Advertisement

ದನದ ದೊಡ್ಡಿಯಲ್ಲಿ ಅಟ್ಟಾಡಿಸಿ ಕೊಚ್ಚಿ ಕೊಲೆ

11:15 AM Jul 07, 2017 | Team Udayavani |

ಬೆಂಗಳೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ರೌಡಿಶೀಟರ್‌ ಒಬ್ಬನನ್ನು ಐದಾರು ಮಂದಿ ದುಷ್ಕರ್ಮಿಗಳ ಗುಂಪೊಂದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಪುಲಕೇಶಿ ನಗರದ ರಾಬರ್ಟ್‌ಸನ್‌ ರಸ್ತೆಯ ದನದ ದೊಡ್ಡಿಯಲ್ಲಿ ಬುಧವಾರ ತಡರಾತ್ರಿ ನಡೆದಿದೆ.

Advertisement

ಲಿಂಗರಾಜಪುರ ನಿವಾಸಿ ರಂಜಿತ್‌ (28) ಕೊಲೆಯಾದ ರೌಡಿಶೀಟರ್‌. ಈತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ದರೋಡೆ, ಹಲ್ಲೆ ಪ್ರಕರಣಗಳು ದಾಖಲಾಗಿವೆ. ಕೆಲ ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಆತ ಟೆಂಟ್‌ಹೌಸ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ರಾತ್ರಿ ದನದ ದೊಡ್ಡಿಯಲ್ಲಿ ಮಲಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ರಂಜಿತ್‌ ಬುಧವಾರ ರಾತ್ರಿ ಟೆಂಟ್‌ಹೌಸ್‌ನಲ್ಲಿ ಕೆಲಸ ಮುಗಿಸಿಕೊಂಡು ಫ್ರೆàಜರ್‌ಟೌನ್‌ನ ರಾಬರ್ಟ್‌ಸನ್‌ ರಸ್ತೆಯಲ್ಲಿರುವ ದನದ ದೊಡ್ಡಿಗೆ ಹೋಗಿದ್ದ. ಅಲ್ಲಿ ತಡರಾತ್ರಿವರೆಗೆ ತನ್ನ ಸ್ನೇಹಿತನೊಂದಿಗೆ ಮದ್ಯ ಸೇವಿಸಿ ಊಟ ಮಾಡಿದ್ದ. ಆ ವೇಳೆ ಐದಾರು ಮಂದಿ ಮಾರಕಾಸ್ತ್ರಗಳೊಂದಿಗೆ ಏಕಾಏಕಿ ರಂಜಿತ್‌ ಮೇಲೆ ದಾಳಿ ನಡೆಸಿದರು.

ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದರೂ ಅವಕಾಶ ನೀಡದ ಗುಂಪು ದೊಡ್ಡಿಯ್ಲಲಿದ್ದ ರಾಸುಗಳ ಮಧ್ಯೆಯೇ ಅವನನ್ನು ಅಟ್ಟಾಡಿಸಿ ಬರ್ಭರವಾಗಿ ಹತ್ಯೆ ಗೈದಿದ್ದಾರೆ. ಈ ಸಂದರ್ಭದಲ್ಲಿ ಜತೆಗಿದ್ದ ಆತನ ಸ್ನೇಹಿತನ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿದೆ. ಹಲ್ಲೆಯಿಂದ ರಂಜೀತ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಪುಲಿಕೇಶಿನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ರಂಜಿತ್‌ನ ಮೃತದೇಹವನ್ನು ಬೌರಿಂಗ್‌ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ರಂಜಿತ್‌ ಇತ್ತೀಚೆಗೆ ಸ್ಥಳೀಯ ಮುಖಂಡ ರಮೇಶ್‌ ಎಂಬಾತನ ಜತೆ ಜಗಳ ಮಾಡಿಕೊಂಡಿದ್ದ. ಇಬ್ಬರ ನಡುವೆ ಮಾರಾಮಾರಿ ನಡೆದಿತ್ತು.

Advertisement

ಈ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆಯಿದೆ. ರಮೇಶ್‌ ತನ್ನ ತಂಡದೊಂದಿಗೆ ಸೇರಿ ರಂಜಿತ್‌ ಮೇಲೆ ಸೇಡು ತೀರಿಸಿಕೊಂಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ರಂಜಿತ್‌ ಈ ಹಿಂದೆ ಲಿಂಗರಾಜಪುರದಲ್ಲಿ ತನ್ನ ತಂದೆ, ತಾಯಿಯೊಂದಿಗೆ ವಾಸವಾಗಿದ್ದ. ತಾಯಿ ಮೃತಪಟ್ಟ ಬಳಿಕ ತಂದೆ ಮತ್ತೂಂದು ಮದುವೆಯಾಗಿದ್ದ.

ಇದರಿಂದ ಬೇಸರಗೊಂಡ ರಂಜಿತ್‌ ಮನೆ ಬಿಟ್ಟಿದ್ದ. ನಂತರದಲ್ಲಿ ಕೆಲ ಪುಡಿ ರೌಡಿಗಳ ಜತೆ ಸೇರಿಕೊಂಡು ಅಲ್ಲಲ್ಲಿ ದರೋಡೆ, ಹಲ್ಲೆ ಕೃತ್ಯಗಳನ್ನು ಎಸಗುತ್ತಿದ್ದ. ಈತನ ವಿರುದ್ಧ 2015ರಲ್ಲಿ ಬಾಣಸವಾಡಿ ಮತ್ತು ಪುಲಿಕೇಶಿನಗರ ಪೊಲೀಸ್‌ ಠಾಣೆಯಲ್ಲಿ ರೌಡಿ ಪಟ್ಟಿ ತೆರೆಯಲಾಗಿದೆ. ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿದ್ದ ರಂಜಿತ್‌ ಕೆಲ ತಿಂಗಳ ಹಿಂದಷ್ಟೇ ಹೊರಗೆ ಬಂದು ಟೆಂಟ್‌ಹೌಸ್‌ ಒಂದರಲ್ಲಿ ಕೆಲಸಕ್ಕೆ ಸೇರಿದ್ದ ಎಂದು ಪೊಲೀಸರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next