ಮಣಿಪಾಲ: ರೋಬೋಟಿಕ್ಸ್ , ಕಂಟ್ರೋಲ್, ಆಟೊಮೇಷನ್ ಮತ್ತು ಆರ್ಟಿಫಿಶಿಯಲ್ ಇಂಟೆಲಿನ್ಸ್ (ಆರ್‌ಸಿಎಐ-2024) ಕುರಿತಾದ 3ನೇ ಅಂತಾರಾಷ್ಟ್ರೀಯ ಸಮ್ಮೇಳನವು ಅ.14ರಿಂದ 16ರ ವರೆಗೆ ಜೈಪುರದ ಮಲಾವಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಎನ್‌ಐಟಿ) ಸಹಯೋಗದೊಂದಿಗೆ ಮಾಹೆಯ ಎಂಐಟಿಯಲ್ಲಿ ನಡೆಯಿತು.
ಉದ್ಘಾಟನ ಸಮಾರಂಭದಲ್ಲಿ ಮಾಹೆ ಕುಲಸಚಿವ ಡಾ| ಪಿ. ಗಿರಿಧರ್ ಕಿಣಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸುಸ್ಥಿರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಅಗತ್ಯಗಳನ್ನು ವಿವರಿಸಿದರು.
ಎಂಐಟಿ ನಿರ್ದೇಶಕ ಕ| ಡಾ| ಅನಿಲ್ ರಾಣ, ಸುಸ್ಥಿರತೆಯ ಸಾಮಾನ್ಯ ಗುರಿಯಡಿಯಲ್ಲಿ ಸಮ್ಮೇಳನವು ಮೆಕಾಟ್ರಾನಿಕ್ಸ್ ವಿಷಯಗಳನ್ನು ಉತ್ಕೃಷ್ಟವಾಗಿ ಸಂಯೋಜಿಸಿದೆ ಎಂದು ಶ್ಲಾಘಿ ಸಿದರು.
ಮೆಕಾಟ್ರಾನಿಕ್ಸ್ ವಿಭಾಗ ಮುಖ್ಯಸ್ಥ ಡಾ| ಡಿ.ವಿ. ಕಾಮತ್ ಸ್ವಾಗತಿಸಿದರು. ಎಂಎನ್‌ಐಟಿ ಸಹ ಸಂಚಾಲಕ ಡಾ| ರಾಜೀವ್ ಅಗರವಾಲ್ ಪ್ರಸ್ತಾವಿಸಿದರು. ಸಮ್ಮೇಳನದ ಸಂಚಾಲಕ ಡಾ| ಈಶ್ವರ ಬಿರಾಡಿ ಸಮ್ಮೇಳನದ ರೂಪುರೇಷೆ, ಆವಶ್ಯಕತೆ, ಮಹತ್ವದ ಬಗ್ಗೆ ತಿಳಿಸಿದರು.
ಆಟೊಮೇಷನ್ ಮೂಲಕ ಸುಸ್ಥಿರತೆ ಎಂಬ ವಿಷಯದಲ್ಲಿ ನಡೆದ ಸಮ್ಮೇಳನದಲ್ಲಿ ಸಂಶೋಧಕರು, ಉದ್ಯಮ ವಲಯದ ಪ್ರಮುಖರು, ಶಿಕ್ಷಣ ತಜ್ಞರು ಸಹಿತ 350ಕ್ಕೂ ಅಧಿಕ ತಜ್ಞರು ಪಾಲ್ಗೊಂಡಿದ್ದರು. 86 ಉತ್ಕೃಷ್ಟ ಪ್ರಬಂಧಗಳು ಮಂಡನೆಯಾಗಿವೆ. ಏಳು ತಜ್ಞರು ವಿವಿಧ ವಿಷಯಗಳ ಮಂಡನೆ ಮಾಡಿದ್ದಾರೆ. ಸಮ್ಮೇಳನದ ಕೊನೆಯಲ್ಲಿ ಗಿಡ ನೆಡಲಾಯಿತು.