Advertisement
ಜ್ಯುವೆಲ್ಲರಿ ಮಳೆಗೆಯಲ್ಲಿ ಕಳವು ಮಾಡಲು ಸಂಚು ರೂಪಿಸಿದ್ದ ಆರೋಪಿ, ಜೂನ್ 19ರಂದು ಕಲಬುರಗಿ ವಿಳಾಸ ನೀಡಿ ಹುಸೇನ್ ಎಂಬ ಹೆಸರಲ್ಲಿ ಕೊಠಡಿ ಪಡೆದಿದ್ದಾನೆ. ಆತನಿದ್ದ ಕೊಠಡಿ ಜ್ಯುವೆಲ್ಲರಿ ಮಳಿಗೆಯ ಮೇಲಾºಗದಲ್ಲೇ ಇತ್ತು. ಇದು ಆತನ ಕೃತ್ಯಕ್ಕೆ ನೆರವಾಗಿದೆ. ನಿತ್ಯ ರಾತ್ರಿ ತನ್ನ ಕೊಠಡಿಯಿಂದಲೇ ಜ್ಯುವೆಲ್ಲರಿ ಅಂಗಡಿಗೆ ಆತ ರಂಧ್ರ ಕೊರೆದಿದ್ದ. ರಂಧ್ರ ಗೊತ್ತಾಗದಂತೆ ವಸ್ತುಗಳನ್ನು ಇಟ್ಟಿದ್ದ. ಶನಿವಾರ ಜೈನರ ಹಬ್ಬ ಇರುವುದರಿಂದ ಸಂಜೆ ಜ್ಯುವೆಲ್ಲರಿ ಮಳಿಗೆಗೆ ರಜೆ ಇತ್ತು.
Related Articles
ತಡರಾತ್ರಿಯೇ ತನ್ನ ಕೃತ್ಯ ಮುಗಿಸಿದ್ದ ಆರೋಪಿ ತರ್ತು ಕೆಲಸವಿದೆ ಎಂದು ಹೇಳಿ ಭಾನುವಾರ ಮುಂಜಾನೆ 6 ಗಂಟೆ ಸುಮಾರಿಗೆ ಕೊಠಡಿ ಖಾಲಿ ಮಾಡಿದ್ದಾನೆ. ಕೊಠಡಿ ಖಾಲಿ ಮಾಡುವಾಗ ಆತನ ಬಳಿ ಸಣ್ಣ ಬ್ಯಾಗ್ ಹೊರತುಪಡಿಸಿ ಬೇರೆ ಯಾವುದೇ ವಸ್ತುಗಳಿರಲಿಲ್ಲ ಎಂದು ಲಾಡ್ಜ್ ಸಿಬ್ಬಂದಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜ್ಯುವೆಲ್ಲರಿ ಅಂಗಡಿ ಹಾಗೂ ಲಾಡ್ಜ್ನಲ್ಲಿನ ಸಿಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದು, ಕಳ್ಳನ ಚಲನವಲನಗಳ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಪಕ್ಕದ ಕೊಠಡಿಯವನ ವಿಚಾರಣೆಕನ್ನ ಕೊರೆದಿರುವ ಕೊಠಡಿ ಪಕ್ಕದ ಕೊಠಡಿಯಲ್ಲೇ ಮೂರು ದಿನಗಳಿಂದ ವಾಸವಾಗಿರುವ ತಮಿಳುನಾಡು ಮೂಲದ ವ್ಯಕ್ತಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ನಗರದಲ್ಲಿ ಕಂಪ್ಯೂಟರ್ ಖರೀದಿಗಾಗಿ ಬಂದಿದ್ದಾಗಿ ಈತ ಹೇಳಿಕೊಂಡಿದ್ದು, ಈತನ ಬಳಿ ಕಂಪ್ಯೂಟರ್ ಬಿಡಿಭಾಗಗಳ ಖರೀದಿ ಮಾಡಿದ ರಶೀದಿ ಲಭ್ಯವಾಗಿದೆ.