Advertisement

ಹೊಸ ಸಚಿವರಿಗೆ ನೆರೆ ಪ್ರದೇಶದ ಹೊಣೆ

11:20 PM Aug 20, 2019 | Lakshmi GovindaRaj |

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಂತ್ರಸ್ತರ ಅಹವಾಲು ಸ್ವೀಕರಿಸಿ ಪರಿಹಾರ ಕಾರ್ಯ ಚುರುಕುಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸಚಿವ ಸಂಪುಟ ವಿಸ್ತರಣೆಯಾದ ನಂತರ ನಡೆದ ಔಪಚಾರಿಕ ಸಂಪುಟ ಸಭೆಯಲ್ಲಿ ಸಚಿವರಿಗೆ ಪ್ರವಾಹ ಪೀಡಿತ ಜಿಲ್ಲೆಗಳ ಹೊಣೆಗಾರಿಕೆ ಸಹ ನೀಡಿ ತಕ್ಷಣವೇ ತೆರಳುವಂತೆಯೂ ಮುಖ್ಯಮಂತ್ರಿ ಯಡಿಯೂರಪ್ಪ ನಿರ್ದೇಶಿಸಿದ್ದಾರೆ.

Advertisement

ಸಭೆಯ ನಂತರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನೂತನ ಸಚಿವರಾದ ಎಸ್‌.ಸುರೇಶ್‌ ಕುಮಾರ್‌ ಮತ್ತು ಜೆ.ಸಿ.ಮಾಧುಸ್ವಾಮಿ, ಪ್ರವಾಹ ಪೀಡಿತ ಜಿಲ್ಲೆಗಳಿಗೆ ಹೋಗಿ ಜನರ ಆಹವಾಲು ಸ್ವೀಕರಿಸಲು ಮುಖ್ಯಮಂತ್ರಿ ಸೂಚಿಸಿದ್ದು, ಅದರಂತೆ ಸಚಿವರು ಭೇಟಿ ನೀಡಲಿದ್ದಾರೆ ಎಂದು ಹೇಳಿದರು. ಕೇಂದ್ರ ಸರ್ಕಾರ ನಮಗೆ ಹೆಚ್ಚು ನೆರವು ನೀಡುವ ನಿರೀಕ್ಷೆಯಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ರಾಜ್ಯದ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ಯಾರ್ಯಾರಿಗೆ, ಎಲ್ಲಿ ಉಸ್ತುವಾರಿ?
* ಸಿ.ಸಿ.ಪಾಟೀಲ್‌ - ಗದಗ, ಕೊಪ್ಪಳ
* ಶ್ರೀರಾಮುಲು- ಯಾದಗಿರಿ
* ಎಸ್‌.ಸುರೇಶ್‌ಕುಮಾರ್‌- ಕೊಡಗು
* ಆರ್‌.ಅಶೋಕ್‌- ಮೈಸೂರು
* ವಿ.ಸೋಮಣ್ಣ- ಚಾಮರಾಜನಗರ
* ಕೋಟ ಶ್ರೀನಿವಾಸ ಪೂಜಾರಿ- ದಕ್ಷಿಣ ಕನ್ನಡ- ಉಡುಪಿ
* ಲಕ್ಷ್ಮಣ ಸವದಿ- ಬೆಳಗಾವಿ
* ಶಶಿಕಲಾ ಜೊಲ್ಲೆ- ಚಿಕ್ಕೋಡಿ
* ಗೋವಿಂದ ಕಾರಜೋಳ- ವಿಜಯಪುರ
* ಜಗದೀಶ್‌ ಶೆಟ್ಟರ್‌- ಧಾರವಾಡ-ಉತ್ತರ ಕನ್ನಡ
* ಸಿ.ಟಿ.ರವಿ- ಚಿಕ್ಕಮಗಳೂರು
* ಮಾಧುಸ್ವಾಮಿ- ಹಾಸನ
* ಕೆ.ಎಸ್‌. ಈಶ್ವರಪ್ಪ- ಬಾಗಲಕೋಟೆ
* ಬಸವರಾಜ ಬೊಮ್ಮಾಯಿ- ಹಾವೇರಿ

Advertisement

Udayavani is now on Telegram. Click here to join our channel and stay updated with the latest news.

Next