Advertisement

Justice Santosh Hegde; ಅದಿರು ಕೇಸಲ್ಲಿ ಶಿಕ್ಷೆ ಸಮಾಧಾನ ತಂದಿದೆ, ಇತರರಿಗೂ ಶಿಕ್ಷೆಯಾಗಲಿ

01:56 AM Oct 27, 2024 | Team Udayavani |

ಬೆಂಗಳೂರು: ಬೇಲೆಕೇರಿ ಬಂದರಿನಿಂದ ಅಕ್ರಮ ಅದಿರು ಸಾಗಣೆ ಪ್ರಕರಣದಲ್ಲಿ ನ್ಯಾಯಾಲಯವು ಅಪರಾಧಿಗಳಿಗೆ ಶಿಕ್ಷೆ ವಿಧಿಸಿರುವುದು ನನ್ನ ಮನಸ್ಸಿಗೆ ಸಮಾಧಾನ ತಂದಿದೆ ಎಂದು ಮಾಜಿ ಲೋಕಾಯುಕ್ತ ನ್ಯಾ| ಸಂತೋಷ್‌ ಹೆಗ್ಡೆ ತಿಳಿಸಿದ್ದಾರೆ.

Advertisement

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಾಸಕ ಸತೀಶ್‌ ಸೈಲ್‌ ಸೇರಿ ಇತರ ಅಪರಾಧಿಗಳಿಗೆ ನ್ಯಾಯಾಲಯವು ಶನಿವಾರ ಶಿಕ್ಷೆ ವಿಧಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ “ಉದಯವಾಣಿ’ಗೆ ಪ್ರತಿ ಕ್ರಿಯೆ ನೀಡಿ, ನ್ಯಾಯಾ ಲಯವು ಅಪರಾಧಿಗಳಿಗೆ ಶಿಕ್ಷೆ ವಿಧಿಸಿರುವುದು ನನ್ನ ಮನಸ್ಸಿಗೆ ಸಮಾಧಾನ ತಂದಿದೆ. ಅಂದು ಲೋಕಾಯುಕ್ತದಲ್ಲಿ ನನ್ನ ಜತೆಗಿದ್ದ ಅಧಿಕಾರಿಗಳಿಗೂ ಅದೇ ಭಾವನೆ ಬರಬಹುದು ಎಂದೆನ್ನಿಸುತ್ತದೆ. ಬಹಳ ವರ್ಷಗಳ ಹಿಂದೆ ಕಷ್ಟಪಟ್ಟು ದೊಡ್ಡ ಅಧಿಕಾರಿಗಳು, ರಾಜಕಾರಣಿಗಳ ವಿರುದ್ಧ ವರದಿ ಕೊಟ್ಟಿದ್ದೇವೆ. ಈ ಪ್ರಕರಣದಲ್ಲಾದರೂ ಶಿಕ್ಷೆ ಆಗಿದೆ. ನಮ್ಮ ಕೆಲಸಕ್ಕೆ ಯಶಸ್ಸು ಸಿಕ್ಕಂತಾಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ತಪ್ಪಲ್ಲ. ತಡವಾದರೂ ಶಿಕ್ಷೆ ಆಗಿರುವುದು ಸಮಾಜಕ್ಕೆ ಒಳ್ಳೆಯ ಸಂದೇಶವಾಗಿದೆ ಎಂದು ತಿಳಿಸಿದ್ದಾರೆ.

ಒಂದು ದಿನಕ್ಕೆ ಲಕ್ಷಾಂತರ ಮೆಟ್ರಿಕ್‌ ಟನ್‌ ಗಣಿಗಾರಿಕೆ ಮಾಡಿ ಕೋಟ್ಯಂತರ ರೂ. ಅದಿರನ್ನು ರಫ್ತು ಮಾಡಿರ ಬಹುದು. ಇದರಿಂದ ಸರಕಾರಕ್ಕೆ ಎಷ್ಟೊಂದು ನಷ್ಟವಾಗಿರಬಹುದು. ಇದು ಯಾರಿಗೂ ಗೊತ್ತಿರಲಿಲ್ಲವೇ? ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next