Advertisement

“ಪಕ್ಷಾಂತರಕ್ಕೆ ಕುಮ್ಮಕ್ಕು ಮೂಲಕ ಪ್ರಜಾಪ್ರಭುತ್ವದ ಕೊಲೆ

01:20 AM Jan 17, 2019 | Team Udayavani |

ಹಾಸನ: ವಿರೋಧ ಪಕ್ಷದ ನಾಯಕ ಬಿ.ಎಸ್‌ .ಯಡಿಯೂರಪ್ಪ ಅವರು ವಿರೋಧ ಪಕ್ಷದ ನಾಯಕರಾಗಿ ಮಾಡಬೇಕಾದ ಕೆಲಸ ಬಿಟ್ಟು ಪಕ್ಷಾಂತರಕ್ಕೆ ಕುಮ್ಮಕ್ಕು ನೀಡುವ ಮೂಲಕ ಪ್ರಜಾಪ್ರಭುತ್ವದ ಕೊಲೆ ಮಾಡುವಂತಹ ಕೃತ್ಯಕ್ಕೆ ಕೈ ಹಾಕಿದ್ದಾರೆ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ವಾಗ್ಧಾಳಿ ನಡೆಸಿದ್ದಾರೆ.

Advertisement

ಸುದ್ದಿಗಾರರ ಜೊತೆ ಮಾತನಾಡಿ, ವಿರೋಧ ಪಕ್ಷದ ನಾಯಕರಾಗಿ ರಾಜ್ಯದ ಬರ ಪರಿಸ್ಥಿತಿ ನಿರ್ವಹಿಸಲು ಸಹಕಾರ ನೀಡಬೇಕಾದ ಯಡಿಯೂರಪ್ಪ ಅವರು, ಬಿಜೆಪಿ ಶಾಸಕರನ್ನು ಹರಿಯಾಣದ ರೆಸಾರ್ಟ್‌ನಲ್ಲಿಟ್ಟುಕೊಂಡಿರುವ ಉದ್ದೇಶವೇನು? ಪ್ರತಿ ದಿನ 4.50 ಕೋಟಿ ರೂ.ಖರ್ಚು ಮಾಡಿಕೊಂಡು ಶಾಸಕರನ್ನು ಕೂಡಿ ಹಾಕಿಕೊಳ್ಳುವುದು ಯಡಿಯೂರಪ್ಪಗೆ ಗೌರವ ತರುವುದಿಲ್ಲ. ಒಂದು ದಿನಕ್ಕೆ 4.30 ಕೋಟಿ ರೂ.ಖರ್ಚು ಮಾಡುತ್ತಿರುವ ಹಣವನ್ನು ಕೊಡುವವರು ಯಾರು ಎಂಬುದನ್ನು ಬಹಿರಂಗಪಡಿಸಲಿ. ಬಿಜೆಪಿಯವರು ಕುದುರೆ ವ್ಯಾಪಾರ ಮಾಡುವ ಪ್ರಯತ್ನ ಬಿಡದಿದ್ದರೆ 120 ಶಾಸಕರಿದ್ದ ಬಿಜೆಪಿ, 40 ಸ್ಥಾನಕ್ಕೆ ಇಳಿಯುವ ದಿನ ಬರಬಹುದು ಎಂದು ಎಚ್ಚರಿಸಿದರು.

ಬಿಜೆಪಿಯವರು ನನಗೂ 60 ಕೋಟಿ ರೂ.ಆಫ‌ರ್‌ ನೀಡಿದ್ದರು. ತುಮಕೂರು ಗ್ರಾಮಾಂತರ ಶಾಸಕ ಬಿ.ಸಿ.ಗೌರಿಶಂಕರ್‌ ಅವರಿಗೆ 50 ಕೋಟಿ ರೂ.ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಆಫ‌ರ್‌ ನೀಡಿದ್ದಾರೆ. 500 ಕೋಟಿ ರೂ.ಕೊಟ್ಟರೂ ಜೆಡಿಎಸ್‌ನ ಯಾವ ಶಾಸಕರೂ ಬಿಜೆಪಿಗೆ ಹೋಗುವುದಿಲ್ಲ.
● ಶಿವಲಿಂಗೇಗೌಡ, ಜೆಡಿಎಸ್‌ ಶಾಸಕ

ಬಿಜೆಪಿಯವರು ಏನೇ ಮಾಡಿದರೂ ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆಯಾಗುವುದಿಲ್ಲ. ದೇವರಿದ್ದಾನೆ. ಯಾರಿಗೆ, ಹೇಗೆ ಉತ್ತರ ಕೊಡಬೇಕು ಎಂಬುದು ದೇವರಿಗೆ ಗೊತ್ತಿದೆ. ಆಪರೇಷನ್‌ ಕಮಲದ ಬಗ್ಗೆ ನನಗೆ ಯಾವುದೇ ಟೆನÒನ್‌ ಇಲ್ಲ. ನಾವೆಲ್ಲಾ ಕೂಲ್‌ ಆಗಿದ್ದೇವೆ. ಈಗ ಸಂಕ್ರಾಂತಿಗೆ ತಮಿಳುನಾಡು ಪಂಚಾಂಗ ಬಂದಿದೆ. ಯುಗಾದಿಗೆ ಹಿಂದೂ ಪಂಚಾಂಗ ಬರುತ್ತದೆ. ಅಲ್ಲಿಯವರೆಗೂ ಕಾಯಿರಿ.
● ಎಚ್‌.ಡಿ.ರೇವಣ್ಣ, ಲೋಕೋಪಯೋಗಿ ಸಚಿವ

ರಾಜ್ಯದಲ್ಲಿರುವ ಜೆಡಿಎಸ್‌, ಕಾಂಗ್ರೆಸ್‌ ಮೈತ್ರಿ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಅಧಿಕಾರದ ಆಸೆಯಿಂದ ಬಿಜೆಪಿಯವರು ಕೆಲವು ಶಾಸಕರಿಗೆ ಆಮಿಷವೊಡ್ಡಲು ಯತ್ನಿಸುತ್ತಿದ್ದಾರೆ. ಹಣ ಹಾಗೂ ಅಧಿಕಾರದ ಆಮಿಷ ಒಡ್ಡುವುದು ಬಿಜೆಪಿ ಸಂಸ್ಕೃತಿಯಾಗಿದೆ. ಇದಕ್ಕೆ ಯಾರೂ ತಲೆಕೆಡಿಸಿಕೊಳ್ಳುವುದು ಬೇಡ.
● ಪ್ರಜ್ವಲ್‌ ರೇವಣ್ಣ, ಜೆಡಿಎಸ್‌ ರಾಜ್ಯ ಯುವ ಕಾರ್ಯದರ್ಶಿ

Advertisement
Advertisement

Udayavani is now on Telegram. Click here to join our channel and stay updated with the latest news.

Next