಂಖ್ಯೆ 11ಕ್ಕೇರಿಕೆ

11:55 PM Apr 25, 2021 | Team Udayavani |

ವಾಷಿಂಗ್ಟನ್‌: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಖಗೋಳ ವಿಜ್ಞಾನಿಗಳ ಸಂಖ್ಯೆ ಶನಿವಾರ 11ಕ್ಕೆ ಏರಿದೆ.

Advertisement

ನಿಲ್ದಾಣದಲ್ಲಿ ಈವರೆಗೆ ಇಷ್ಟು ಖಗೋಳಯಾತ್ರಿಗಳು ಒಟ್ಟಿಗೆ ಸೇರಿ ಕೆಲಸ ಮಾಡುತ್ತಿರುವುದು ಇದೇ ಮೊದಲು. ಅಮೆರಿಕ, ರಷ್ಯಾ, ಜಪಾನ್‌ ಹಾಗೂ ಫ್ರಾನ್ಸ್‌ ದೇಶದವರು ಅಲ್ಲಿದ್ದಾರೆ. ಶುಕ್ರವಾರದವರೆಗೆ ಅಲ್ಲಿ 7 ವಿಜ್ಞಾನಿಗಳಿದ್ದರು.

ಶನಿವಾರದಂದು ಸ್ಪೇಸ್‌ ಎಕ್ಸ್‌ ರಾಕೆಟ್‌ನಲ್ಲಿ ಇಲ್ಲಿಗೆ ನಾಲ್ವರು ವಿಜ್ಞಾನಿಗಳು ಬಂದು ಸೇರಿದ್ದಾರೆ. ಹಾಗಾಗಿ, ಅಲ್ಲೀಗ 11 ವಿಜ್ಞಾನಿಗಳಿದ್ದು ಈವರೆಗಿನ ದಾಖಲೆಯಾಗಿದೆ.

ಈ ಹಿನ್ನೆಲೆಯಲ್ಲಿ, ಆ ವಿಜ್ಞಾನಿಗಳ ತವರು ರಾಷ್ಟ್ರಗಳ ಬಾಹ್ಯಾಕಾಶ ಸಂಸ್ಥೆಗಳ ಮುಖ್ಯಸ್ಥರು, ಅಭಿನಂದನೆ ಸಲ್ಲಿಸಲು ವೀಡಿಯೋ ಕಾಲ್‌ ಮಾಡಿದ್ದು, ಆ ವೇಳೆ ಎಲ್ಲ ವಿಜ್ಞಾನಿಗಳು ಏಕಕಾಲದಲ್ಲಿ ಪರದೆ ಮೇಲೆ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಒಂದು ಐತಿಹಾಸಿಕ ದಾಖಲೆಯೆನಿಸಲಿದೆ ಎಂದು ಬಾಹ್ಯಾಕಾಶ ತಜ್ಞರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next