ಚಡಚಣ: ಎಲ್ಲ ಕ್ಷೇತ್ರಗಳಿಗಿಂತ ವೈದ್ಯಕೀಯ ಸೇವೆ ಸರ್ವಶ್ರೇಷ್ಠ. ಮನುಷ್ಯನಲ್ಲಿ ಹಸಿವೆ, ನಿದ್ದೆ, ಪಚನ ಸರಿ ಇದ್ದರೆ ಆರೋಗ್ಯವಂತ ಎಂದರ್ಥ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮಿಗಳು ಹೇಳಿದರು.
ಪಂಢರಪೂರ ರಸ್ತೆಯಲ್ಲಿರುವ ಗಿಡವೀರರವರ ಶ್ರೀನಿಧಿ ಚಿಕ್ಕ ಮಕ್ಕಳ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಏನೂ ಅರಿಯದ ಮಕ್ಕಳಿಗೆ ಚಿಕಿತ್ಸೆ ನೀಡಿ ಗುಣಪಡಿಸುವ ವೃತ್ತಿ ಪ್ರಮುಖವಾದದ್ದು. ಮಕ್ಕಳ ಸೇವೆ ದೇವರ ಸೇವೆ ಎಂದರು.
ಆಸ್ಪತ್ರೆ ಉದ್ಘಾಟಿಸಿದ ಹಿರಿಯ ವೈದ್ಯ ಡಿ.ಬಿ. ಕಟಗೇರಿ ಮಾತನಾಡಿ, ವೈದ್ಯಕೀಯದಲ್ಲಿ ವೃತ್ತಿ, ಪ್ರವೃತ್ತಿ, ಸಂತೃಪ್ತಿ ಇವುಗಳನ್ನು ಅಳವಡಿಸಿಕೊಂಡರೆ ಯಶಸ್ಸು ಸಾಧ್ಯ ಎಂದರು.
ಪ್ರಾಸ್ತಾವಿಕವಾಗಿ ಆರ್ .ಪಿ. ಬಗಲಿ ಮಾತನಾಡಿದರು. ಎಸ್.ಕೆ. ಕುಲಕರ್ಣಿ ನಿರೂಪಿಸಿದರು. ಗುರುಬಾಳಪ್ಪ ಗಿಡವೀರ ಮಂಗಲ ಗೀತೆ ಹಾಡಿದರು. ಬ್ರಹ್ಮಾನಂದ ಶ್ರೀಗಳು ಸಂಗಮೇಶ ಅವಜಿ, ಡಾ| ಎಸ್.ಆರ್. ಡೋಣಗಾಂವ, ಡಾ| ವಿ.ಎಸ್. ಪತ್ತಾರ, ಡಾ| ವಿಶಾಲ ತಂಗಾ, ತಾಲೂಕು ವೈದ್ಯಾಧಿಕಾರಿ ಡಾ| ಜಾನ್ ಕಟವಟೆ, ಕಾಂತುಗೌಡ ಪಾಟೀಲ, ಅಶೋಕ ಕುಲಕರ್ಣಿ ವಕೀಲರು, ವಿ.ಎಂ. ಭಂಡರಕವಟೆ, ಅಜೀತ ಮುತ್ತಿನ, ವಿ.ಜಿ. ಮುತ್ತಿನ, ವಿರಭದ್ರಪ್ಪ ಹೇರಲಗಿ, ಚಂದು ನಿರಾಳೆ ಅನೇಕ ಗಣ್ಯರು ಇದ್ದರು.