Advertisement
ಈತನ ಬಂಧನದಿಂದ 6 ಕಳವು ಪ್ರಕರಣಗಳು ಪತ್ತೆಯಾಗಿದ್ದು, 30 ಲಕ್ಷ ರೂ. ಮೌಲ್ಯದ 850 ಗ್ರಾಂ ಚಿನ್ನಾಭರಣ, 850 ಗ್ರಾಂ ಬೆಳ್ಳಿ ವಸ್ತುಗಳು, ಒಂದು ಸ್ವಿಫ್ಟ್ ಕಾರು, 50 ಇಂಚಿನ ಎರಡು ಟಿವಿ ಮತ್ತು ಆಯುಧಗಳನ್ನು ವಶಕ್ಕೆ ಪಡೆಯಲಾಗಿದೆ.
Related Articles
Advertisement
ದೇವರೇ ಶ್ರೀರಕ್ಷೆ: ಆರೋಪಿ ಮಂಜ, 10ನೇ ತರಗತಿ ಮುಗಿಯುತ್ತಿದ್ದಂತೆ ಕಳ್ಳತನಕ್ಕೆ ಇಳಿದಿದ್ದ. ಯಾರೊಟ್ಟಿಗೂ ಸೇರದ ಈತ ಕೃತ್ಯವೆಸಗುತ್ತಿದ್ದ. ರಾಮಮೂರ್ತಿನಗರದ ಕಲ್ಕೇರೆಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಮಂಜ, ಪರಿಚಿತ ಪ್ರದೇಶಗಳಲ್ಲಿ ಮಾತ್ರ ಕಳವು ಮಾಡುತ್ತಿದ್ದ.
ಕಳವು ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಇಲ್ಲಿನ ದೇವಾಲಯಗಳಲ್ಲಿ ಮಲಗುತ್ತಿದ್ದ. ವಿಶೇಷವೆಂದರೆ ಯಾವುದೇ ಸಂದರ್ಭದಲ್ಲಿಯೂ ಪೊಲೀಸರು ದೇವಾಲಯದ ಮೇಲೆ ಪೊಲೀಸರು ಬಂದು ಪರಿಶೀಲನೆ ನಡೆಸುವುದಿಲ್ಲ ಎಂಬ ನಂಬಿಕೆ ಮೇಲೆ ಈ ರೀತಿ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
44 ಕೇಸ್, 20 ಕ್ಲೀನ್‌ಚೀಟ್: 15 ವರ್ಷದ ಕಳ್ಳತನ ಜೀವನದಲ್ಲಿ ಈತನ ವಿರುದ್ಧ 44 ಪ್ರಕರಣಗಳು ದಾಖಲಾಗಿದ್ದು, 20 ಪ್ರಕರಣಗಳು ಖುಲಾಸೆಯಾಗಿವೆ. ಇನ್ನುಳಿದ 24 ಪ್ರಕರಣಗಳ ವಿಚಾರಣೆ ಬಾಕಿಯಿದೆ. ಎರಡು ವರ್ಷಗಳ ಹಿಂದೆ ಜೈಲು ಸೇರಿದ್ದ ಮಂಜುನಾಥ್, ಬಿಡುಗಡೆಯಾದ ಐದೇ ದಿನಗಳಲ್ಲಿ ಹಾಸನದಲ್ಲಿ ಮನೆಯೊಂದರ ಕಳ್ಳತನ ಮಾಡಿದ್ದ. ಇಲ್ಲಿ 550 ಗ್ರಾಂ ಚಿನ್ನ ಕದ್ದು ಐಷಾರಾಮಿ ಜೀವನ ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದರು.
ಕಾರು ಖರೀದಿ: ಹಾಸನದಲ್ಲಿ ಕಳವು ಮಾಡಿದ್ದ ಚಿನ್ನಾಭರಣ ಮಾರಾಟ ಮಾಡಿ ಸ್ವಿಫ್ಟ್ ಕಾರು ಖರೀದಿಸಿದ್ದ. ಇದೇ ಕಾರಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಹೋಗಿ ಒಂಟಿ ಮನೆಗಳು, ಬೀಗ ಹಾಕಿದ ಮನೆಗಳನ್ನು ಪತ್ತೆ ಹಚ್ಚಿ ಕಳವು ಮಾಡುತ್ತಿದ್ದ. ಅದಕ್ಕಾಗಿ ಕಾರಿನಲ್ಲಿ ಆಯುಧಗಳನ್ನು ಕೂಡ ಇಟ್ಟಿದ್ದ. ಮನೆ ಬೀಗವನ್ನು ಸುಲಭವಾಗಿ ಮುರಿಯುವ ಸಲುವಾಗಿ ಎರಡು ಚೂಪೂಗೊಳಿಸಿದ ಕಬ್ಬಿಣದ ರಾಡ್ ಯಾವಾಗಲೂ ಕಾರಿನಲ್ಲಿರುತ್ತಿತ್ತು.
ಟಿವಿ ಕೊಟ್ಟ ಮಾಹಿತಿ!: ಕಳ್ಳತನಕ್ಕೆ ಹೋದಾಗ 50 ಇಂಚಿನ ಎರಡು ಟಿವಿಗಳನ್ನು ಕಳ್ಳತನ ಮಾಡಿದ್ದ ಮಂಜುನಾಥ್, ಈ ಪೈಕಿ ಒಂದನ್ನು ಅಡವಿಟ್ಟು ಹಣ ಪಡೆದುಕೊಳ್ಳುವ ಸಲುವಾಗಿ ಶಿವಾಜಿನಗರಕ್ಕೆ ಬಂದಿದ್ದ. ಟಿವಿ ಅಡವಿಡಲು ಬಂದವನ ಮೇಲೆ ಸಾಕಷ್ಟು ಅನುಮಾನ ಬಂದ ಹಿನ್ನೆಲೆಯಲ್ಲಿ ಬಾತ್ಮೀದಾರರೊಬ್ಬರು ಭಾರತೀನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಸಂಬಂಧ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಯ ಕಳ್ಳ ಚರಿತ್ರೆ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.