Advertisement

Wimbledon; ವೊಂಡ್ರುಸೋವಾ ವಿಕ್ರಮ ;ಓನ್ಸ್‌  ಜೆಬ್ಯುರ್‌ಗೆ ಸತತ 2ನೇ ಫೈನಲ್‌ನಲ್ಲಿ  ಸೋಲು

11:57 PM Jul 15, 2023 | Team Udayavani |

ಲಂಡನ್‌: ಜೆಕ್‌ ಗಣ ರಾಜ್ಯದ ಅಚ್ಚರಿಯ ಎಡಗೈ ಆಟಗಾರ್ತಿ ಮಾರ್ಕೆಟಾ ವೊಂಡ್ರುಸೋವಾ ವಿಂಬಲ್ಡನ್‌ ವಿಕ್ರಮದೊಂದಿಗೆ ಮೊದಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯನ್ನೆತ್ತಿ ಸಂಭ್ರಮಿ ಸಿದರು. ಶನಿವಾರದ ಫೈನಲ್‌ನಲ್ಲಿ ಅವರು ಟ್ಯುನೀಶಿಯಾದ ಓನ್ಸ್‌ ಜೆಬ್ಯುರ್‌ ವಿರುದ್ಧ 6-4, 6-4 ಅಂತರದ ನೇರ ಸೆಟ್‌ಗಳ ಜಯ ಸಾಧಿಸಿದರು.

Advertisement

ವಿಂಬಲ್ಡನ್‌ ಪ್ರಶಸ್ತಿ ಗೆದ್ದ ಅತ್ಯಂತ ಕೆಳ ರ್‍ಯಾಂಕಿಂಗ್‌ ಆಟಗಾರ್ತಿ ಎಂಬ ಹೆಗ್ಗಳಿಕೆ 24 ವರ್ಷದ ವೊಂಡ್ರುಸೋವಾ ಅವರದು (42). ಹಾಗೆಯೇ ಕಳೆದ 60 ವರ್ಷಗಳ ಇತಿಹಾಸದಲ್ಲಿ “ಆಲ್‌ ಇಂಗ್ಲೆಂಡ್‌ ಕ್ಲಬ್‌’ನಲ್ಲಿ ಚಾಂಪಿಯನ್‌ ಆಗಿ ಮೂಡಿಬಂದ ಮೊದಲ ಶ್ರೇಯಾಂಕ ರಹಿತ ಆಟಗಾರ್ತಿಯೂ ಹೌದು.

ಇದು ವೊಂಡ್ರುಸೋವಾ ಅವರ 2ನೇ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಆಗಿದೆ. 2019ರ ಫ್ರೆಂಚ್‌ ಓಪನ್‌ ಫೈನಲ್‌ನಲ್ಲಿ ಅವರು ಆ್ಯಶ್ಲಿ ಬಾರ್ಟಿ ವಿರುದ್ಧ ಸೋಲನುಭವಿಸಿದ್ದರು.

ಓನ್ಸ್‌ ಜೆಬ್ಯುರ್‌ ಅವರಿಗೆ ಸತತ 2ನೇ ವಿಂಬಲ್ಡನ್‌ ಫೈನಲ್‌ನಲ್ಲೂ ದುರದೃಷ್ಟ ಬೆಂಬಿಡಲಿಲ್ಲ. ಕಳೆದ ವರ್ಷ ಎಲೆನಾ ರಿಬಾಕಿನಾ ವಿರುದ್ಧ ಎಡವಿದ್ದರು. ಹಾಗೆಯೇ 2022ರ ಯುಎಸ್‌ ಓಪನ್‌ ಪ್ರಶಸ್ತಿ ಸುತ್ತಿನಲ್ಲಿ ಇಗಾ ಸ್ವಿಯಾಟೆಕ್‌ಗೆ ಶರಣಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next