Advertisement

Smart City ಸೂಚನ ಫಲಕದಲ್ಲಿ ಮತ್ತೆ ‘ಗುಜ್ಜರಕೆರೆ’ ಹೆಸರು

02:42 PM Dec 02, 2024 | Team Udayavani |

ಜಪ್ಪು ಮಾರ್ಕೆಟ್‌: ಜಪ್ಪು ಮಾರ್ಕೆಟ್‌ ಬಳಿ ಸ್ಮಾರ್ಟ್‌ ಸಿಟಿ ವತಿಯಿಂದ ಅಳವಡಿಸಿರುವ ಸ್ಥಳ ಗುರುತು ದಿಕ್ಕು ಸೂಚನ ಫಲಕದಲ್ಲಿ ‘ಗುಜ್ಜರಕೆರೆ’ ಹೆಸರು ಮತ್ತೆ ಬರೆಯಲಾಗಿದೆ.

Advertisement

ಈ ಫಲಕದಲ್ಲಿ ಗುಜ್ಜರಕೆರೆ ಎಂಬುವ ಬದಲಾಗಿ ‘ಗುಜ್ಜಕೆರೆ’ ಎಂದು ಈ ಹಿಂದೆ ತಪ್ಪಾಗಿ ಬರೆಯ ಲಾಗಿತ್ತು. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದು ತಪ್ಪನ್ನು ಸರಿ ಪಡಿಸಲು ಕೋರಲಾಗಿತ್ತು. ಹಲವು ತಿಂಗಳು ಕಳೆದರೂ ಈ ಬಗ್ಗೆಯೂ ಕ್ರಮ ಕೈಗೊಂಡಿರಲಿಲ್ಲ. ತಪ್ಪಾಗಿ ಬರೆದ ಹೆಸರಿನ ಮೇಲೆ ಬಿಳಿ ಬಣ್ಣದ ಸ್ಟಿಕ್ಕರ್‌ ಅಂಟಿಸಲಾಗಿತ್ತು.

ಈ ಬಗ್ಗೆ ನ.29ರ ‘ಉದಯವಾಣಿ ಸುದಿನ’ದಲ್ಲಿ ಸ್ಮಾರ್ಟ್‌ ಸಿಟಿ ಸೂಚನ ಫಲಕದಲ್ಲಿ ‘ಗುಜ್ಜರಕೆರೆ’ ಹೆಸರು ಮಾಯ’ ಎನ್ನುವ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು. ವರದಿ ಪ್ರಕಟವಾದ ತತ್‌ಕ್ಷಣ ಸಂಬಂಧಪಟ್ಟವರು ಎಚ್ಚೆತ್ತು ಫಲಕದಲ್ಲಿ ಮತ್ತೆ ಗುಜ್ಜರಕೆರೆಯ ಹೆಸರು ಬರೆಸಿದ್ದಾರೆ.

ಸ್ಮಾರ್ಟ್‌ ಸಿಟಿ ಯೋಜನೆಯಡಿ ಅಭಿವೃದ್ಧಿ ಕಾರ್ಯಗಳು ನೆರವೇರಿದ ಬಳಿಕವೂ ಈ ಪವಿತ್ರ ಕೆರೆಯ ನೀರಿನಲ್ಲಿ ವಿಷಕಾರಿ ಅಂಶಗಳು ಇರುವುದು ಪ್ರಯೋಗಾಲಯದ ವರದಿಯಿಂದ ತಿಳಿದು ಬಂದಿದೆ. ಈ ಬಗ್ಗೆ ಮತ್ತು ಕೆರೆಗೆ ಕೊಳಚೆ ನೀರು ಬರುತ್ತಿರುವ ಬಗ್ಗೆ ಸರಿಯಾದ ರೀತಿಯಲ್ಲಿ ಪರಿಶೀಲಿಸಿ ಕ್ರಮಕೈಗೊಳ್ಳುವ ಅಗತ್ಯತೆ ಇದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next