Advertisement

ಹೊಸ 2000 ರೂ. ನೋಟಲ್ಲಿ ಗಾಂಧಿ ಚಿತ್ರವೇ ನಾಪತ್ತೆ!

03:45 AM Jan 06, 2017 | Team Udayavani |

ಭೋಪಾಲ್‌: ಹೊಸ ನೋಟುಗಳಲ್ಲಿ ಸಾಕಷ್ಟು ಮುದ್ರಣ ಲೋಪವಿರುವುದನ್ನು ಈ ಹಿಂದೆ ಆರ್‌ಬಿಐ ಅಧಿಕಾರಿಗಳೇ ಒಪ್ಪಿಕೊಂಡಿದ್ದರು. ಆದರೆ ಈಗ ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಮಹಾತ್ಮಗಾಂಧಿ ಚಿತ್ರವೇ ಇಲ್ಲದ 2000 ರೂ. ಮುಖಬೆಲೆಯ ಮೂರು ಹೊಸ ನೋಟುಗಳು ಮಧ್ಯಪ್ರದೇಶದಲ್ಲಿ ಪತ್ತೆಯಾಗಿವೆ.

Advertisement

ಶಿವೋಪುರ ಜಿಲ್ಲೆಯ ಗ್ರಾಮ ವೊಂದರ ರೈತ ಲಕ್ಷ್ಮಣ್‌ ಮೀನಾ ಎಂಬುವರು ಬ್ಯಾಂಕ್‌ ಬ್ರ್ಯಾಂಚ್‌ವೊಂದರಲ್ಲಿ ತಮ್ಮ ಖಾತೆಯಿಂದ ಹಣ ವಿತ್‌ ಡ್ರಾ ಮಾಡಿದ್ದಾರೆ. ಇವುಗಳಲ್ಲಿ ಗಾಂಧಿ ಚಿತ್ರ ಇಲ್ಲದ ಮೂರು ನೋಟುಗಳು ಸಿಕ್ಕಿವೆ. ಇದರಿಂದ ಅಚ್ಚರಿಗೊಂಡ ಲಕ್ಷ್ಮಣ್‌ ತಕ್ಷಣವೇ ಬ್ಯಾಂಕ್‌ಗೆ ತೆರಳಿ ಈ ನೋಟುಗಳನ್ನು ಬದಲಾಯಿಸಿಕೊಂಡಿದ್ದಾರೆ. ಮುದ್ರಣ ದೋಷದಿಂದಾಗಿ ಗಾಂಧಿಜಿ ಚಿತ್ರ ನಾಪತ್ತೆಯಾಗಿದೆ ಎಂದು ಬ್ಯಾಂಕ್‌ ಅಧಿಕಾರಿಗಳು ಸ್ಪಷ್ಟೀಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next