ಬೆಂಗಳೂರು: ಹಣ ಮತ್ತು ಜಾತಿ ವ್ಯವಸ್ಥೆಯ ದುರ್ಬಳಕೆಯಿಂದ ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗಗಳ ಮೌಲ್ಯಧಿದಲ್ಲಿ ಕುಸಿತ ಕಾಣುತ್ತಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆತಂಕ ವ್ಯಕ್ತಪಡಿಸಿದರು.
ಶುಕ್ರವಾರ ಕಬ್ಬನ್‌ಪಾರ್ಕ್ ಎನ್‌ಜಿಒ ಸಭಾಂಗಣದಲ್ಲಿ ಯುನೈಟೆಡ್‌ಲಾಯರ್ಸ್ ಫೋರಂ ವತಿಯಿಂದ ವಿಧಾನಪರಿಷತ್‌ಗೆ ನೂತನ ಸದಸ್ಯರಾಗಿ ಆಯ್ಕೆಯಾದ ರಮೇಶ್ ಬಾಬು ಅವರಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಎಲ್ಲ ರಂಗಳಲ್ಲೂ ಮೌಲ್ಯಗಳು ಕುಸಿತಗೊಳ್ಳುತ್ತಿದೆ.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಕಿಧಿಕೊಟ್ಟ ಮಾರ್ಗಧಿದರ್ಶನವನ್ನೇ ನಾವಿಂದು ಮರೆಧಿಯುಧಿತ್ತಿರುವುದು ದುರದೃಷ್ಟಕ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ನಾಯಕತ್ವದ ಗುಣ ಹಾಗೂ ಪ್ರತಿಭೆಯುಳ್ಳ ಯುವ ಪೀಳಿಗೆ ಸಮಾಜದ ಏಳಿಗೆಯಲ್ಲಿ ಸಕ್ರಿಯರಾಗಬೇಕಾಗಿದೆ. ನಮ್ಮಲ್ಲಿ ಪ್ರತಿಭೆಧಿಗಳಿಗೆ ಯಾವುದೇ ಕೊರತೆ ಇಲ್ಲ ಆದರೆ ಅವರಿಗೆ ಅವಕಾಶ ಕೊಡುವ ರಾಜಕೀಯ ಪಕ್ಷಗಳು ಹೆಚ್ಚಾಗಬೇಕಾಗಿದೆ ಎಂದರು.
ರಮೇಶ್ ಬಾಬು ಪಕ್ಷದಲ್ಲಿ ಅತ್ಯಂತ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದವರು. ವಕೀಲರಾಗಿಯೂ ಅವರನ್ನು ನಾನು ಬಲ್ಲೆ. ಅಲ್ಲದೆ ಪಕ್ಷದಲ್ಲಿನ ಅವರ ಚಟುವಟಿಕೆ ಹಾಗೂ ಸಾಮಾನ್ಯ ವರ್ಗದ ಮೇಲೆ ಅವರಿಗಿರುವ ಕಾಳಜಿಯನ್ನು ಸೂಕ್ಷ್ಮವಾಗಿ ಗಮನಿಸಿ, ಪರಿಷತ್ ಸದಸ್ಯ ಸ್ಥಾನದ ಚುನಾವಣೆಗೆ ಅವಕಾಶ ನೀಡಲಾಗಿತ್ತು ಎಂದು ಹೇಳಿದರು.
ಹೆಚ್ಚುವರಿ ಅಡ್ವೋಕೇಟ್ ಜನರಲ್ ಎ.ಎಸ್.ಪೊನ್ನಣ್ಣ, ಮಾಜಿ ಅಡ್ವೋಕೇಟ್ ಜನರಲ್‌ಗಳಾದ ರವಿ ವರ್ಮ ಕುಮಾರ್, ಉದಯ್ ಹೊಳ್ಳ, ಹಿರಿಯ ವಕೀಲೆ ಪ್ರಮಿಳಾ ನೇಸರ್ಗಿ, ಹಿರಿಯ ವಕೀಲರಾದ ಎಸ್.ಎನ್.ಅಶ್ವಥ್ ನಾರಾಯಣ, ಸಿ.ಎಚ್.ಹನುಮಂತರಾಯ ಉಪಸ್ಥಿತರಿದ್ದರು.