Advertisement
ಪುರಸಭೆ ವ್ಯಾಪ್ತಿಯ ಸಾವಿರಾರು ಮನೆಯವರ ಶೌಚಗೃಹದ ಕೊಳಚೆ ನೀರನ್ನು ಒಳಚರಂಡಿ ಮೂಲಕ ಪಟ್ಟಣದ ಹೊರಭಾಗದ ರೈಲ್ವೆ ನಿಲ್ದಾಣದ ಸಮೀಪದಲ್ಲಿರುವ ಸ್ವಾಭಾವಿಕ ಸಂಸ್ಕರಣಾ ಘಟಕಕ್ಕೆ ಹರಿ ಬಿಡಲಾಗುತ್ತಿದೆ.
Related Articles
Advertisement
3.50 ಕೋಟಿ ರೂ. ಆದಾಯ: ಪುರಸಭೆ ವ್ಯಾಪ್ತಿಯಲ್ಲಿ ವಾಸವಾಗಿರುವವರು ಮನೆ ತೆರಿಗೆ, ನೀರಿನ ಕರ ನೀಡುವುದಲ್ಲದೇ ಯುಜಿಡಿ ಸಂಪರ್ಕ ಪಡೆಯಲು ಪ್ರತ್ಯೇಕ ಹಣವನ್ನು ಪುರಸಭೆಗೆ ಸಂದಾಯ ಮಾಡಲಾಗುತ್ತಿದೆ, ಹೋಟೆಲ್, ರೆಸ್ಟೋರೆಂಟ್, ಲಾಡ್ಜ್ ಹಾಗೂ ಖಾಸಗಿ ಕಲ್ಯಾಣ ಮಂಟಪದವರು ಉದ್ದಿಮೆ ಪರವಾನಗಿ ಜೊತೆ ತೆರಿಗೆ ನೀಡುತ್ತಾರೆ ಒಟ್ಟಾರೆಯಾಗಿ ಪುರಸಭೆಗೆ ವಾರ್ಷಿಕ 3.50 ಕೋಟಿ ರೂ. ಸಂದಾಯವಾಗುತ್ತಿದೆ ಆದರೂ ಪುರಸಭೆಯವರು ಮಾತ್ರ ಕೊಳಚೆ ನೀರು ಸಂಸ್ಕರಣಾ ಘಟಕ ತೆರೆಯಲು ಮುಂದಾಗಿಲ್ಲ.
ಸರ್ಕಾರದ ಅನುದಾನ: ಪುರಸಭೆಗೆ ಸ್ಥಳೀಯವಾಗಿ ಆದಾಯ ಬರುತ್ತಿರುವುದಲ್ಲದೆ ಸರ್ಕಾರ ವಾರ್ಷಿಕವಾಗಿ ಇಂತಿಷ್ಟು ಅನುದಾನ ನೀಡುತ್ತದೆ. ಇದರೊಟ್ಟಿಗೆ ನಗರೊತ್ಥಾನ ಯೋಜನೆ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಕೋಟ್ಯಂತರ ರೂ. ಅನುದಾನ ಹರಿದು ಬರುತ್ತದೆ. ಇದರೊಟ್ಟಿಗೆ ಘನತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕವಾಗಿ ಅನುದಾನ ಬರುತ್ತದೆ ಆದರೂ ಪುರಸಭೆ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಕೊಳಚೆ ನೀರು ಸಂಸ್ಕರಣೆ ಮಾಡಿ ಪುನರ್ ಬಳಕೆ ಮಾಡಲು ಮುಂದಾಗುತ್ತಿಲ್ಲ.
ಪುನರ್ ಬಳಕೆ ಮಾಡಬಹುದು: ಪುರಸಭೆ ವ್ಯಾಪ್ತಿಯ 50 ಸಾವಿರ ಜನಸಂಖ್ಯೆ ಇದ್ದು ನಿತ್ಯವೂ 35 ಲಕ್ಷ ಲೀ. ನೀರು ಬಳಕೆಯಾಗುತ್ತಿದೆ. ಕೊಳಚೆ ನೀರು ವೈಜ್ಞಾನಿಕವಾಗಿ ಸಂಸ್ಕರಣೆಯಾದರೆ ಕೃಷಿ ಚಟುವಟಿಕೆಗೆ, ಉದ್ಯಾನವನಕ್ಕೆ ಮತ್ತು ಕಟ್ಟಡ ನಿರ್ಮಾಣಕ್ಕೆ ಬಳಸಬಹುದಾಗಿದೆ, ನೀರಿನ ಮಹತ್ವ ತಿಳಿಸುವ ಪುರಸಭೆ ಮೈಮರತು ಕೂತರೆ ಹೇಗೆ, ಸಂಸ್ಕರಣೆ ಮಾಡಿ ನೀರನ್ನು ಕೆರೆಗೆ ಹರಿದು ಬಿಟ್ಟರೆ ಅಂತರ್ಜಲ ವೃದ್ಧಿಯಾಗುತ್ತದೆ. ಸಂಸ್ಕರಣೆಯಾದ ಮೇಲೆ ಬರುವ ತ್ಯಾಜದಿಂದ ಜೈವಿಕ ಗೊಬ್ಬರ ತಯಾರು ಮಾಡಬಹುದು, ಈ ಬಗ್ಗೆ ಪುರಸಭೆ ಗಮನ ಹರಿಸಬೇಕಿದೆ.
