ದುಬೈ: 2022ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮಿಂಚು ಹರಿಸಿದ ಉದಯೋನ್ಮುಖ ಆಟಗಾರನ್ನು ಗುರುತಿಸುವ ಐಸಿಸಿ ಪ್ರಶಸ್ತಿ ಪಟ್ಟಿಯಲ್ಲಿ ಭಾರತದ ಯುವ ವೇಗಿ ಅರ್ಶದೀಪ್ ಸಿಂಗ್ ಸ್ಥಾನ ಪಡೆದಿದ್ದಾರೆ.
ಐಸಿಸಿಯು ಇಂದು ವರ್ಷದ ಉದಯೋನ್ಮುಖ ಆಟಗಾರ ಪ್ರಶಸ್ತಿಯ ನಾಲ್ವರು ನಾಮಿನೇಶನ್ ಗಳನ್ನು ಪ್ರಕಟಿಸಿದೆ. ಅದರಲ್ಲಿ ಇಬ್ಬರು ಎಡಗೈ ಬೌಲರ್ ಗಳು ಮತ್ತು ಇಬ್ಬರು ಬ್ಯಾಟರ್ ಗಳಿದ್ದಾರೆ.
ಭಾರತದ ಅರ್ಶದೀಪ್ ಸಿಂಗ್, ದಕ್ಷಿಣ ಆಫ್ರಿಕಾದ ಮಾರ್ಕೊ ಜೆನ್ಸನ್, ಫಿನ್ ಅಲೆನ್ ಮತ್ತು ಅಫ್ಘಾನಿಸ್ಥಾನದ ಇಬ್ರಾಹಿಂ ಜರ್ದಾನ್ ಅವರು ಈ ಪ್ರಶಸ್ತಿಗೆ ನಾಮಿನೇಟ್ ಆಗಿದ್ದಾರೆ.
ಐಪಿಎಲ್ ನಲ್ಲಿ ಮಿಂಚಿದ್ದ ಎಡಗೈ ವೇಗಿ ಅರ್ಶದೀಪ್ ಸಿಂಗ್ ಭಾರತಕ್ಕಾಗಿ 21 ಟಿ20 ಪಂದ್ಯಗಳನ್ನು ಆಡಿ 8.17 ರ ಎಕಾನಮಿಯಲ್ಲಿ 33 ವಿಕೆಟ್‌ಗಳನ್ನು ಪಡೆದಿದ್ದಾರೆ. ಪವರ್ ಪ್ಲೇ ಮತ್ತು ಡೆತ್-ಓವರ್ ಬೌಲರ್ ಆಗಿರುವ ಅರ್ಶದೀಪ್ ಈಗಲೇ ತಂಡದ ಪ್ರಮುಖ ಬೌಲರ್ ಆಗಿದ್ದಾರೆ.