Advertisement

ದೇಶಕ್ಕಾಗಿ ಬಲಿದಾನ ಮಾಡಿದವರ ಸ್ಮರಣೆ ಅಗತ್ಯ: ವಿನಯ ಹೆಗ್ಡೆ

01:00 AM Feb 01, 2019 | Harsha Rao |

ಉಳ್ಳಾಲ: ಯುವ ಸಮುದಾಯ ಜಾಗೃತರಾಗಿ ದೇಶಕ್ಕಾಗಿ ಬಲಿದಾನಗೈದವರ ಕುರಿತು ಒಂದು ದಿನವಾದರೂ ಸ್ಮರಿಸುವುದು ಅಗತ್ಯ ಎಂದು ನಿಟ್ಟೆ ವಿವಿ ಕುಲಾಧಿಪತಿ ಎನ್‌.ವಿನಯ ಹೆಗ್ಡೆ ಹೇಳಿದರು.
ದೇರಳಕಟ್ಟೆಯ ನಿಟ್ಟೆ ವಿ.ವಿ.ಯ ರಾ. ಸೇವಾ ಯೋಜನೆ ಘಟಕದ ವತಿಯಿಂದ ಕ್ಷೇಮ ಅಡಿಟೋರಿಯಂನಲ್ಲಿ ಬುಧವಾರ ಆಯೋಜಿಸಲಾದ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮರ ಸಂಬಂಧಿಕರಿಗೆ ಹಾಗೂ ನಿವೃತ್ತರಿಗೆ ಸಮ್ಮಾನ ನೆರವೇರಿಸಿ ಮಾತ ನಾಡಿದರು.

Advertisement

ಸಮ್ಮಾನ
ಭಾರತೀಯ ಸೇನೆಯಲ್ಲಿ ಕರ್ತವ್ಯ ಸಂದರ್ಭ ಹುತಾತ್ಮರಾದ ಬಜಪೆ ನಿವಾಸಿ ಹವಾಲ್ದಾರ್‌ ಗಿರೀಶ್‌ ಅವರ ಪತ್ನಿ ರೇಖಾ, ಪುತ್ರ ಗಗನ್‌, ಮಡಿಕೇರಿ ಬಲಂಬಿ ನಿವಾಸಿ ಲ್ಯಾನ್ಸ್‌ ನಾಯ್ಕ ಶಿವರಾಂ ಕೆ.ಪಿ. ಅವರ ಪತ್ನಿ ಗೀತಾ, ಪುತ್ರಿ ಪಲ್ಲವಿ ಹಾಗೂ ನೌಕಾಸೇನೆಯಿಂದ ನಿವೃತ್ತ ವಿಕ್ರಂ ದತ್ತಾ ಅವರನ್ನು ಸಮ್ಮಾ¾ನಿಸಲಾಯಿತು.

ದೇಶಭಕ್ತಿ ರೂಢಿಸಿಕೊಳ್ಳಿ
ಸಮ್ಮಾನ ಸ್ವೀಕರಿಸಿದ ನೌಕಾದಳದಿಂದ ನಿವೃತ್ತ ವಿಕ್ರಂ ದತ್ತಾ ಮಾತನಾಡಿ, ಪ್ರಾಮಾಣಿಕರಿಂದ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ. ಯುವ ಸಮುದಾಯ, ವಿದ್ಯಾರ್ಥಿಗಳು ದೇಶಭಕ್ತಿ ಹೆಚ್ಚಿಸಿಕೊಳ್ಳಬೇಕಿದೆ ಎಂದರು.
ನಿಟ್ಟೆ ವಿ.ವಿ. ಸಹ ಕುಲಾಧಿಪತಿ ಡಾ| ಎಂ. ಶಾಂತಾರಾಮ ಶೆಟ್ಟಿ, ಕುಲಪತಿ ಡಾ| ಸತೀಶ್‌ ಕುಮಾರ್‌ ಭಂಡಾರಿ ಹಾಗೂ ಕುಲಸಚಿವೆ ಡಾ| ಅಲ್ಕಾ ಕುಲಕರ್ಣಿ ಉಪಸ್ಥಿತರಿದ್ದರು. ಸಹ ಕುಲಪತಿ ಪ್ರೊ| ಎಂ.ಎಸ್‌. ಮೂಡಿತ್ತಾಯ ಸ್ವಾಗತಿಸಿದರು. ಡಾ| ಸುಮಲತಾ ಆರ್‌. ಶೆಟ್ಟಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next