Advertisement

ಮಸೀದಿ-ಮದ್ರಸಗಳು ಸೌಲಭ್ಯಗಳ ಮಾಹಿತಿ ನೀಡಲಿ

12:53 PM Sep 24, 2017 | Team Udayavani |

ಮಂಗಳೂರು : ಸರಕಾರವು ಅಲ್ಪಸಂಖ್ಯಾಕ ಮುಸ್ಲಿಂ ಸಮುದಾಯಕ್ಕೆ ನೀಡುವ ಸೌಲಭ್ಯಗಳ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಲುಪಿಸುವ ನಿಟ್ಟಿನಲ್ಲಿ ಮಸೀದಿ-ಮದ್ರಸಗಳು ಧಾರ್ಮಿಕ ಆಚರಣೆಯ ಜತೆಗೆ ಮಾಹಿತಿ ಕೇಂದ್ರವಾಗಿಯೂ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ವಕ್ಫ್ ಸಚಿವ ತನ್ವೀರ್‌ಸೇಠ್ ಹೇಳಿದರು.

Advertisement

ಅವರು ಶನಿವಾರ ನಗರದ ಬೋಳಾರದಲ್ಲಿ ನಡೆದ ದ.ಕ. ಹಾಗೂ ಉಡುಪಿ ಜಿಲ್ಲಾ ಮುತವಲ್ಲಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.ರಾಜ್ಯ ಸರಕಾರವು ಮುಸ್ಲಿಂ ಸಮುದಾಯ ಕಲ್ಯಾಣಕ್ಕೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದು ಎಲ್ಲರಿಗೂ ತಲುಪಬೇಕು ಎನ್ನುವ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಮಾಹಿತಿ ಕೇಂದ್ರಗಳನ್ನೂ ತೆರೆಯಲಾಗಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ಜನರಿಗೆ ತಲುಪದ ಹಿನ್ನೆಲೆಯಲ್ಲಿ ಮುತವಲ್ಲಿಗಳು, ಇಮಾಮರು ಮಾಹಿತಿ ನೀಡುವ ಕಾರ್ಯ ಮಾಡಬೇಕು ಎಂದರು.

ಮಸೀದಿ-ಮದ್ರಸಗಳ ನಿರ್ವಹಣೆಯಜವಾಬ್ದಾರಿ ಧಾರ್ಮಿಕ ಮುಖಂಡರದ್ದಾಗಿದ್ದು, ಸೇವೆಯಾಗಿ ಮುಂದುವರಿಸಬೇಕು. ವಕ್ಫ್ ಆಸ್ತಿ ಒತ್ತುವರಿ ಮಾಡಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಮುತವಲ್ಲಿಗಳಿಗೆ ಗೌರವ ಧನ
ಆಹಾರ ಸಚಿವ ಯು.ಟಿ. ಖಾದರ್‌ ಮಾತನಾಡಿ, ನಾವು ವಕ್ಫ್ ಮಂಡಳಿಯ ಆದೇಶಕ್ಕೆ ಗೌರವ ಕೊಟ್ಟು, ಜಮಾತ್‌ನ ಸಣ್ಣಪುಟ್ಟ ವಿಚಾರಗಳನ್ನು ನಮ್ಮೊಳಗೆ ಪರಿಹರಿಸಬೇಕಿದೆ. ಮದ್ರಸಗಳ ಮುತವಲ್ಲಿಗಳಿಗೂ ಗೌರವ ಧನ ನೀಡುವ ಕುರಿತು ಸರಕಾರದ ಗಮನ ಸೆಳೆಯಲಾಗುವುದು ಎಂದರು.

ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್‌ ಮುಸ್ಲಿಯಾರ್‌ ದುವಾ ನೆರವೇರಿಸಿದರು. ಶಾಸಕ ಜೆ.ಆರ್‌. ಲೋಬೊ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ವಿಧಾನ ಪರಿಷತ್‌ ಮುಖ್ಯಸಚೇತಕ ಐವನ್‌ ಡಿ’ಸೋಜಾ, ವಕ್ಫ್ ಬೋರ್ಡ್‌ನ ವಿಶೇಷಾಧಿಕಾರಿ ಮುಜೀಬುಲ್ಲಾ ಜಪ್ಫಾರಿ, ಬೋರ್ಡ್‌ನ ಸಿಇಒ ಎಸ್‌.ಎಂ.ಝುಲ್ಫಿಕರ್‌ ಉಲ್ಲಾ, ಎಡಿಸಿ ಅನುರಾಧಾ, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್‌. ಖಾದರ್‌, ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮದ
ಅಧ್ಯಕ್ಷ ಎಂ.ಎ. ಗಫೂರ್‌, ವಿಧಾನಪರಿಷತ್‌ ಸದಸ್ಯ ಅಬ್ದುಲ್‌ ಜಬ್ಟಾರ್‌, ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ, ವಕ್ಫ್ ಬೋರ್ಡ್‌ನ ಮಾಜಿ ಸದಸ್ಯ ವೈ. ಮುಹಮ್ಮದ್‌ ಕುಂಞಿ, ಯೇನಪೊಯ ವಿ.ವಿ. ಕುಲಾಧಿಪತಿ ವೈ. ಅಬ್ದುಲ್ಲ ಕುಂಞಿ ಮೊದಲಾದವರು ಉಪಸ್ಥಿತರಿದ್ದರು. 

Advertisement

ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಎಸ್‌.ಎಂ. ರಶೀದ್‌ ಸ್ವಾಗತಿಸಿದರು. ಉಡುಪಿ ವಕ್ಫ್ ಸಲಹಾ ಸಮಿ
ತಿಯ ಮಾಜಿ ಅಧ್ಯಕ್ಷ ಯಹ್ಯಾ ನಕ್ವಾ ವಂದಿಸಿದರು. ಟಿಆರ್‌ಎಫ್‌ ಸಲಹೆಗಾರ ರಫೀಕ್‌ ಮಾಸ್ಟರ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next