Advertisement

ಜೀವನದ ಪ್ರಮುಖ ಗುರು ಯಾರೆಂದು ಕೇಳಿದರೆ ಒಂದೇ ಉತ್ತರ ನನ್ನಪ್ಪ

10:04 PM Aug 28, 2020 | Karthik A |

ಪ್ರತಿಯೊಬ್ಬ ಸಾಧಕನ ಹಿಂದೆಯೂ ಒಬ್ಬ ಗುರುವಿರುತ್ತಾನೆ.

Advertisement

ಅದು ಕಲಿಸಿದ ವ್ಯಕ್ತಿಯೇ ಆಗಬೇಕೆಂದಿಲ್ಲ.

ಜೀವನದ ಒಂದು ಮಗ್ಗಲಿನಲ್ಲಿ ಪರಿಚಯವಾಗಿ ಭವಿಷ್ಯಕ್ಕೆ ದಾರಿ ತೋರಿಸುವ ಯಾರೂ ಕೂಡ ಒಬ್ಬ ಒಳ್ಳೆಯ ಗುರು ಆಗಬಹುದು.

ನನ್ನ ಜೀವನದ ಪ್ರಮುಖ ಗುರು ಯಾರೆಂದು ಕೇಳಿದರೆ ನನ್ನದು ಒಂದೇ ಉತ್ತರ. ಅವರೇ ನನ್ನ ತಂದೆ.

ನಾನು ಹತ್ತನೇ ತರಗತಿ ಮುಗಿದ ಬಳಿಕ ಮುಂದಿನ ಆಯ್ಕೆಯ ಗೊಂದಲ್ಲಿದ್ದಾಗ ನನಗೆ ಉತ್ತಮ ಮಾರ್ಗವನ್ನು ಸೂಚಿಸಿ ಬದುಕಿನ ಹೊಸ ತಿರುವಿಗೆ ನಾಂದಿಯಾಗಿದ್ದಾರೆ.

Advertisement

ತಿಯೊಬ್ಬ ವಿದ್ಯಾರ್ಥಿಯಲ್ಲಿ ಈ ಗೊಂದಲ ಸರ್ವೇಸಾಮಾನ್ಯ. ಅಂತಹ ಸಂದರ್ಭದಲ್ಲಿ ಬದುಕಿನ ದಾರಿಯನ್ನು ಸೃಷ್ಟಿಸುವುದಕ್ಕೆ ಅದು ಪ್ರಮುಖ ಘಟ್ಟವೆಂದು ಹೇಳಬಹುದು.

ನಾನು ಎಸೆಸೆಲ್ಸಿ ಮುಗಿದ ಬಳಿಕ ಮುಂದೆ ಏನು ಮಾಡಬೇಕು ಎಂಬ ಗೊಂದಲದಲ್ಲಿದ್ದಾಗ ನನ್ನ ತಂದೆಯೇ ಆರ್ಟ್ಸ್ ಆಯ್ಕೆ ಮಾಡು, ಮುಂದೆ ಉತ್ತಮ ಅವಕಾಶವಿದೆ ಎಂದು ಪ್ರೋತ್ಸಾಹಿಸಿದರು.

ನನ್ನ ತಂದೆ ಹೇಳಿದಂತೆ ನಾನೆಲ್ಲವನ್ನು ನನ್ನ ಜೀವನದುದ್ದಕ್ಕೂ ಕರಗತ ಮಾಡಿಕೊಂಡು ಸಾಗಿದೆ. ಪಿಯುಸಿ ಮುಗಿದ ಕೂಡಲೇ ಮತ್ತೆ ಯಾವ ಕಾಲೇಜು ಆಯ್ಕೆ ಮಾಡಬೇಕೆಂಬ ಗೊಂದಲ ಉಂಟಾಯಿತು. ಆ ಸಂದರ್ಭದಲ್ಲಿ ನನ್ನ ತಂದೆಗೆ ಕೇಳಿ ಅವರ ಮಾರ್ಗದರ್ಶನದಂತೆ ಡಿಗ್ರಿ ಕಾಲೇಜಿಗೆ ಸೇರಿಕೊಂಡೆ. ಅಲ್ಲಿಂದ ಪತ್ರಿಕೋದ್ಯಮದತ್ತದ ತುಡಿತ ಆರಂಭವಾಯಿತು. ಮುಂದೆ ಪತ್ರಿಕೋದ್ಯಮ ಬೆಳೆದು ಬಂದ ದಾರಿ, ಹಲವು ಪತ್ರಕರ್ತರ ವರದಿಗಾರಿಕೆ ಹಾಗೂ ಅವರಲ್ಲಿರುವ ಧೈರ್ಯದ ಬಗ್ಗೆ ತಿಳಿದುಕೊಂಡೆ.

ಅಲ್ಲಿಂದ ನಾನು ಏಕೆ ಪತ್ರಕರ್ತನಾಗಬಾರದು ಎಂಬ ಯೋಚನೆ ಮೂಡಿತು. ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ತೆಗೆದುಕೊಳ್ಳಬೇಕೆಂದು ನಿರ್ಧರಿಸಿದೆ. ಪದವಿಯಲ್ಲಿ ಉತ್ತಮ ಅಂಕದೊಂದಿಗೆ ತೇರ್ಗಡೆಯಾಗಿ ಮುಂದೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯವನ್ನು ಆಯ್ದುಕೊಂಡೆ. ನನ್ನ ಎಲ್ಲ ಆಸೆ, ಕನಸುಗಳಿಗೆ ನನ್ನ ತಂದೆಯೇ ಒಬ್ಬ ಉತ್ತಮ ಮಾರ್ಗದರ್ಶಕವೆಂದು ನಾನು ಭಾವಿಸುತ್ತೇನೆ. ಅವರು ನೀಡುವ ಪ್ರತಿಯೊಂದು ಮಾರ್ಗದರ್ಶನವು ನನ್ನ ಜೀವನಕ್ಕೆ ಸ್ಫೂರ್ತಿದಾಯಕವಾಗಿದೆೆ. ಪ್ರತಿ ಹಂತದಲ್ಲೂ ನನ್ನಲ್ಲಿರುವ ಅಂಕು-ಡೊಂಕುಗಳನ್ನು ತಿದ್ದಿ ಸರಿದಾರಿ ಯಲ್ಲಿ ಮುನ್ನಡೆಯಲು ಪ್ರೇರಣೆಯಾಗಿರುವ ನನ್ನ ತಂದೆಯೇ ನನಗೆ ಆದರ್ಶ.

 

 ಮಲಿಕ್‌ ಎಲ್‌. ಜಮಾದಾರ, ರಾಣಿ ಚನ್ನಮ್ಮ ವಿ.ವಿ. ಬೆಳಗಾವಿ 

 

Advertisement

Udayavani is now on Telegram. Click here to join our channel and stay updated with the latest news.

Next