Advertisement
ಗಿಡಗಳು ಕಡಿಮೆಪ್ರತಿವರ್ಷ ಸೆಪ್ಟಂಬರ್‌ನಲ್ಲಿ ಅರಣ್ಯ ಇಲಾಖೆ ಗಿಡಗಳನ್ನು ನಾಟಿ ಮಾಡುತ್ತದೆ. ಈ ಗಿಡಗಳು ಮುಂದಿನ ವರ್ಷ ವಿತರಣೆ ಆಗಲಿದೆ. ಅಂದರೆ 2017-18ನೇ ಸಾಲಿನಲ್ಲಿ ನಾಟಿ ಮಾಡಿದ ಸಸಿಗಳು, 2018ನೇ ಜೂನ್- ಜುಲೈನಲ್ಲಿ ವಿತರಣೆ ಮಾಡಲಾಗುತ್ತಿದೆ. 2018-19ನೇ ಸಾಲಿನಲ್ಲಿ ನಾಟಿ ಮಾಡಬೇಕಾಗಿರುವ ಗಿಡಗಳನ್ನು ಮುಂದಿನ ವರ್ಷಕ್ಕೆ ನೀಡಲಾಗುತ್ತದೆ. ಅಂದರೆ ಈ ವರ್ಷ ವಿತರಣೆ ಆಗಲಿರುವ ಗಿಡಗಳ ಪ್ರಮಾಣ ದಲ್ಲಿ 1 ಲಕ್ಷದಷ್ಟು ಇಳಿಕೆ ಕಂಡಿದೆ.
ಸಂರಕ್ಷಿತ ಅರಣ್ಯ ಪ್ರದೇಶಗಳ ತಪ್ಪಲಿನ ಪ್ರದೇಶದ ಹೆಚ್ಚಿನ ಭಾಗದಲ್ಲಿ ಗಿಡಗಳನ್ನು (ನೆಡುತೋಪು) ನೆಟ್ಟು ಬೆಳೆಸಲಾಗಿದೆ. ಇನ್ನು ನೆಡಬೇಕಾಗಿರುವ ಪ್ರದೇಶ ಅರಣ್ಯದ ಒಳಗಿನ ಪ್ರದೇಶ. ಇಲ್ಲಿಗೆ ಗಿಡಗಳನ್ನು ಸಾಗಿಸುವುದು, ಕೂಲಿ ಕಾರ್ಮಿಕರ ರವಾನೆ, ಓಡಾಟ ಕಷ್ಟ. ರಸ್ತೆ ಇಲ್ಲದೇ ಇರುವುದರಿಂದ, ಕಾಲು ನಡಿಗೆಯಲ್ಲೇ ಸಾಗಬೇಕು. ಒಬ್ಬ ಕೂಲಿಯಾಳು ಒಮ್ಮೆ ಕಾಡಿನ ಒಳಗಡೆ ಹೋಗುವಾಗ 1-2 ಗಿಡಗಳನ್ನಷ್ಟೇ ಹೊತ್ತು ಕೊಂಡೊಯ್ಯಬಹುದು. ಅದೂ 6-8 ಕಿಲೋಮೀಟರ್ ದೂರ ನಡಿಗೆ ಯಲ್ಲಿ ಸಾಗಿದರೆ ದಿನಕ್ಕೆ ಒಬ್ಬ 4-6 ಗಿಡಗಳನ್ನಷ್ಟೇ ರವಾನೆ ಮಾಡಬಹುದು. ಬಳಿಕ ಗಿಡಗಳನ್ನು ನೆಟ್ಟು ಬೆಳೆಸುವ ಕೆಲಸ ಬೇರೆಯೇ ಇದೆ. ಈ ಹಿನ್ನೆಲೆಯಲ್ಲಿ ಗಿಡಗಳ ಸಂಖ್ಯೆ ಕಡಿಮೆ ಮಾಡಿದ್ದಾಗಿ ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಖರ್ಚು, ತ್ರಾಸದಾಯಕ ಕೆಲಸ ತಪ್ಪಿಸುವ ಉದ್ದೇಶದಿಂದ ಹಿಂದಿನ ವರ್ಷ ಸೀಡ್ ಬಾಲ್ (ಮಣ್ಣಿನ ಬೀಜದುಂಡೆ) ನ್ನು ಕಾಡಿಗೆ ಎಸೆಯುವ ಯೋಜನೆಗೆ ಚಾಲನೆ ನೀಡಲಾಗಿತ್ತು. ಇದು ದೊಡ್ಡ ಪ್ರಮಾಣದಲ್ಲಿ ಯಶಸ್ಸು ಕಂಡಂತೆ ಕಾಣುತ್ತಿಲ್ಲ. ಮಂಗಳೂರು ವಿಭಾಗ ವ್ಯಾಪ್ತಿಯಲ್ಲಿರುವ 1.13 ಲಕ್ಷ ಹೆಕ್ಟೇರ್ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ 6.10 ಲಕ್ಷ ಗಿಡಗಳು ಈ ಬಾರಿ ನಾಟಿ ಕಾರ್ಯಕ್ಕೆ ಬಳಕೆ ಆಗಲಿದೆ. ಆದರೆ ಹಿಂದಿನ ವರ್ಷ 7.55 ಲಕ್ಷದಷ್ಟು ಗಿಡಗಳು ನಾಟಿ ಆಗಿವೆ. ಸಾರ್ವಜನಿಕ ವಿತರಣೆಯಲ್ಲಿ 53 ಸಾವಿರದಷ್ಟು ಏರಿಕೆ ಕಂಡಿದೆ.
