Advertisement
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖಾದರ್, ಕರೆಯ ಗಾತ್ರದಲ್ಲಿ ದೊಡ್ಡದಾಗಿರುವ ನರಿಂಗಾನ ಕಂಬಳ ಕೇವಲ ಎರಡು ವರ್ಷಗಳಲ್ಲೇ ಜಿಲ್ಲೆಯಲ್ಲಿ ನಡೆದ ಸುಮಾರು 24 ಕಂಬಳಗಳ ಪೈಕಿ ಮೂರನೇ ಅತಿ ಹೆಚ್ಚು ಕೋಣಗಳು ಭಾಗವಹಿಸಿದ ದಾಖಲೆ ಹೊಂದಿದೆ. ಫಜೀರಿನಲ್ಲಿ 25 ವರ್ಷ ಕಂಬಳ ನಡೆಸಿದ, ಕೋಣದ ಯಜಮಾನ ವೆಂಕಪ್ಪ ಕಾಜವ ಮಿತ್ತಕೋಡಿ ಗೌರವಾಧ್ಯಕ್ಷತೆಯಲ್ಲಿ ಹಾಗೂ ಅವರ ಪುತ್ರ ಜಿಲ್ಲಾ ಕಂಬಳ ಸಮಿತಿಯ ಉಪಾಧ್ಯಕ್ಷ ಪ್ರಶಾಂತ್ ಕಾಜವ ಮಿತ್ತಕೋಡಿ ಕಾರ್ಯಧ್ಯಕ್ಷತೆಯಲ್ಲಿ ಎರಡು ವರ್ಷ ನಡೆದ ಕಂಬಳ ಯಶಸ್ಸು ಕಂಡಿದೆ ಎಂದರು.
Related Articles
Advertisement
ನರಿಂಗಾನ ಗ್ರಾಮೋತ್ಸವಜ.13ರಂದು ಸ್ನೇಹ ಸಮ್ಮಿಲನ, ಪ್ರತಿಭಾ ಪುರಸ್ಕಾರ, ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ನೃತ್ಯ ವೈಭವ, ನಾನಾ ಸ್ಪರ್ಧೆಗಳ ಸಹಿತ ನರಿಂಗಾನ ಗ್ರಾಮೋತ್ಸವ ನಡೆಯಲಿದೆ ಎಂದು ಖಾದರ್ ಹೇಳಿದರು.ನರಿಂಗಾನ ಕಂಬಳ ಸಮಿತಿ ಅಧ್ಯಕ್ಷ ಪ್ರಶಾಂತ್ ಕಾಜವ ಮಿತ್ತಕೋಡಿ, ಪ್ರಮುಖರಾದ ಮಮತಾ ಡಿ. ಗಟ್ಟಿ, ನವಾಝ್ ನರಿಂಗಾನ ಮೊದಲಾದವರು ಉಪಸ್ಥಿತರಿದ್ದರು. ತುಳುವಿಗೆ ಸ್ಥಾನಮಾನ; ಸಿಎಂ ಜತೆ ಸಂವಾದ
ತುಳು ಭಾಷೆಗೆ ರಾಜ್ಯದ ಎರಡನೇ ಭಾಷೆ ಸ್ಥಾನ ನೀಡುವ ಕುರಿತು ಎಲ್ಲ ವರದಿ ತರಿಸಿಕೊಂಡಿದ್ದು, ಜಿಲ್ಲೆಯ ತುಳು ಸಾಹಿತಿಗಳು, ಮುಖಂಡರು ಹಾಗೂ ಪ್ರಮುಖರನ್ನು ಸೇರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಮಂಗಳೂರಿನಲ್ಲಿ ಸಂವಾದ ನಡೆಸಲಾಗುವುದು. ಬಳಿಕ ಅದಕ್ಕೆ ಪೂಕರವಾಗಿ ಮನವಿ ಸಲ್ಲಿಸಲಾಗುವುದು. ಮಂಗಳೂರು ಕ್ಷೇತ್ರಕ್ಕೆ ಒಂದು ಸಾವಿರ ಕೋಟಿ ರೂ.ಗಳ ವಿವಿಧ ಯೋಜನೆಗಳ ಶಿಲಾನ್ಯಾಸ ಶೀಘ್ರ ನಡೆಯಲಿದ್ದು, ಆಗ ಸಿಎಂ ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಯು.ಟಿ. ಖಾದರ್ ಹೇಳಿದರು. ನಕ್ಸಲರು ಶರಣಾದರೆ ತಪ್ಪೇನು?
ಕಾಡಿನಲ್ಲಿದ್ದ ನಕ್ಸಲರು ಶರಣಾಗತರಾಗಿ ಮುಖ್ಯವಾಹಿನಿಗೆ ಬಂದು ಒಳ್ಳೆಯ ಬದುಕು ನಡೆಸಿದರೆ ತಪ್ಪೇನು? ಹಿಂದೆ ದೇಶದ ಮಟ್ಟದಲ್ಲೇ ನಕ್ಸಲರ ಶರಣಾಗತಿ ನಡೆದಿತ್ತು. ರಕ್ತಪಾತ ಬಿಟ್ಟು ಯಾರಾದರೂ ಒಳ್ಳೆಯವರಾಗುವುದಾದರೆ ಅವರನ್ನು ಸಮಾಜವೂ ಸ್ವೀಕರಿಸಬೇಕು. ಕಾನೂನಾತ್ಮಕವಾಗಿ ಅವರನ್ನು ಸರಿಪಡಿಸಬೇಕು ಎಂದು ಖಾದರ್ ಪ್ರಶೆಯೊಂದಕ್ಕೆ ಪ್ರತಿಕ್ರಿಯಿಸಿದರು.