Advertisement

ಹೊಸ ಶಿಕ್ಷ ಣ ನೀತಿ ಸಮಾಜಕ್ಕೆ ಮಾರಕ

07:50 PM Jul 06, 2021 | Girisha |

ವಿಜಯಪುರ: ಕರ್ನಾಟಕದಲ್ಲಿ ಹೊಸ ಶಿಕ್ಷಣ ನೀತಿ ಅಡಿಯಲ್ಲಿ ಜಾರಿಗೊಳಿಸಲು ಹೊರಟ ನಾಲ್ಕು ವರ್ಷದ ಪದವಿ ಪದ್ಧತಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅಸಮಾನತೆ ಸೃಷ್ಟಿಸಲಿದೆ. ಅಲ್ಲದೇ ಹೊಸ ಮಾದರಿಯ ತಾರತಮ್ಯದ ಹುಟ್ಟಿಗೆ ಕಾರಣವಾಗಲಿದೆ ಎಂದು ವಿಶ್ವ ವಿದ್ಯಾಲಯಗಳ ಧನಸಹಾಯ ಆಯೋಗ (ಯುಜಿಸಿ) ಮಾಜಿ ಅಧ್ಯಕ್ಷ ಸುಖದೇವ್‌ ಥೋರಟ್‌ ಆತಂಕ ವ್ಯಕ್ತಪಡಿಸಿದರು. ಸೋಮವಾರ ಅಖೀಲ ಭಾರತ ಶಿಕ್ಷಣ ಉಳಿಸಿ ಸಮಿತಿ ನೇತೃತ್ವದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ನಾಲ್ಕು ವರ್ಷದ ಪದವಿ ಹೇರಿಕೆ ವಿರುದ್ಧ ನಡೆದ ರಾಜ್ಯಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.

Advertisement

4 ವರ್ಷಗಳ ಪದವಿ ಪದ್ದತಿ ವಿದೇಶಕ್ಕೆ ಹಾರಿಹೋಗುವ ಕೆಲ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆಯೇ ಹೊರತು ಬಹುಸಂಖ್ಯೆಯ ಬಡ-ಸಾಮಾನ್ಯ ವಿದ್ಯಾರ್ಥಿಗಳಿಗೆ ಆಲ್ಲ. ಸದರಿ ನೀತಿಯಲ್ಲಿ ಬಹು ಹಂತದ ತೇರ್ಗಡೆ ಇರುವುದರಿಂದ ವಿದ್ಯರ್ಥಿಗಳಿಗೆ ಸಂಪೂರ್ಣ ಜ್ಞಾನ ನೀಡಲಾರದು. ಉದ್ಯೋಗಕ್ಕೆ ಸಮರ್ಪಕ ಅರ್ಹ ಅಭ್ಯರ್ಥಿಗಳನ್ನೂ ಕೂಡಾ ಸೃಷ್ಟಿಸಲಾರದು. ಇದು ಹೊಸ ಮಾದರಿಯ ತಾರತಮ್ಯದ ಸವಾಲು ಸೃಷ್ಟಿಸಲಿದೆ ಎಂದು ಎಚ್ಚರಿಸಿದರು.

