Advertisement

Research; ತುರಿಸದ ಸುವರ್ಣ ಗಡ್ಡೆ, ಕೆಸು: ಎನ್‌ಐಟಿಕೆಗೆ ಪೇಟೆಂಟ್‌

10:45 PM Jan 03, 2025 | Team Udayavani |

ಸುರತ್ಕಲ್‌: ಇಲ್ಲಿನ ಎನ್‌ಐಟಿಕೆ ಸಂಸ್ಥೆಯು ದೀರ್ಘ‌ಕಾಲ ಸಂರಕ್ಷಿಸಿ ಇಡಬಹುದಾದ ಹಾಗೂ ಶೇ. 90ಕ್ಕೆ ಹೆಚ್ಚು ಸುರಕ್ಷಿತ, ಕೈ, ಬಾಯಿ ತುರಿಸದಂಥ ಸುವರ್ಣ ಗಡ್ಡೆ, ಕೆಸುವು, ಮುಡ್ಲಿ ಗಡ್ಡೆಗಳ ಮೇಲೆ ಸಂಶೋಧನೆ ಮಾಡಿ ಪೇಟೆಂಟ್‌ ಪಡೆದುಕೊಂಡಿದೆ. ಸೇಲಂ, ಆಂಧ್ರ, ಜೊಯಿಡಾ, ಸುಳ್ಯ ಮತ್ತಿತರೆಡೆ ಬೆಳೆಯುವ ಗಡ್ಡೆಗಳಲ್ಲಿ ಬಾಯಿ ತುರಿಸುವ ಗುಣ ಹೆಚ್ಚಿರುತ್ತದೆ.

Advertisement

ಇದನ್ನು ಆಹಾರದಲ್ಲಿ ಬಳಸುವ ಮೊದಲು ಹೆಚ್ಚು ಪೂರ್ವತಯಾರಿ ಅಗತ್ಯವಿರುತ್ತದೆ. ಎನ್‌ಐಟಿಕೆ ಈ ವಿಧಾನವನ್ನು ಸರಳಗೊಳಿಸಿ ನೇರವಾಗಿ ಅಡುಗೆ ಮಾಡಲು ಅನುಕೂಲವಾಗುವಂತೆ ಪರಿವರ್ತಿಸುವಲ್ಲಿ ಯಶಸ್ವಿಯಾಗಿದೆ. ಜೊಯಿಡಾದ ಕುನಾಬಿ ಬುಡಕಟ್ಟು ಜನಾಂಗವು ಮುಡ್ಲಿಯನ್ನು ಸಂರಕ್ಷಿಸಲು ಮಾಡುತ್ತಿದ್ದ ವಿಶೇಷ ಮೂಲ ಕ್ರಮಗಳ ಆಧಾರದಲ್ಲಿ ಕೆಮಿಕಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರೊ| ಪ್ರಸನ್ನ ಬೇಳೂರು ಮತ್ತು ತಂಡ ಸಂಶೋಧಿಸಿ, ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next