Advertisement
ಸೋಮವಾರ ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮೇಯರ್ ಸಂಗೀತಾ ಪೋಳ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಗುತ್ತಿದ್ದಂತೆ ಮೇಯರ್ ಅವರು ನಿಯಮಿತವಾಗಿ ಸಭೆ ಕರೆಯುವುದಿಲ್ಲ. ಈಗ ಕೇವಲ ಸಣ್ಣ ವಿಷಯಕ್ಕೆ ಸಭೆ ಕರೆದಿರುವ ನಡೆ ಎಷ್ಟು ಸರಿ, ಸಾಮಾನ್ಯ ಸಭೆಯಲ್ಲಿ ನಗರದ ಸಮಗ್ರ ಸಮಸ್ಯೆಗಳ ಕುರಿತು ಚರ್ಚೆಗೆ ಅವಕಾಶ ನೀಡಬೇಕಿತ್ತು ಎಂದು ಸದಸ್ಯ ಗೋಪಾಲ ಘಟಕಾಂಬಳೆ, ಸಜ್ಜಾದೇಪೀರಾ ಮುಶ್ರೀಫ್, ಪ್ರಕಾಶ ಮಿರ್ಜಿ ಸೇರಿದಂತೆ ಇತರರು ಆಕ್ಷೇಪಿಸಿದರು.
ಹೆಚ್ಚಿನ ಸಮಯ ನುಂಗಿ ಹಾಕಿತು. 14ನೇ ಹಣಕಾಸು ಯೋಜನೆಯ ಅನುದಾನ ಮಾಸ್ಟರ್‌ಪ್ಲಾನ್ ಯೋಜನೆಗೆ
ಬಳಕೆ ಮಾಡುವುದು ಸೂಕ್ತ. ಇದಲ್ಲದೇ 100 ಕೋಟಿ ರೂ. ಮಾಸ್ಟರ್‌ಪ್ಲಾನ್‌ಗಾಗಿಯೇ ವಿಶೇಷ ಅನುದಾನ
ತರುತ್ತೇವೆ, ಯಾರೂ ಚಿಂತೆ ಮಾಡಬೇಡಿ ಎಂದು ಉಪ ಮೇಯರ್ ರಾಜೇಶ ದೇವಗಿರಿ, ಪರಶುರಾಂ
ರಜಪೂತ, ರಾಹುಲ್ ಜಾಧವ, ಮೊದಲಾದವರು ಒಪ್ಪಿಗೆ ಸೂಚಿಸಿ ಸಮರ್ಥನೆ ಮಾಡಿಕೊಂಡರು. ರಾಹುಲ್ ಜಾಧವ ಮಾತನಾಡಿ, ಮಾಸ್ಟರ್‌ಪ್ಲಾನ್ ಕಾಮಗಾರಿ ಮುಗಿಸಲು ತ್ವರಿ ಕ್ರಮ ಕೈಗೊಳ್ಳುವುದರಿಂದ
ನಗರ ನಾಗರಿಕರಿಗೆ ಅನುಕೂಲವಾಗಲಿದೆ. ನಗರದ ಅಭಿವೃದ್ಧಿಗೆ ಪಾಲಿಕೆ ಅನುದಾನ ಬಳಸಿದರೆ ತಪ್ಪೇನು
ಎಂದು ಸಮರ್ಥಿಸಿದರು.