ಶಿಕ್ಷಣ ತಜ್ಞ ಮಹಾಬಲೇಶ್ವರರಾವ್‌ ಮಾತನಾಡಿ, ಸರ್ಕಾರ ಜನಾಭಿಪ್ರಾಯ ಕಡೆಗಣಿಸಿ ಪ್ರಜಾತಾಂತ್ರಿಕ ಮೌಲ್ಯಗಳನ್ನು ಗಾಳಿಗೆ ತೂರಿ ಜನ ವಿರೋ ಧಿ ನೀತಿ ಜಾರಿಗೊಳಿಸುತ್ತಿದೆ. ಸಂವಿಧಾನ ವಿರೋಧಿ , ಜನ ವಿರೋಧಿ  ಮತ್ತು ಸಮಾಜ ವಿರೋಧಿ  ನೀತಿ ಜಾರಿಯಿಂದ ಗ್ರಾಮೀಣ, ಬಡವರು, ದಲಿತ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಮಾರಕವಾಗಲಿದೆ ಎಂದು ದೂರಿದರು. ಈಗಾಗಲೇ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕ, ಉಪನ್ಯಾಸಕರನ್ನು ಸರ್ಕಾರಗಳು ಗುಲಾಮರಂತೆ ನಡೆಸಿಕೊಳ್ಳುತ್ತಿವೆ. ಉದ್ಯೋಗ ಭದ್ರತೆ ಇಲ್ಲದ ವ್ಯವಸ್ಥೆಯನ್ನು ಪೋಷಣೆಯ ನೀತಿಗಳನ್ನು ಜಾರಿಗೊಳಿಸುತ್ತಿದೆ. ಸಮಾಜಕ್ಕೆ ಬಹು ಶಿಸ್ತಿನ ಪದ್ಧತಿ ಬೇಕಿಲ್ಲ, ಬದಲಾಗಿ ಅಂತರ್‌ ಸಂಬಂಧಿಧೀಯ ಬಹು ಶಿಸ್ತಿನ ಪದ್ದತಿಯ ಅಗತ್ಯವಿದೆ ಎಂದರು. ಎಐಎಸ್‌ಇಸಿ ಪ್ರಧಾನ ಕಾರ್ಯದರ್ಶಿಗಳು ಆನಿಸ್‌ ರಾಯ್‌ ಮಾತನಾಡಿ, ಹೊಸ ಶಿಕ್ಷಣ ನೀತಿ-2020 ಬಹು ಶಿಸ್ತಿಯ ಪದ್ಧತಿ ಜಾರಿಗೊಳಿಸುತ್ತೇವೆ ಎಂಬ ಮುಖವಾಡದಲ್ಲಿ ಈಗಾಗಲೇ ಇರುವ ಅಂತರ್‌ ಸಂಬಂಧಿಧೀಯ ಬಹು ಶಿಸ್ತಿಯ ಪದ್ದತಿ ಹಾಳು ಮಾಡುತ್ತಿವೆ. ಮಾನವೀಯ ಶಾಸ್ತ್ರಗಳನ್ನು ಅಪಾಯಕ್ಕೆ ತಳ್ಳುತ್ತಿವೆ. ಅಮೆರಿಕದ ಅನುಕರಣೆಗಾಗಿ ಭಾರತಕ್ಕೆ ಹೊಸ ಶಿಕ್ಷಣ ನೀತಿ ನಿರೂಪಿಸಲಾಗಿದೆ. ನಮ್ಮಲ್ಲಿನ ಸಾಂಸ್ಕೃತಿಕ, ಪ್ರಾದೇಶಿಕ, ಸಾಮಾಜಿಕ ಭಿನ್ನತೆಯನ್ನು ಕಡೆಗಣಿಸಲಾಗಿದೆ ಎಂದು ದೂರಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಎ.ಮುರಿಗೆಪ್ಪ ಮಾತನಾಡಿದರು.

ಎಐಎಸ್‌ಇಸಿ ರಾಜ್ಯಾಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಜಾಗತೀಕರಣದ ಹಿನ್ನೆಲೆ ಪ್ರಸ್ತುತ ಶಿಕ್ಷಣ ನೀತಿ ರೂಪಿಸುತ್ತಿರುವ ಕಾರಣದಿಂದ ಜನರ ಆಶಯ ಈಡೇರಿಸುವಲ್ಲಿ ವಿಫಲವಾಗಿದೆ. ಖಾಲಿ ಹೊಟ್ಟೆಯ ಶಿಕ್ಷಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾರ. ಆದ್ದರಿಂದ ಸರ್ಕಾರ ಮೊದಲು ಅತಿಥಿ ಶಿಕ್ಷಕರ-ಉಪನ್ಯಾಸಕರ ಸಮಸ್ಯೆ ಬಗೆಹರಿಸಲು ಆದ್ಯತೆ ನೀಡಿ, ಅನಗತ್ಯವಾದ ನೀತಿಗಳಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಎ.ಮುರಿಗೆಪ್ಪ ಮಾತನಾಡಿದರು. ಉಪನ್ಯಾಸಕ ಸೋಮಶೇಖರಗೌಡ ಪ್ರಾಸ್ತಾವಿಕ ಮಾತನಾಡಿದರು. ವಿ.ಎನ್‌. ರಾಜಶೇಖ ಅಧ್ಯಕ್ಷತೆ ವಹಿಸಿದ್ದರು. ಸಾವಿರಾರು ಪ್ರತಿನಿಧಿ  ಗಳು ಆನ್‌ಲೈನ್‌ ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next