ಮುಂಬೈ: ಬಾಲಿವುಡ್‌ನ ಬಾದ್‌ಶಾಹ್ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ಬಾಕ್ಸ್‌ಆಫಿಸ್ ಧೂಳೀಪಟ ಮಾಡಿದ ಮೇಲೆ ಶಾರುಖ್ ಅಭಿನಯದ ಇನ್ನೊಂದು ಬಹುನಿರೀಕ್ಷಿತ ಚಿತ್ರ ʻಜವಾನ್ʼ ಸೆಟ್ಟೇರಲು ರೆಡಿಯಾಗಿದೆ. ಜೂನ್‌ನಲ್ಲಿ ಶಾರುಖ್ ಖಾನ್ ನಟನೆಯ ʻಜವಾನ್ʼ ತೆರೆಕಾಣಲಿದೆ ಎಂದು ಹೇಳಲಾಗಿದೆ.
ಅದಕ್ಕಾಗಿ ಚಿತ್ರತಂಡ ಕೊನೇ ಕ್ಷಣದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದೆ. ಆದರೆ ಶೂಟಿಂಗ್ ಮಧ್ಯೆ ಶಾರುಖ್ ಖಾನ್ ಅವರ ದೃಶ್ಯವೊಂದು ಲೀಕ್ ಆಗಿದ್ದು ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ಈ ದೃಶ್ಯದಲ್ಲಿ ಶಾರುಖ್, ಬಾಯಲ್ಲಿ ಸಿಗರೇಟ್ ಕಚ್ಚಿಕೊಂಡು ಗೂಂಡಾನಿಗೆ ಬೆಲ್ಟ್‌ನಿಂದ ಹೊಡೆಯುತ್ತಿರುವುದು ಕಂಡುಬಂದಿದೆ. ಶಾರುಖ್‌ನ ಮಾಸ್ ಲುಕ್ ಇದೀಗ ಅಭಿಮಾನಿಗಳಲ್ಲಿ ಎದೆಬಡಿತ ಹೆಚ್ಚಿಸಿದೆ.
ʻಜವಾನ್ʼ, ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷತ ಚಿತ್ರವಾಗಿದ್ದು ಹೆಸರಾಂತ ನಿರ್ದೇಶಕ ಆಟ್ಲಿ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದು, ಜೂನ್ 2 ರಂದು ತೆರೆಕಾಣಲಿದೆ. ಕಳೆದ ವರ್ಷ ಸಿನೆಮಾ ಘೋಷಣೆಯಾದಂದಿನಿಂದ ಶಾರೂಖ್ ಅವರನ್ನು ಹೊಸ ಅವತಾರದಲ್ಲಿ ಕಾಣಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಆದರೆ ಟ್ವಿಟರ್‌ನಲ್ಲಿ ಶಾರೂಖ್‌ಖಾನ್ ಅಭಿಮಾನಿಗಳ ಪೇಜ್‌ವೊಂದು ಮುಂಬರುವ ಚಿತ್ರದ ಫೋಟೋಗಳನ್ನಾಗಲೀ ವೀಡಿಯೋಗಳನ್ನಾಗಲೀ ಎಲ್ಲೂ ಹಂಚಿಕೊಳ್ಳಬೇಡಿ ಎಂದು ಮನವಿ ಮಾಡಿದೆ.
ಇದನ್ನೂ ಓದಿ :
ಕಿರುತೆರೆಯ ʼರಾಧೆʼ ಖ್ಯಾತಿಯ ನಟಿ ಮಲ್ಲಿಕಾ ಸಿಂಗ್ ಬ್ಯೂಟಿಫುಲ್ ಫೋಟೋ ಗ್ಯಾಲರಿ