Advertisement

ಮೋದಿ ಸರಕಾರ 24 ಲಕ್ಷ ಕೋಟಿ ರೂ ಲೂಟಿ ಮಾಡಿದೆ : ಪೃಥ್ವಿರಾಜ್ ಚೌಹಾಣ್ ಆರೋಪ

05:12 PM Jan 31, 2022 | Team Udayavani |

ಪಣಜಿ: ಕಳೆದ ಏಳು ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ತೆರಿಗೆಯಿಂದ ಸಂಗ್ರಹಿಸಲಾದ ತೆರಿಗೆಯಿಂದ ಮೋದಿ ಸರಕಾರ 24 ಲಕ್ಷ ಕೋಟಿ ರೂ. ಲೂಟಿ ಮಾಡಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಆರೋಪಿಸಿದ್ದಾರೆ.

Advertisement

ಪಣಜಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣದುಬ್ಬರ, ಪರಿಸರ ನಾಶ ಇವುಗಳೇ ಬಿಜೆಪಿ ಘಟಕಗಳಾಗಿವೆ. ಇದೀಗ ಬಿಜೆಪಿಯು ದೇಶ ಮತ್ತು ರಾಜ್ಯದ ಜನರನ್ನು ಲೂಟಿ ಮಾಡಲು ಆರಂಭಿಸಿದೆ. ಹಣದುಬ್ಬರದಿಂದ ಹೊರಬರಬೇಕಾದರೆ ಬಿಜೆಪಿಯನ್ನು ಸೋಲಿಸಿ ಎಂದು ಕರೆ ನೀಡಿದರು.

ನೋಟುಗಳನ್ನು ನಿಷೇಧಿಸಿ ಸರಕು ಮತ್ತು ಸೇವಾ ತೆರಿಗೆ ವಿಧಿಸಿರುವುದು ಮೋದಿ ಸರಕಾರದ ದೊಡ್ಡ ತಪ್ಪು. ಮೋದಿ ಸರಕಾರವು ಆರ್ಥಿಕತೆಯ ಮೇಲಿನ ನಿಯಂತ್ರಣ ಕಳೆದುಕೊಂಡಿದೆ ಮತ್ತು ಸದ್ಯದ ಪರಿಸ್ಥಿತಿ ಭೀಕರವಾಗಿದೆ. ಇದರಿಂದಾಗಿ ಜನತೆ ಬಿಜೆಪಿ ಸರ್ಕಾರವನ್ನು ಮನೆಗೆ ಕಳುಹಿಸಬೇಕಾಗಿದೆ. ಪ್ರಸಕ್ತ ಬಾರಿ ಬಜೆಟ್‍ನಲ್ಲಿ ಮೋದಿ ಯಾವ ರೀತಿ ಅಂಕಿ ಅಂಶಗಳನ್ನು ತೋರಿಸಲಿದ್ದಾರೆ ಎಂಬುದನ್ನು ದೇಶದ ಜನತೆ ಗಮನಿಸುತ್ತಿದ್ದಾರೆ ಎಂದರು.

ಹಣದುಬ್ಬರವನ್ನು ಹೆಚ್ಚಿಸುವ ಮೂಲಕ ಮೋದಿ ಸರ್ಕಾರ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಭಾವನೆಗಳೊಂದಿಗೆ ಆಟವಾಡುತ್ತಿದೆ. ಮೋದಿ ಸರಕಾರ ಕಾಳಧನಿಕರ ವಿರುದ್ಧ ಕ್ರಮ ಕೈಗೊಂಡಿಲ್ಲ. ಮೋದಿಜಿ ಹಲವು ತೆರಿಗೆಗಳ ಲೂಟಿ ಹಣದಲ್ಲಿ ಪೇಟ್ರೋಲ್ ಪಂಪ್‍ಗಳಲ್ಲಿ ಮತ್ತು ದಿನಪತ್ರಿಕೆಗಳಲ್ಲಿ ತಮ್ಮ ಜಾಹೀರಾತನ್ನು ಪ್ರಕಟಿಸುವಲ್ಲಿ ನಿರತರಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗೋವಾ ಕಾಂಗ್ರೆಸ್ ಪ್ರಭಾರಿ ದಿನೇಶ್ ಗುಂಡೂರಾವ್ ಮಾತನಾಡಿ, ಬಿಜೆಪಿ ಆಡಳಿತವಿರುವ ರಾಜ್ಯಗಳು ಜನರನ್ನು ಲೂಟಿ ಮಾಡುತ್ತಿವೆ ಹಾಗಾಗಿ ಅವರನ್ನು ಮನೆಗೆ ಕಳುಹಿಸಬೇಕು ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ವಕ್ತಾರೆ ಅಲ್ಕಾ ಲಾಂಬಾ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next