Advertisement

Mandya; ಪತ್ರದಲ್ಲಿರುವ ವಿಚಾರದ ಬಗ್ಗೆ ತನಿಖೆ ನಡೆಯುತ್ತಿಲ್ಲ: ಎಚ್‌.ಡಿ.ಕುಮಾರಸ್ವಾಮಿ

08:25 PM Aug 28, 2023 | Team Udayavani |

ಮಂಡ್ಯ: ಕೃಷಿ ಅಧಿಕಾರಿಗಳು ರಾಜ್ಯಪಾಲರಿಗೆ ಬರೆದಿದ್ದರೆನ್ನಲಾದ ಪತ್ರ ಅಸಲಿಯೋ, ನಕಲಿಯೋ ಎಂಬ ಬಗ್ಗೆ ಮಾತ್ರ ತನಿಖೆ ನಡೆಯುತ್ತಿದೆ. ಆದರೆ ಅದರಲ್ಲಿರುವ ವಿಚಾರ ನಿಜವೋ, ಸುಳ್ಳೋ ಎಂಬುದರ ಬಗ್ಗೆ ತನಿಖೆ ನಡೆಯುತ್ತಿಲ್ಲ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿ ಸಚಿವರ ವಿರುದ್ಧ ಕೇಳಿ ಬಂದ ಪ್ರಕರಣದ ಹಿನ್ನೆಲೆ ಏನು? ನನ್ನ ಮೇಲೆ ಯಾಕೆ ಬೆಟ್ಟು ತೋರಿಸುತ್ತಾರೆ. ರಾಜ್ಯಪಾಲರಿಗೆ ಪತ್ರ ಬರೆದವರು ಕೆ.ಆರ್‌.ನಗರದ ಕೃಷಿ ಅ ಧಿಕಾರಿಗಳು. ಇದರಲ್ಲಿ ನನ್ನದು ಷಡ್ಯಂತ್ರ ಏನಿದೆ ಎಂದು ಪ್ರಶ್ನಿಸಿದರು.

ಯಾಕೆ ಈ ಪತ್ರದ ವಿಷಯ ಬಂತು, ಸುಮ್ಮನೆ ವಿಷಯ ಬರುತ್ತಾ? ಎಡಿ, ಜೆಡಿಗಳ ಬಳಿ ಕ್ಯಾಟಗರಿವೈಸ್‌ ರೇಟ್‌ ಫಿಕ್ಸ್‌ ಆಗಿದೆ. ಯಾವ ಅ ಧಿಕಾರಿಗಳು ಧೈರ್ಯವಾಗಿ ಹೇಳಲು ಸಾಧ್ಯವಿಲ್ಲ. ವರ್ಗಾವಣೆ ಡಿಮ್ಯಾಂಡ್‌ ಇದೆ. ದುಡ್ಡು ಕೊಟ್ಟಿದ್ದೀವಿ ಎಂದು ಯಾವ ಅಧಿಕಾರಿಯೂ ಹೇಳಲ್ಲ. ಅದ್ಯಾವುದೋ ನ್ಯೂಸ್‌ ಪೇಪರ್‌ ಹಿಡಿದು ಕುಮಾರಸ್ವಾಮಿ ಕಾಲದಲ್ಲಿ ರೇಟ್‌ ಫಿಕ್ಸ್‌ ಆಗಿತ್ತು ಅಂತಾರೆ. ನನಗೆ ಗಾಬರಿಯಾಯಿತು. ಆ ಪೇಪರ್‌ ಕಟಿಂಗ್‌ ನೋಡಿದರೆ ಅದರಲ್ಲಿ ಈ ಮಹಾನುಭಾವರದ್ದೆ ಇದೆ ಎಂದರು.

ಈಗ ಕೃಷಿ ಅಧಿಕಾರಿಗಳು ಬರೆದ ಪತ್ರ ವಿಚಾರ ತನಿಖೆ ಮಾಡಿದ್ದಾರೆ. ಇಬ್ಬರು ಕೃಷಿ ಅ ಧಿಕಾರಿಗಳನ್ನು ಅರೆಸ್ಟ್‌ ಮಾಡಿದ್ದಾರೆ. ಪತ್ರ ಅಸಲಿಯೋ, ನಕಲಿಯೋ ಒಂದು ಭಾಗ. ಅದಕ್ಕಿಂತ ಹೆಚ್ಚು ಪತ್ರದಲ್ಲಿರುವ ಸಾರಾಂಶ ಅಸಲಿಯೋ, ನಕಲಿಯೋ ತಿಳಿಯಬೇಕು. ಸರ್ಕಾರ ಈ ಬಗ್ಗೆ ತನಿಖೆ ಮಾಡಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next