Related Articles
Advertisement
ಮತ್ತೆ ಮೂರು ವರ್ಷಕ್ಕೆ ಟೆಂಡರ್ ಮುಂದುವರಿಸುವ ನಿರ್ಧಾರದ ಹಿಂದಿನ ಉದ್ದೇಶ, ಸಭೆಯಲ್ಲಿ ಇಂತ ನಿರ್ಣಯ ಕೈಗೊಡರೆ ಪಾಲಿಕೆಗೆ ಆರ್ಥಿಕ ನಷ್ಟ ಹಾಗೂ ಹಿನ್ನಡೆ ಆಗಲಿದೆ. ಭವಿಷ್ಯದಲ್ಲಿ ಕಿತ್ತುಹೋದ ಶೌಚಾಲಯದ ಚೇಂಬರ್ಅಳವಡಿಕೆಗೂ ಹಣ ಇಲ್ಲದ ದುಸ್ಥಿತಿ ಬಂದೀತು ಎಂದು ಆಕ್ಷೇಪಿಸಿದ ರವೀಂದ್ರ ಲೋಣಿ, ಸಭೆ ಭಹಿಷ್ಕರಿಸಿ ಹೊರ
ನಡೆದರು. ಸಂಡೇ ಬಜಾರ್ ಟೆಂಡರ್ ನೀಡುವ ಬದಲು ಪಾಲಿಕೆಯೇ ನೇರವಾಗಿ ವ್ಯಾಪಾರಿಗಳಿಂದ ಕಡಿಮೆ ಶುಲ್ಕ ಪಡೆಯಲು ಮುಂದಾಗಿ, ಅದಕ್ಕಾಗಿ ಓರ್ವ ಸಿಬ್ಬಂದಿಯನ್ನು ನೇಮಿಸಿಕೊಂಡರೆ ಪಾಲಿಕೆಗೆ ಆದಾಯವಾಗಲಿದೆ ಎಂದು ವಿಜಯಕುಮಾರ ಮಂಗಳವೇಡೆ ಸಲಹೆ ನೀಡಿದರು. ಒಂದೇ ವಿಷಯಕ್ಕೆ ಸಭೆ ಕರೆದಿರುವ ಮೇಯರ್ ಅವರು ಎಂದಾದರೂ ತಮ್ಮ ವಾರ್ಡ್‌ಗೆ ಭೇಟಿ ನೀಡಿ
ಸಾರ್ವಜನಿಕರ ಸಮಸ್ಯೆ ಆಲಿಸಿದ್ದಾರೆಯೇ ಎಂದು ಪ್ರಶ್ನಿಸಿದ ಪ್ರಮಾನಂದ ಬಿರಾದಾರ, ನಮ್ಮ ಬಡಾವಣೆ ನಿವಾಸಿಗಳ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡಲು ಸಾಧ್ಯವಾಗುತ್ತಿಲ್ಲ. ನಮ್ಮ ವಾರ್ಡ್‌ಗೆ ಭೇಟಿ ನೀಡುವಂತೆ ಹತ್ತಾರು ಬಾರಿ ಮಾಡಿಕೊಂಡ ಮನವಿಗೆ ಮೇಯರ್ ಸ್ಪಂದಿಸಿಲ್ಲ ಎಂದು ಆಕ್ಷೇಪಿಸಿ ಅಸಮಾಧಾನ ವ್ಯಕ್ತಪಡಿಸಿದರು. ನಗರದ ವಾರ್ಡ್‌ಗಳ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ನಿಮ್ಮ ವಾರ್ಡ್‌ಗೆ ಸಾಕಷ್ಟು ಅನುದಾನ ನೀಡಿ, ಅಭಿವೃದ್ಧಿ ಮಾಡಲಾಗುತ್ತಿದೆ. ಸಾಯಿಬಾಬಾ ಗುಡಿಯಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿ ಸಮಸ್ಯೆ ಆಲಿಸಿದ್ದೇನೆ ಎಂದು ಮೇಯರ್ ಸಮಜಾಯಿಸಿ ನೀಡಿದಾಗ, ದೇವರ ದರ್ಶನಕ್ಕೆ ನನ್ನ ವಾರ್ಡ್‌ಗೆ ಬರದೆ ಸಮಸ್ಯೆ
ಪರಿಹಾರಕ್ಕೆ ನನ್ನ ವಾರ್ಡ್‌ಗೆ ಬನ್ನಿ ಎಂದು ಕುಟಿಕದರು.