ಚನ್ನರಾಯಪಟ್ಟಣ: ಪಟ್ಟಣದ ಹೊರ ವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹೊರ ರಾಜ್ಯದಿಂದ ಬಂದವರನ್ನು ಕ್ವಾರಂಟೈನ್ ಮಾಡಲಾಗಿದ್ದು, ಮೂಲ ಸೌಕರ್ಯ ಕಲ್ಪಿಸದೇ ಇರುವ ಬಗ್ಗೆ ಪೊಲೀಸ್ ಹಾಗೂ ನೋಡಲ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಕ್ವಾರಂಟೈನಲ್ಲಿರುವ ಸುಮಾರು 46ಕ್ಕೂ ಹೆಚ್ಚು ಮಂದಿಗೆ ಸಾಮೂಹಿಕ ಸ್ನಾನದ ಗೃಹ, ಸಾಮೂಹಿಕ ಶೌಚಾಲಯ ಸೌಲಭ್ಯ ಕಲ್ಪಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಪ್ರತ್ಯೇಕ ಬಕೆಟ್ ಹಾಗೂ ಜಗ್ ನೀಡಿಲ್ಲ. ತಾಲೂಕು ಆಡಳಿತ ಸರಿಯಾದ ವ್ಯವಸ್ಥೆ ಮಾಡಲು ಸಾಧ್ಯವಾಗದಿದ್ದರೆ ನಮ್ಮನ್ನು ಸ್ವಗ್ರಾಮಕ್ಕೆ ಕಳುಹಿಸಿ ನಮ್ಮ ಮನೆಯಲ್ಲೇ ಹೋಮ್ ಕ್ಯಾರಂಟೈನ್‌ನಲ್ಲಿ ಇರುತ್ತೇವೆ ಎಂದು ಒತ್ತಾಯಿಸಿದರು.
ನೋಡಲ್ ಅಧಿಕಾರಿ ಬಿಸಿಎಂ ಇಲಾಖೆ ಮಂಜುನಾಥ ಹಾಗೂ ಪೊಲೀಸ್ ಪೇದೆ ಮೇಲೆ ಕ್ವಾರಂಟೈನ್‌ನಲ್ಲಿರುವವರು ಮುಗಿ ಬೀಳುತ್ತಿರುವ ವಿಷಯ ತಿಳಿದ ಶಾಸಕ ಸಿ.ಎನ್.ಬಾಲಕೃಷ್ಣ
ಸ್ಥಳಕ್ಕಾಗಮಿಸಿ ಕ್ವಾರಂಟೈನ್‌ನಲ್ಲಿ ಇರುವ ಎಲ್ಲರಿಗೂ ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್ ನೀಡಲಾಗುವುದು. ಪ್ರತ್ಯೇಕವಾಗಿ ಕೊಠಡಿ ವ್ಯವಸ್ಥೆ ಮಾಡಲಾಗುವುದು ದಯಮಾಡಿ ಹೊರ ಬಂದು ತೊಂದರೆ ನೀಡುವುದು ಬೇಡ ಎಂದು ತಿಳಿಸಿದ ಮೇಲೆ ಎಲ್ಲರೂ ಕೊಠಡಿ ಒಳಕ್ಕೆ ತೆರಳಿದರು.