ಬೆಂಗಳೂರು: ಕೆಂಪೇಗೌಡ ಬಡಾವಣೆ, ಬಿಡದಿ ಹಾಗೂ ರಾಮನಗರದಿಂದ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಕೆಂಗೇರಿ ಮೆಟ್ರೋ ಜಾಲದ ಪಶ್ಚಿಮ ತುದಿಯನ್ನು ವಿಸ್ತರಿಸಿ ಚಲ್ಲಘಟ್ಟದಲ್ಲಿ ಹೆಚ್ಚುವರಿ ಮೆಟ್ರೋ ನಿಲ್ದಾಣ ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಆದರೆ ವಿಸ್ತರಿಸಿದ ಮೆಟ್ರೋ ಮಾರ್ಗ ಕಾಮಗಾರಿ ಪೂರ್ಣಗೊಳಿಸಲು ನೀಡಿರುವ ಗಡುವಿನ ಬಗ್ಗೆ ಮಾಹಿತಿ ನೀಡಿಲ್ಲ.
ಜತೆಗೆ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರ ಮತ್ತು ಹೆಬ್ಟಾಳ ಮಾರ್ಗವಾಗಿ ಹೊರ ವರ್ತುಲ ರಸ್ತೆ – ವಿಮಾನ ನಿಲ್ದಾಣ ಮಾರ್ಗ ನಿರ್ಮಾಣಕ್ಕಾಗಿ 16,579 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವುದಾಗಿ ತಿಳಿಸಲಾಗಿದೆ. ಆದರೆ, ಪ್ರಸಕ್ತ ಸಾಲಿನಲ್ಲಿ ಎಷ್ಟು ಅನುದಾನ ನೀಡಲಾಗುತ್ತದೆ ಎಂಬ ಮಾಹಿತಿಯಿಲ್ಲ.
* ಮೆಟ್ರೋ ಮತ್ತು ಬಸ್ ಸೇವೆಗಳಿಗೆ ಬಳಸಬಹುದಾದ ಚಾಲನೆ ಕಾರ್ಡ್‌ಗಳ ಪ್ರಾರಂಭ.
* 3 ಕೋಚ್‌ಗಳಿರುವ ಎಲ್ಲ 50 ರೈಲು ಸೆಟ್‌ಗಳನ್ನು 6 ಕೋಚ್‌ಗಳ ಸೆಟ್‌ಗಳಾಗಿ ಪರಿವರ್ತನೆ ಮಾಡುವುದು.
* ಆಯ್ದ 10 ಮೆಟ್ರೋ ನಿಲ್ದಾಣಗಳಲ್ಲಿ ದ್ವಿಚಕ್ರ ವಾಹನಗಳಿಗೆ ವಿದ್ಯುತ್ ಚಾರ್ಜಿಂಗ್ ಸೌಕರ್ಯ, ಬಸ್ ಸೌಕರ್ಯ ಪ್ರಸ್ತಾಪಿಸಲಾಗಿದೆ.