ಸಾಂಕ್ರಾಮಿಕ ರೋಗದ ಭೀತಿ: ಶೌಚಗೃಹ ಘಟಕದ ಕೊಳಚೆ ನೀರಿನ ಮೇಲೆ ಕೊರುವ ಸೊಳ್ಳೆ ಗಳು ಜನರಿಗೆ ಕಚ್ಚುವುದರಿಂದ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗ ಹರಡುತ್ತಿದೆ. ಸೊಳ್ಳೆಯ ಭಯದಿಂದ ಚಿಕ್ಕಮಕ್ಕಳು ಮನೆಯ ಅಂಗಳದಲ್ಲಿ ಆಟವಾಡಲು ಬಿಡದಂತಹಾ ಪರಿಸ್ಥಿತಿ ನಿರ್ಮಾಣವಾಗಿದೆ. ಪುರಸಭೆ ಸಾಂಕ್ರಾಮಿಕ ರೋಗದ ಬಗ್ಗೆ ಅರಿವು ಮೂಡಿಸುತ್ತದೆ. ಆದರೆ ಶೌಚಗೃಹದ ನೀರು ಸಂಸ್ಕರಣೆ ಮಾಡದೇ ಇರುವುದರಿಂದ ಹಲವು ಗ್ರಾಮದ ಜನತೆ ಸಾಂಕ್ರಾಮಿಕ ರೋಗಕ್ಕೆ ತತ್ತಾಗುವಂತಾಗಿದೆ.
ವೈಜ್ಞಾನಿಕ ಸಂಸ್ಕರಣ ಘಟಕ ತೆರೆಯಲು ಹೆಚ್ಚು ಹಣ ವೆಚ್ಚವಾಗುವುದಲ್ಲದೇ ನಿರ್ವಹಣೆಗೆ ಪುನಃ ಹಣ ವೆಚ್ಚವಾಗಲಿದೆ. ಹಾಗಾಗಿ ಸ್ವಾಭಾವಿಕ ಸಂಸ್ಕರಣ ಘಟಕದ ಮೂಲಕ ಕೊಳಚೆ ನೀರು ಶುದ್ಧಿ ಮಾಡಲಾಗುತ್ತಿದೆ. ಐದು ಕೊಳಗಳನ್ನು ನಿರ್ಮಿಸಿ ನೀರು ಹರಿ ಬಿಡುವ ಮೂಲಕ ಶುದ್ಧಿ ಮಾಡಿದ ನಂತರ ಕೆರೆಗೆ ಹರಿಸಲಾಗುತ್ತಿದೆ.-ವೆಂಕಟೇಶ್, ಪರಿಸರ ಅಭಿಯಂತರರು, ಪುರಸಭೆ. ಪಟ್ಟಣದ ತ್ಯಾಜ್ಯ ನೀರಿನಿಂದ ಹೊಲ ಹಾಗೂ ಗದ್ದೆ ವಾಸನೆ ಬಂದಿರುವುದರಿಂದ ಹೊಲ ಹಾಗೂ ಗದ್ದೆಯ ಕಡೆ ಪುರುಷರು ಹೋಗಲು ಹಿಂಜರಿಯುತ್ತಿದ್ದಾರೆ. ರಾಸುಗಳ ಮೇಯಿಸುವ ಕೆಲಸ ಮಳೆಯರ ಹೆಗಲ ಮೇಲಿದೆ. ರಾಸುಗಳನ್ನು ಹೊಲಕ್ಕೆ ಕರೆ ತಂದರೆ ವಾಸನೆಯಿಂದ ರಾಸುಗಳು ಮೇಯುವುದಿಲ್ಲ. ಇದರಿಂದ ಬೇಸತ್ತು ಕೆಲವನ್ನು ರಾಸುಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.
-ಯಶೋಧಮ್ಮ ಡಿ.ಕಾಳೇನಹಳ್ಳಿ ರೈತ ಮಹಿಳೆ * ಶಾಮಸುಂದರ್ ಕೆ.ಅಣ್ಣೇನಹಳ್ಳಿ