Advertisement

Delhi; 2000 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ!!: ಪೊಲೀಸರ ಭಾರೀ ಬೇಟೆ

09:48 PM Oct 10, 2024 | Team Udayavani |

ಹೊಸದಿಲ್ಲಿ: ರಾಷ್ಟ್ರರಾಜಧಾನಿಯಲ್ಲಿ ಡ್ರಗ್ಸ್ ದಂಧೆಯನ್ನು ಬೇಧಿಸುವಲ್ಲಿ ಪೊಲೀಸರು ಹೋರಾಟ ನಿರತರಾಗಿದ್ದು, ದೆಹಲಿ ಪೊಲೀಸ್ ವಿಶೇಷ ಘಟಕವು ಗುರುವಾರ(ಅ10) ಮತ್ತೊಂದು ಬೃಹತ್ ಮಾದಕವಸ್ತು ಕಳ್ಳಸಾಗಣೆ ಜಾಲ ಭೇದಿಸಿದ್ದು, ರಮೇಶ್ ನಗರ ಪ್ರದೇಶದಲ್ಲಿರುವ ಗೋದಾಮಿನಿಂದ 2000 ಕೋಟಿ ರೂ. ಮೌಲ್ಯದ ಸುಮಾರು 200 ಕಿಲೋಗ್ರಾಂಗಳಷ್ಟು ಕೊಕೇನ್ ಅನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಡ್ರಗ್ ಸಿಂಡಿಕೇಟ್ ದಂಧೆ ನಡೆಸಲಾಗುತ್ತಿದ್ದು ಕೊಕೇನ್ ಸಾಗಿಸಲು ಬಳಸಿದ ಕಾರಿನಲ್ಲಿ ಜಿಪಿಎಸ್ ಅಳವಡಿಸಲಾಗಿತ್ತು. ಪೊಲೀಸರು ತಮ್ಮ ಕಾರ್ಯಾಚರಣೆಯನ್ನು ಕೈಗೊಳ್ಳಲು ಜಿಪಿಎಸ್ ಮೂಲಕ ಸ್ಥಳವನ್ನು ಟ್ರ್ಯಾಕ್ ಮಾಡಿ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ.

ಆರಂಭಿಕ ವರದಿಗಳ ಪ್ರಕಾರ, ಕೊಕೇನ್ ಅನ್ನು ರಾಷ್ಟ್ರ ರಾಜಧಾನಿಗೆ ತಂದ ಆರೋಪಿ ಲಂಡನ್‌ಗೆ ಪರಾರಿಯಾಗಿದ್ದಾನೆ. ದಕ್ಷಿಣ ದೆಹಲಿಯ ಮಹಿಪಾಲ್‌ಪುರದ ಗೋಡೌನ್‌ನಿಂದ ಅಕ್ಟೋಬರ್ 2 ರಂದು 5,620 ಕೋಟಿ ಮೌಲ್ಯದ ಅಂದಾಜು 560 ಕೆಜಿ ಕೊಕೇನ್ ಮತ್ತು 40 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಂಡ ಬೆನ್ನಲ್ಲೇ ಈ ಕಾರ್ಯಾಚರಣೆ ನಡೆದಿದೆ.

ತುಷಾರ್ ಗೋಯಲ್ (40), ಹಿಮಾಂಶು ಕುಮಾರ್ (27) ಮತ್ತು ಔರಂಗಜೇಬ್ ಸಿದ್ದಿಕಿ (23) ಮತ್ತು ಭರತ್ ಕುಮಾರ್ ಜೈನ್ (48) ಎಂದು ಗುರುತಿಸಲಾದ ನಾಲ್ವರನ್ನು ಸ್ಥಳದಲ್ಲೇ ಬಂಧಿಸಲಾಗಿದ್ದು, ಇಬ್ಬರನ್ನು ಅಮೃತಸರ ಮತ್ತು ಚೆನ್ನೈನಲ್ಲಿ ಬಂಧಿಸಲಾಗಿದೆ.

ಉತ್ತರ ಪ್ರದೇಶದ ಹಾಪುರ್‌ನಲ್ಲಿ ಅಖ್ಲಾಕ್ ಎಂಬ ಮತ್ತೊಬ್ಬ ವ್ಯಕ್ತಿಯನ್ನು ಬೆಳಗ್ಗೆ ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಅಖ್ಲಾಕ್ ಉತ್ತರ ಭಾರತದಲ್ಲಿ ಡ್ರಗ್ಸ್ ಸಾಗಿಸಲು ಪ್ರಮುಖ ಪಾತ್ರ ವಹಿಸಿದ್ದ. 5,620 ಕೋಟಿ ರೂಪಾಯಿಗಳ ಡ್ರಗ್ ಕಾರ್ಟೆಲ್‌ನಲ್ಲಿ ಭಾಗಿಯಾಗಿರುವ ಶಂಕಿತ ಭಾರತೀಯ ಮೂಲದ ದುಬೈ ಮೂಲದ ಉದ್ಯಮಿ ವೀರೇಂದ್ರ ಬಸೋಯಾ ವಿರುದ್ಧ ದೆಹಲಿ ಪೊಲೀಸರು ಲುಕ್‌ಔಟ್ ಸುತ್ತೋಲೆ ಹೊರಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next