Related Articles
ಪುತ್ತೂರು ವಲಯ ಅರಣ್ಯಾಧಿಕಾರಿ ವ್ಯಾಪ್ತಿಗೆ ಬರುವ ಜಾಲ್ಸೂರು ನರ್ಸರಿ ಮಂಗಳೂರು ವಿಭಾಗದ ಅತಿದೊಡ್ಡ ನರ್ಸರಿ. ಪ್ರತಿವರ್ಷ ಪುತ್ತೂರು ವಲಯದ ಗಿಡಗಳನ್ನು ಇಲ್ಲಿಯೇ ನಾಟಿ ಮಾಡಲಾಗುತ್ತದೆ. 2016-17ರಲ್ಲಿ 1.58 ಲಕ್ಷದಷ್ಟು ಗಿಡಗಳನ್ನು ಬೆಳೆಸಲಾಗಿತ್ತು. ಈ ವರ್ಷ 82 ಸಾವಿರಕ್ಕೆ ಇಳಿಸಲಾಗಿದೆ. ಅತಿದೊಡ್ಡ ನರ್ಸರಿಯೊಂದರಲ್ಲೇ 76255 ಗಿಡಗಳ ಸಂಖ್ಯೆ ಕಡಿಮೆ ಆಗಿದೆ. ಇದರಲ್ಲಿ 15 ಸಾವಿರ ಗಿಡಗಳನ್ನು ಸಾರ್ವಜನಿಕ ಬಳಕೆಗೆ ನೀಡಿದರೆ, 67 ಸಾವಿರದಷ್ಟು ಗಿಡಗಳನ್ನು ನೆಡುತೋಪಿಗೆ ಬಳಸಿಕೊಳ್ಳಲಾಗುತ್ತಿದೆ.
Advertisement
ಸಬ್ಸಿಡಿ ನೀಡುತ್ತಿದೆಜಾಗ ಇದ್ದ ಕಡೆಗಳಲ್ಲಿ ಗಿಡಗಳನ್ನು ನೆಡುತ್ತಿದ್ದೇವೆ. ಈ ವರ್ಷ 1 ಸಾವಿರ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಗಿಡ ನೆಡಲು ಹಾಗೂ ಗಿಡಗಳ ಸಂಖ್ಯೆಯನ್ನು 10 ಲಕ್ಷದಷ್ಟು ಹೆಚ್ಚಿಸಲು ಯೋಜನೆ ರೂಪಿಸಲಾಗುವುದು. ಸೆಪ್ಟಂಬರ್ ಬಳಿಕವಷ್ಟೇ ಗಿಡಗಳ ನಾಟಿ ನಡೆಯಲಿದೆ. ಸಾರ್ವಜನಿಕರು ಗಿಡ ನೆಡಬೇಕು ಎಂಬ ದೃಷ್ಟಿಯಿಂದ ಸರಕಾರದಿಂದ ಸಬ್ಸಿಡಿಯನ್ನು ನೀಡಲಾಗುತ್ತಿದೆ.
– ಡಾ| ವಿ. ಕರಿಕಾಲನ್,
ಉಪಅರಣ್ಯ ಸಂರಕ್ಷಣಾಧಿಕಾರಿ,
ಮಂಗಳೂರು ವಿಭಾಗ ಗಣೇಶ್ ಎನ್. ಕಲ್ಲರ್ಪೆ