Advertisement

Hassan-Mangaluru ಹಳಿ ದ್ವಿಗುಣ: ಅಂತಿಮ ಸ್ಥಳ ಸರ್ವೇಗೆ ಟೆಂಡರ್‌

12:44 AM Jan 08, 2025 | Team Udayavani |

ಮಂಗಳೂರು: ಮೈಸೂರು ವಿಭಾಗದ ಹಾಸನ- ಮಂಗಳೂರು ನಡುವೆ 247 ಕಿ.ಮೀ. ರೈಲು ಹಳಿ ದ್ವಿಗುಣಗೊಳಿಸುವುದಕ್ಕಾಗಿ ಅಂತಿಮ ಸ್ಥಳ ಸರ್ವೇ ಕಾರ್ಯಕ್ಕೆ ಟೆಂಡರ್‌ ಕರೆಯಲಾಗಿದೆ. ಇದಕ್ಕಾಗಿ ಡಿಪಿಆರ್‌ ಸಜ್ಜುಗೊಳಿಸುವುದು, ಭೂತಾಂತ್ರಿಕ ಅಧ್ಯಯನ, ಸಿಗ್ನಲಿಂಗ್‌, ಎಲೆಕ್ಟ್ರಿ ಕಲ್‌ ಕೆಲಸಗಳು ಇತ್ಯಾದಿ ಬಗ್ಗೆ ಸರ್ವೇ ಕೈಗೊಳ್ಳಲಾಗುವುದು. ಘಾಟಿ ವಿಭಾಗದ 120 ಕಿ.ಮೀ. ಮತ್ತು ಹಾಸನ -ಸಕಲೇಶಪುರ ಹಾಗೂ ಸುಬ್ರಹ್ಮಣ್ಯ ರೋಡ್‌ – ಮಂಗಳೂರು ಜಂಕ್ಷನ್‌ ನಡು ವಣ 127 ಕಿ.ಮೀ. ಅಂತರದಲ್ಲಿ ಫ್ಲಾಟರ್‌ ಗ್ರೇಡಿಯಂಟ್‌ ಒದಗಿಸುವುದು ಇದರಲ್ಲಿ ಸೇರಿದೆ.

Advertisement

ಈ ಕುರಿತು ಸಂಸದ ಕ್ಯಾ| ಬ್ರಿಜೇಶ್‌ ಚೌಟ “ಎಕ್ಸ್‌’ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇದು ಮಂಗಳೂರು – ಬೆಂಗಳೂರು ನಡುವಿನ ರೈಲು ಸಂಪರ್ಕಕ್ಕೆ ಹೊಸ ದಿಶೆಯನ್ನು ನೀಡಲಿದ್ದು, ಜನರ ಪ್ರಯಾಣ ಮತ್ತು ಸರಕು ಸಾಗಾಟ ಇನ್ನಷ್ಟು ಸುಗಮಗೊಳಿಸಲಿದೆ ಎಂದು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next