Advertisement

Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ

04:08 PM Nov 17, 2024 | Team Udayavani |

ತೆಕ್ಕಟ್ಟೆ: ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದ ಶ್ರೀ ಭೋಗನಂದಿಕೇಶ್ವರ ದೇವಸ್ಥಾನದ ನೂತನ ಬ್ರಹ್ಮರಥ ನಿರ್ಮಾಣ ಕಾರ್ಯವು ಕುಂದಾಪುರ ತಾಲೂಕಿನ ಕುಂಭಾಶಿ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಲ್ಲಿ ಪೂರ್ಣಗೊಂಡಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಕೊಂಡಿರುವ, ಶಿಲ್ಪಕಲಾ ಕೇಂದ್ರದ ರಥಶಿಲ್ಪಿ ಲಕ್ಷ್ಮೀ ನಾರಾಯಣ ಆಚಾರ್ಯ ಅವರ ಮಾರ್ಗದರ್ಶನದಲ್ಲಿ ನಿರ್ಮಾಣವಾದ 173ನೇ ರಥ ಇದಾಗಿದೆ.

Advertisement

ನ.18ರಂದು ಕುಂಭಾಶಿಯಿಂದ ರವಾನೆ ಯಾಗಲಿರುವ ಹಿನ್ನೆಲೆಯಲ್ಲಿ ನ.17ರ ಸಂಜೆ ಗಂಟೆ 4.30ರಿಂದ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ನ. 18ರಂದು ಕುಂಭಾಶಿಯಿಂದ ನೂತನ ಬ್ರಹ್ಮರಥದ ಮೆರವಣಿಗೆ ಹೊರಡಲಿದ್ದು, ಕೋಟೇಶ್ವರದ ಮಹತೋಭಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ‘ಶತರುದ್ರ’, ಮಧ್ಯಾಹ್ನ 1 ಗಂಟೆಗೆ ‘ಅನ್ನಸಂತರ್ಪಣೆ’, ರಾತ್ರಿ 8 ಗಂಟೆಗೆ ‘ದೊಡ್ಡ ರಂಗಪೂಜೆ’ ಹಾಗೂ ‘ಬೆಳ್ಳಿ ರಥೋತ್ಸವ’ ಸಂಪ್ರದಾಯದಂತೆ ನಡೆಯಲಿದೆ.

9 ತಿಂಗಳಿನಿಂದ ನಿರ್ಮಾಣ ಕಾರ್ಯ
ದಾನಿ ವೆಂಕಟೇ ಗೌಡ ಅವರು ನಂದಿಯ ದೇಗುಲಕ್ಕೆ ಸೇವಾ ರೂಪದಲ್ಲಿ ನೀಡುತ್ತಿರುವ ಈ ಬೃಹತ್‌ ಬ್ರಹ್ಮರಥದ ನಿರ್ಮಾಣ ಕಾರ್ಯವು ಸುಮಾರು 9 ತಿಂಗಳಿಂದಲೂ ಕುಂದಾಪುರ ತಾಲೂಕಿನ ಕೋಟೇಶ್ವರದ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಪುರಾತನ ಬ್ರಹ್ಮರಥದ ಅಳತೆ, ಆಯ, ವಿನ್ಯಾಸ, ಶಿಲ್ಪಕಲಾ ಕೃತಿಗಳನ್ನೇ ಅತ್ಯಂತ ಶ್ರದ್ಧೆ ಹಾಗೂ ಕೌಶಲದಿಂದ ಈ ರಥದಲ್ಲಿ ಅಭಿವ್ಯಕ್ತಿಸಲಾಗಿದೆ.

54 ಅಡಿ ಎತ್ತರದ ಬ್ರಹ್ಮರಥ
ಅಚ್ಚಿನ ಮರ ಹಾಗೂ ಸುಮಾರು 8 ಅಡಿ ಎತ್ತರದ ಚಕ್ರ ಬೋಗಿ ಮರದಿಂದ, ಉಳಿದ ಜಿಡ್ಡೆಯ ಭಾಗ ಎಲ್ಲವೂ ಕೂಡ ಸಾಗುವಾನಿ ಮರವನ್ನು ಉಪಯೋಗಿಸಿ ನಕ್ಷತ್ರಾಕಾರದ ರಥ ನಿರ್ಮಿಸಲಾಗಿದೆ. ಹೂವಿನ ಸಾಲು, ಕೊನೆ ಅಡ್ಡೆ ಸಾಲು, ಬಳ್ಳಿ ಸಾಲು, ಶಿವನ ಪರಿವಾರ, ಪಾರ್ವತಿ ಕಲ್ಯಾಣ, ಧ್ವಜ ಸಂಹಾರ, ರಕ್ಷಣ ಮೂರ್ತಿ ಲಿಂಗೋದ್ಭವ ಮೂರ್ತಿ, ವೃಷಭ ವಾಹನ ಸೇರಿದಂತೆ ವಿವಿಧ ಪ್ರಾಕಾರದಲ್ಲಿ ಆಕರ್ಷಕವಾದ ಮೂರ್ತಿಗಳನ್ನು ಚಿತ್ರಿಸಲಾಗಿದ್ದು, ಈ ರಥಕ್ಕೆ 2 ಬದಿ ಸ್ಟೇರಿಂಗ್‌ಗಳನ್ನು ಅಳವಡಿಸಿ ಸುಲಭವಾಗಿ ತಿರುಗುವಂತೆ ಮಾಡಲಾಗಿದೆ. 8 ಅಡಿ ಚಕ್ರದೊಂದಿಗೆ ನೆಲದಿಂದ ಜಿಡ್ಡೆಯವರೆಗೆ 15 ಅಡಿ ಎತ್ತರ ದೇವರು ಕುಳಿತುಕೊಳ್ಳುವ ಭಾಗದಲ್ಲಿ 6 ಅಡಿ ಎತ್ತರ, ಗೂಡು, ಸಣ್ಣ ಗೂಡು ಹಾಗೂ ಕಲಶ ಸೇರಿದಂತೆ ಸುಮಾರು 54 ಅಡಿ ಎತ್ತರದ ಬೃಹತ್‌ ಬ್ರಹ್ಮರಥ ಇದಾಗಿದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next