Advertisement

ರಾಷ್ಟ್ರಧ್ವಜ ಇಳಿಸಿ ಶೋಕಾಚರಣೆ ಮಾಡದ ಗ್ರಾಪಂ

12:12 PM Jul 28, 2017 | Team Udayavani |

ಜಗಳೂರು: ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ಅವರು ನಿಧನರಾದ ಹಿನ್ನೆಲೆಯಲ್ಲಿ ಅರ್ಧಮಟ್ಟಕ್ಕೆ ರಾಷ್ಟ್ರಧ್ವಜ ಇಳಿಸಿ ಶೋಕಾಚರಣೆ ನಡೆಸಬೇಕಾಗಿದ್ದ ತಾಲೂಕಿನ ಕ್ಯಾಸೇನಹಳ್ಳಿ ಗ್ರಾಪಂ ಅಧಿಕಾರಿಗಳ ಮತ್ತು ಸಿಬ್ಬಂದಿ ಕಚೇರಿಯಲ್ಲಿ ಸುಳಿವೇ ಇರಲಿಲ್ಲ.

Advertisement

ಇದರಿಂದಾಗಿ ಸಂಜೆಯಾದರೂ ಪೂರ್ಣ ಮಟ್ಟದಲ್ಲಿ ಧ್ವಜ ಹಾರಾಡಿತು. ರಾಷ್ಟ್ರದ ಅಥವಾ ರಾಜ್ಯದ ಅತಿಗಣ್ಯ ವ್ಯಕ್ತಿಗಳು ನಿಧನ ಸಂದರ್ಭದಲ್ಲಿ ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕೆ ಇಳಿಸಿ ಶೋಕಾಚರಣೆ ನಡೆಸುವುದು ನಿಯಮ. ಆದರೆ ಮಾಜಿ ಮುಖ್ಯಮಂತ್ರಿ ನಿಧನರಾದ ಸುದ್ದಿ ತಿಳಿದ ಗ್ರಾಪಂ ಅಧಿಕಾರಿಗಳು ಧ್ವಜ ಇಳಿಸಲಿಲ್ಲ.  ಕಚೇರಿ ಮುಂದೆ ಧ್ವಜ ಸ್ತಂಬದಲ್ಲಿ ಪೂರ್ಣಮಟ್ಟದಲ್ಲಿ ಹಾರಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಹೊಸಕೆರೆ ಗ್ರಾಪಂನಲ್ಲಿ ಹಾರಾಟ: ತಾಲೂಕಿನ ಹೊಸಕೆರೆ ಗ್ರಾಪಂ ಕಚೇರಿಯ ಮೇಲೆ ಕೂಡಾ ಪೂರ್ಣ ಮಟ್ಟದ ರಾಷ್ಟ್ರ ಧ್ವಜ ಹಾರಾಡುತ್ತಿತ್ತು. ಮಾಜಿ ಮುಖ್ಯಮಂತ್ರಿ ನಿಧನರಾದ ಕೂಡಲೇ ಎಲ್ಲಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ವಾಟ್ಸಪ್‌ ಮೂಲಕ ಅರ್ಧಮಟ್ಟಕ್ಕೆ ಧ್ವಜ ಇಳಿಸುವಂತೆ ಸಂದೇಶ ರವಾನಿಸಿ ಶೋಕಾಚರಣೆ ನಡೆಸುವಂತೆ ಸೂಚನೆ ನೀಡಲಾಗಿತ್ತು. ಆದರೆ ಧ್ವಜ ಇಳಿಸದೇ ಇರುವ ಕ್ಯಾಸೇನಹಳ್ಳಿ ಮತ್ತು ಹೊಸಕೆರೆ ಗ್ರಾಪಂ
ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗುವುದು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಜಾನಕಿರಾಮ್‌ ತಿಳಿಸಿದರು.

ಕ್ರಮಕ್ಕೆ ಸೂಚನೆ..
ಶೋಕಾಚರಣೆ ಆಚರಿಸದ ಗ್ರಾಪಂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಪಂ ಇಒ ಅವರಿಗೆ ಸೂಚನೆ ನೀಡಿದ್ದೇನೆ.
ಅಶ್ವತಿ, ಜಿಪಂ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next